ಸುಪ್ರೀಂ ಕೋರ್ಟ್‌ನ ನಕಲಿ ಆದೇಶದಡಿ ಬೆಂಗಳೂರು ಜೈಲಿಂದ ವ್ಯಕ್ತಿ ಬಿಡುಗಡೆ: 8 ವರ್ಷದ ಬಳಿಕ ಸತ್ಯ ಬಯಲು, ಆಗಿದ್ದೇನು?
ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ತೋರಿಸಿ ಬೆಂಗಳೂರು ಜೈಲಿಂದ ವ್ಯಕ್ತಿಯೊಬ್ಬರು ಬಿಡುಗಡೆ ಆಗಿ ಎಂಟು ವರ್ಷಗಳ ಬಳಿಕ ಅಸಲಿ ಸತ್ಯ ಬಯಲಾಗಿದೆ. ಕೋರ್ಟ್ ಆದೇಶ ನಕಲಿ ಎಂದು ಗೊತ್ತಾಗಿದೆ. ತೀರಾ ಅಪರೂಪದಲ್ಲೇ ಅಪರೂಪದ ಪ್ರಕರಣ ಇದಾಗಿದೆ. ಪೊಲೀಸರು ಪುನಃ ತನಿಖೆ ಆರಂಭಿಸಿದ್ದಾರೆ. ಅಸಲಿಗೆ ಎಂಟು ವರ್ಷದ ಹಿಂದೆ ಆಗಿದ್ದೇನು? ಸತ್ಯ ಬಯಲಾಗಿದ್ದೇಗೆ? ಇಲ್ಲಿದೆ ಮಾಹಿತಿ.
ಸುಮಾರು ಎಂಟು ವರ್ಷಗಳ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ, ಅಪರಾಧಿ ಶಂಕರ್.ಎ ಎಂಬಾತ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಜೈಲಿನಿಂದ ಬಿಡುಗಡೆ ಆಗಲು ಆತ ಸುಪ್ರೀಂ ಕೋರ್ಟ್ ಆದೇಶದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವನ್ನು ತೋರಿಸಿ ಅಕ್ರಮವಾಗಿ ಬಿಡುಗಡೆ ಆಗಿದ್ದಾನೆ ಎಂಬ ಪ್ರಕರಣ ಅಧಿಕಾರಿಗಳು ಸೇರಿದಂತೆ ರಾಜ್ಯವನ್ನು ದಿಗ್ಭ್ರಮೆಗೊಳಿಸಿದೆ. ಸದ್ಯ ಸುಪ್ರೀಂ ಕೋರ್ಟ್‌ನ ನಕಲಿ ದಾಖಲೆಗಳನ್ನು ರಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಅಪರಾಧಿ ಮತ್ತು ಇತರರ ವಿರುದ್ಧ ಜೈಲು ಅಧಿಕಾರಿಗಳು ಪ್ರಕರಣ ದಾಖಲಿದ್ದು, ತನಿಖೆ ಆರಂಭಿದರು.

2001ರಲ್ಲಿ ನಡೆದಿದ್ದ ಅಪರಾಧಿ ಕೃತ್ಯಗಳು, ಹಿನ್ನೆಲೆ ಹೀಗಿದೆ
2001ರಲ್ಲಿ ಅಪಹರಣ-ಸುಲಿಗೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಂಕರ್.ಎ ಮೇಲೆ ಐಪಿಸಿ ಸೆಕ್ಷನ್ 364 ಎ (ಸುಲಿಗೆಗಾಗಿ ಅಪಹರಣ) ಮತ್ತು 120 ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ವಿಚಾರಣೆ ನಡೆದು ನ್ಯಾಯಾಲಯದ ಆದೇಶದ ಪ್ರಕಾರ ಆತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಲು ಅಂದು ಕೋರ್ಟ್ ಆದೇಶ ಹೊರಡಿಸಿತ್ತು. ಶಿಕ್ಷೆ ಜೊತೆಗೆ ಅಪರಾಧಿಗೆ 5,000 ರೂಪಾಯಿ ದಂಡ ಸಹ ವಿಧಿಸಲಾಗಿತ್ತು. ಅಂದಿನಿಂದ ಆತ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.
8 ವರ್ಷಗಳಿಂದ ಜೈಲಿನಿಂದ ಹೊರಗಿದ್ದ ಅಪರಾಧಿ!
