ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಟ್ರಂಪ್ ಟ್ರುಥ್ ಆ್ಯಪ್‌ನದ್ದೇ ಹವಾ

ವಾಷಿಂಗ್ಟನ್, ಫೆಬ್ರವರಿ 22: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿವೃದ್ಧಿಪಡಿಸಿರುವ ಟ್ರುಥ್ ಅಪ್ಲಿಕೇಷನ್ ಇದೀಗ ಹೆಚ್ಚು ಡೌನ್‌ಲೌಡ್ ಆಗಿರುವ ಅಪ್ಲಿಕೇಷನ್‌ಗಳ ಪಟ್ಟಿ ಸೇರಿದೆ.

ಈ ಸೋಷಿಯಲ್ ಮೀಡಿಯಾ ಆ್ಯಪ್ , ಅಮೆರಿಕದ ಆ್ಯಪಲ್ ಸ್ಟೋರ್‌ನಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ಅವರು ಈ ಹಿಂದೆ ಘೋಷಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಪ್ರಮುಖ ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳಿಗೆ ಸೆಡ್ಡು ಹೊಡೆದಿದ್ದಾರೆ ಎಂದು ಹೇಳಬಹುದು. ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾಗಳು ಡೊನಾಲ್ಡ್ ಟ್ರಂಪ್ ಅವರನ್ನು ತಮ್ಮ ವೇದಿಕೆಯಿಂದ ನಿಷೇಧಿಸಿದ್ದವು.

ಇದೀಗ ಅವರು ತಮ್ಮದೇ ಆದ ಸೋಷಿಯಲ್ ಮೀಡಿಯಾ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಿಗೆ ಮರಳುವ ಸಾಧ್ಯತೆಯೇ ಹೆಚ್ಚಾಗಿದೆ. ಅಮೆರಿಕದ ಅಧ್ಯಕ್ಷಗಾದಿಯಿಂದ ಇಳಿದ ಬಳಿಕ ಅವರು ಯಾವುದೇ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಅವರು ಸಕ್ರಿಯರಾಗಿಲ್ಲ.

Donald Trump’s Truth Social App Becomes Most Downloaded App On Apple App Store

ಮಧ್ಯರಾತ್ರಿ ಸ್ವಲ್ಪ ಮೊದಲು ಡೌನ್ಲೋಡ್ ಮಾಡಲು ಲಭ್ಯವಿರುವ 'ಟ್ರುಥ್ ಸೋಶಿಯಲ್', ಅಪ್ಲಿಕೇಶನ್ ಅನ್ನು ಮುಂಗಡ-ಕೋರಿಕೆ ಮಾಡಿದ ಬಳಕೆದಾರರಿಗೆ ಸೇರಿದ Apple ಸಾಧನಗಳಿಗೆ ಸ್ವಯಂಚಾಲಿತವಾಗಿ ಡೌನ್ಲೋಡ್ ಮಾಡಲಾಗಿದೆ. ಆದಾಗ್ಯೂ, ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್ (TMTG) ಡೆವಲಪರ್ಗಳು ಮಾರ್ಚ್ ಅಂತ್ಯದ ವೇಳೆಗೆ ಅಪ್ಲಿಕೇಶನ್ 'ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ' ಎಂದು ಹೇಳಿದ್ದಾರೆ.

