RCB: ಐಪಿಎಲ್‌ 2026 ಕ್ಲಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಆರ್‌ಸಿಬಿ ಗೂಡು ತೊರೆದ ಸ್ಟಾರ್ ಆಟಗಾರ

RCB Jacob Bethell: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಐಪಿಎಲ್ 2026ರ ಸೀಸನ್‌ ಆರಂಭದಿಂದಲೂ ಉತ್ತಮ ಪ್ರದರ್ಶನ ತೋರುವ ಮೂಲಕ ಪ್ಲೇಆಫ್‌ಗೆ ಲಗ್ಗೆ ಇಟ್ಟ ಮೊದಲ ತಂಡವಾಗಿದೆ. ಕ್ಲಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿಯು ಗುಜರಾತ್ ಟೈಟಾನ್ಸ್‌ ಅನ್ನು ಎದುರಿಸಲಿದೆ. ಇದಕ್ಕೂ ಮುನ್ನವೇ ಸ್ಟಾರ್ ಆಟಗಾರ ಜೇಕಬ್ ಬೆಥೆಲ್‌ ತಮ್ಮ ದೇಶಕ್ಕೆ ತೆರಳಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇ-ಆಫ್ ಪಂದ್ಯಗಳಿಗೂ ಮುನ್ನ ದೊಡ್ಡ ಹಿನ್ನಡೆಯಾಗಿದೆ. ತಂಡದ ಯುವ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ನಡದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು.

RCB Star Jacob Bethell Ruled Out of Indian Premier League 2026 Playoffs Due to Finger Injury

ಇಂಗ್ಲೆಂಡ್‌ಗೆ ತೆರಳಿದ ಜೇಕಬ್ ಬೆಥೆಲ್

ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಆರ್‌ಸಿಬಿಯ ಕೊನೆಯ ಲೀಗ್ ಪಂದ್ಯದಲ್ಲೂ ಗಾಯದ ಸಮಸ್ಯೆಯಿಂದ ಜೇಕಬ್ ಬೆಥೆಲ್ ಆಡಿರಲಿಲ್ಲ. ಇದೀಗ ಅವರು ಹೆಚ್ಚಿನ ಚಿಕಿತ್ಸೆಗಾಗಿ ಅವರು ಇಂಗ್ಲೆಂಡ್‌ಗೆ ಮರಳಲಿದ್ದಾರೆ. ಮೊದಲ ಕ್ವಾಲಿಫೈಯರ್‌ನಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ರಾಯಲ್‌ ಚಾಲೆಂಜರ್ಸ್‌ ವೆಂಗಳೂರು ತಂಡಕ್ಕೆ ಪ್ಲೇ-ಆಫ್‌ನಂತಹ ನಿರ್ಣಾಯಕ ಸಮಯದಲ್ಲಿ ಬೆಥೆಲ್ ಅಲಭ್ಯತೆ ದೊಡ್ಡ ಹಿನ್ನಡೆಯಾದಂತಾಗಿದೆ.

ಎಸ್‌ಆರ್‌ಎಚ್ ವಿರುದ್ಧದ ಪಂದ್ಯಕ್ಕೂ ಗೈರು

ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭಾರಿ ಸೋಲನ್ನು ಅನುಭವಿಸಿದರೂ ಸಹ ರಜತ್ ಪಟಿದಾರ್ ನಾಯಕತ್ವದ ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಪ್ಲೇ-ಆಫ್ ಪ್ರವೇಶಿಸಿದೆ. ಇನ್ನೂ ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ ಯುವ ಆಟಗಾರ ಬೆಥೆಲ್ ಅವರ ಬೆರಳಿಗೆ ಗಾಯವಾಗಿತ್ತು. ಆದ್ದರಿಂದ ನಂತರದ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅವರನ್ನು ಹೊರಗಡೆ ಉಳಿದಿದ್ದು, ಅವರ ಸ್ಥಾನವನ್ನು ವೆಂಕಟೇಶ್ ಅಯ್ಯರ್ ತುಂಬಿದ್ದರು.

ಕ್ವಾಲಿಫೈಯರ್ 1 ಪಂದ್ಯ ಯಾವಾಗ?

ಇನ್ನು ಮೇ 26ರಂದು ಧರ್ಮಶಾಲಾದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯ ಸೇರಿದಂತೆ ಮುಂದಿನ ಎಲ್ಲಾ ಪಂದ್ಯಗಳಿಗೆ ಜೇಕಬ್ ಬೆಥೆಲ್ ಅವರು ಇರುವುದಿಲ್ಲ. ಫಿಲ್ ಸಾಲ್ಟ್ ಗಾಯಗೊಂಡಿದ್ದ ಸಮಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಈ ಸೀಸನ್‌ನಲ್ಲಿ ಅವರು ಈವರೆಗೂ ಆಡಿದ 7 ಪಂದ್ಯಗಳಿಂದ 96 ರನ್ ಗಳಿಸಿದ್ದಾರೆ.

ಇದೀಗ ಬೆಥೆಲ್ ಅನುಪಸ್ಥಿತಿಯಲ್ಲಿ ಆರ್‌ಸಿಬಿ ತಂಡದ ಮ್ಯಾನೇಜ್‌ಮೆಂಟ್ ಮುಂದೆ ಎರಡು ಪ್ರಮುಖ ಆಯ್ಕೆಗಳಿವೆ. ಗಾಯದಿಂದ ಚೇತರಿಸಿಕೊಂಡಿರುವ ಸ್ಪೋಟಕ ಬ್ಯಾಟರ್ ಫಿಲ್ ಸಾಲ್ಟ್ ಈಗ ಸಂಪೂರ್ಣ ಫಿಟ್ ಆಗಿದ್ದು, ಪ್ಲೇ-ಆಫ್‌ನಲ್ಲಿ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಆರಂಭಿಕನಾಗಿ ಬಂದು 19 ಎಸೆತಗಳಲ್ಲಿ 44 ರನ್ ಚಚ್ಚಿದ್ದ ವೆಂಕಟೇಶ್ ಅಯ್ಯರ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳಲು ತಂಡ ಚಿಂತೆನೆ ನಡೆಸುತ್ತಿದೆ. ಒಟ್ಟಿನಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿಯು ತನ್ನ ಮುಂದಿರುವ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಪ್ಲೇಆಫ್‌ ಪ್ಲೇವೇಶಿಸಿದ ತಂಡಗಳು

* ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
* ಗುಜರಾತ್ ಟೈಟಾನ್ಸ್‌
* ರಾಜಸ್ಥಾನ್ ರಾಯಲ್ಸ್‌
* ಸನ್‌ರೈಸರ್ಸ್‌ ಹೈದರಾಬಾದ್

ಐಪಿಎಲ್‌ 2026ರ ಟೂರ್ನಿಯಿಂದ ಹೊರಬಿದ್ದ ತಂಡಗಳು

* ಪಂಜಾಬ್ ಕಿಂಗ್ಸ್
* ಕೊಲ್ಕತ್ತಾ ನೈಟ್‌ ರೈಡರ್ಸ್‌
* ಚೆನ್ನೈ ಸೂಪರ್ ಕಿಂಗ್ಸ್‌
* ಡೆಲ್ಲಿ ಕ್ಯಾಪಿಟಲ್ಸ್‌
* ಮುಂಬೈ ಇಂಡಿಯನ್ಸ್
* ಲಕ್ನೋ ಸೂಪರ್ ಜೈಂಟ್ಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+