2018ರ ನವೆಂಬರ್ 3ರಂದು ಜೈಲು ಅಧಿಕಾರಿಗಳಿಗೆ ಒಂದು ಪತ್ರ ಬಂದಿತ್ತು. ಅಪಾರಾಧಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿದೆ. ಅದರಡಿ ಆದೇಶ ನೀಡಲಾಗಿದೆ. ಆದೇಶದಲ್ಲಿ ತಿಳಿಸಿದಂತೆ ಅಪರಾಧಿ ಒಟ್ಟು 10,000 ರೂಪಾಯಿ ದಂಡವನ್ನು ಪಾವತಿಸಿದ್ದರು ಮತ್ತು ಜೊತೆಗೆ ಡಿಸೆಂಬರ್ ಅಂತ್ಯಕ್ಕೆ ಆತ ಜೈಲಿನಿಂದ ಆತ ಅಕ್ರಮವಾಗಿ ಬಿಡುಗಡೆ ಆಗಿದ್ದ. ಈ ದಾಖಲೆಗಳು ಅಕ್ರಮ ಎಂಬುದು ಮೇಲ್ನೋಟಕ್ಕೆ ಜೈಲಾಧಿಕಾರಿಗಳಿಗೆ ತಿಳಿಯಲೇ ಇಲ್ಲ.
ಸುಮಾರು ಎಂಟು ವರ್ಷಗಳ ನಂತರವೇ ಶಂಕರ್ ಕೋರ್ಟ್ ಆದೇಶದ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಸಲ್ಲಿಸಿ ಜೈಲಿನಿಂದ ಬಿಡುಗಡೆ ಆಗಿದ್ದಾನೆ ಎಂಬ ದೂರು ಕೇಳಿ ಬಂದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಮಹಾನಿರ್ದೇಶಕರು ವಿಚಾರಣೆಗೆ ನಿರ್ದೇಶಿಸಿದರು. ಅದರಂತೆ ತನಿಖೆ ಆರಂಭಿಸಲಾಯಿತು. ಹೆಚ್ಚಿನ ಪರಿಶೀಲನೆಗೆ ದಾಖಲೆಗಳನ್ನು ಬೆಂಗಳೂರಿನ ದಕ್ಷಿಣ ವಲಯದ ಕಾರಾಗೃಹಗಳ ಉಪ ಮಹಾನಿರ್ದೇಶಕರಿಗೆ ಹಸ್ತಾಂತರಿಸಲಾಯಿತು.
ಅಪರಾಧಿ ಸೇರಿ ಸಹಾಯ ಮಾಡಿದವರಿಗೆ ಖಾಕಿ ಶೋಧ
ಬಿಡುಗಡೆಗಾಗಿ ಸಲ್ಲಿಸಲಾಗಿದ್ದ ದಾಖಲೆಗಳ ಆದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಜೈಲು ಇಲಾಖೆ ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿತು. 2018 ನವೆಂಬರ್ ನಲ್ಲಿ ಸಲ್ಲಿಕೆಯಾದ ಆದೇಶವು ನಕಲಿ ಎಂದು ಉನ್ನತ ನ್ಯಾಯಾಲಯದ ಅಧಿಕಾರಿಗಳು ಖಚಿತಪಡಿಸಿದರು. ಕೂಡಲೇ ಜೈಲು ಅಧಿಕಾರಿಗಳಿಗೆ ಕಾನೂನು ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಮಾತ್ರವಲ್ಲದೇ ಜೈಲಿನ ಒಳಗಿದ್ದ ಶಂಕರ್‍ಗೆ ಹೊರಗಿನಿಂದ ಹಲವರು ಸಹಾಯ ಮಾಡಿದ್ದಾರೆ. ಅವರ ವಿರುದ್ಧವು ದೂರು ದಾಖಲಿಸಲಾಗಿದ್ದು, ಅವರಿಗಾಗಿ ಖಾಕಿ ಶೋಧ ನಡೆಸುತ್ತಿದೆ ಎಂದು ವರದಿ ಆಗಿದೆ.
ಅಪರಾಧಿಯನ್ನು ಮತ್ತೆ ಬಂಧಿಸಲು ಹಾಗೂ ಅಪರಾಧಿ ಮೇಲೆ ಪಿತೂರಿ ಮತ್ತು ಕೋರ್ಟ್ ಆದೇಶದಂತೆ ನಕಲಿ ದಾಖಲೆ ತಯಾರಿಸುವಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಯತ್ನಗಳು ಮುಂದುವರಿದಿವೆ. ಒಟ್ಟಾರೆ ಜೈಲು ಆಡಳಿತ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚಿದ ಪ್ರಕರಣ ಇದಾಗಿದ್ದು, ಜೈಲಾಧಿಕಾರಿಗಳು ಅಗತ್ಯ ಬೇರೆ ಪ್ರಕರಣಗಳಲ್ಲೂ ಮುನ್ನೆಚ್ಚರಿಕೆ ವಹಿಸಬೇಕಿದೆ.













Click it and Unblock the Notifications