ಟ್ರಂಪ್ ಈ ಹೊಸ ಆ್ಯಪ್ ನ ಬಗ್ಗೆ ಕಳೆದ ವರ್ಷದ ಅಕ್ಟೋಬರ್​​ನಲ್ಲೇ ಮಾಹಿತಿ ನೀಡಿದ್ದರು. ಫೇಸ್​ಬುಕ್ ಹಾಗೂ ಟ್ವಿಟರ್​ಗೆ ಎದುರಾಗಿ ಈ ಆ್ಯಪ್​ ತಯಾರಿಸುವುದಾಗಿ ಟ್ರಂಪ್ ತಿಳಿಸಿದ್ದರು. ಯುಎಸ್ ಕ್ಯಾಪಿಟೊಲ್ ಕಟ್ಟಡದ ಮೇಲಿನ ದಾಳಿ ಬಳಿಕ ಡೊನಾಲ್ಡ್ ಟ್ರಂಪ್ ಅವರನ್ನು ಫೇಸ್​ಬುಕ್, ಟ್ವಿಟರ್ ಸಾಮಾಜಿಕ ಜಾಲತಾಣಗಳಿಂದ ಬ್ಯಾನ್ ಮಾಡಲಾಗಿತ್ತು. ಹೀಗಾಗಿ ಪರ್ಯಾಯ ಆಪ್ ರಚನೆಗೆ ಟ್ರಂಪ್ ಮುಂದಾಗಿದ್ದರು.

ಆ್ಯಪ್​ನ್ನು ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ ನಿರ್ಮಾಣ ಮಾಡುತ್ತಿದೆ. ಈ ಅಪ್ಲಿಕೇಷನ್ ಓಪನ್ ಹಾಗೂ ಫ್ರೀ ಮಾತುಗಳಿಗೆ ಅವಕಾಶ ನೀಡುತ್ತದೆ ಎಂದು ಹೇಳಲಾಗಿದೆ.

ಯುಎಸ್​ನಲ್ಲಿ ಬಲಪಂಥೀಯ ಧೋರಣೆಯ ಅಪ್ಲಿಕೇಷನ್​ಗಳು ವೇಗಪಡೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಆ್ಯಪ್​ ಸಹ ಬಿಡುಗಡೆ ಆಗುತ್ತಿದೆ. ಯುಎಸ್​ನಲ್ಲಿ ಟ್ವಿಟರ್ ಬದಲಾಗಿ ಪಾರ್ಲರ್, ಗ್ಯಾಬ್ (Gab) ಮತ್ತು GETTR ಎಂಬ ಅಪ್ಲಿಕೇಷನ್​ಗಳು ಸ್ಥಾನ ಪಡೆದುಕೊಳ್ಳುತ್ತಿದೆ.

ಪಾರ್ಲರ್​ನಂತೆ ಟ್ರಂಪ್​ನ ಹೊಸ ಸಾಮಾಜಿಕ ಜಾಲತಾಣ ಬಹಳಷ್ಟು ಮಂದಿ ಟ್ರಂಪ್ ಬೆಂಬಲಿಗರನ್ನು ಸೆಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಟ್ರಂಪ್ 2024 ರಲ್ಲಿ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರುಥ್ ಸೋಷಿಯಲ್ ಟ್ರಂಪ್ ತನ್ನ ಬೆಂಬಲಿಗರೊಂದಿಗೆ ಸಂವಾದಿಸಲು ಬಳಸುವ ಅಧಿಕೃತ ಆಪ್ ಆಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ.

ಈ ಸೋಷಿಯಲ್ ಮೀಡಿಯಾ ಆವೃತ್ತಿಯ ಇತಿಹಾಸವನ್ನು ವಿವರಿಸುತ್ತಾ, ಟ್ರುಥ್ ಸೋಶಿಯಲ್ನ ಆ್ಯಪ್ಸ್ಟೋರ್ ಪುಟವು ಆವೃತ್ತಿ 1.0 ಒಂದು ದಿನದ ಹಿಂದೆ ಲಭ್ಯವಿದೆ ಎಂದು ತೋರಿಸಿದೆ ಎಂದು ರಾಯಿಟರ್ಸ್ ವರದಿಯಲ್ಲಿ ತಿಳಿಸಲಾಗಿದೆ. ಪುಟದ ಪ್ರಕಾರ, ಪ್ರಸ್ತುತ ಆವೃತ್ತಿ, 1.0.1, ಪುಟದ ಪ್ರಕಾರ "ದೋಷ ಪರಿಹಾರಗಳನ್ನು" ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+