ಅಮೆರಿಕದ ವೈದ್ಯರಿಂದ ಭಾರತ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಮಾಹಿತಿ ನೀಡುವ ಮ್ಯಾಪ್ ಅಭಿವೃದ್ಧಿ

ನ್ಯೂಯಾರ್ಕ್‌, ಜೂನ್ 02: ಭಾರತದಲ್ಲಿನ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಕುರಿತು ಮಾಹಿತಿ ನೀಡುವ ರಿಯಲ್ ಟೈಮ್ ಮ್ಯಾಪ್ ಒಂದನ್ನು ಅಮೆರಿಕದಲ್ಲಿರುವ ಭಾರತ ಮೂಲದ ವೈದ್ಯರು ಅಭಿವೃದ್ಧಿಪಡಿಸಿದ್ದಾರೆ.

'ಪ್ರಾಜೆಕ್ಟ್ ಮದದ್‌' ಕಾರ್ಯಕ್ರಮದಡಿಯಲ್ಲಿ 'madadmaps.com' ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಈ ಮ್ಯಾಪ್‌ ಮೂಲಕ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಬಗ್ಗೆ ನೈಜ ಮಾಹಿತಿಯನ್ನು ಪಡೆಯಬಹುದಾಗಿದೆ' ಎಂದು ವಾಷಿಂಗ್ಟನ್‌ ಮೂಲದ ಮದದ್‌ ಮ್ಯಾಪ್ಸ್‌'ನ ಮುಖ್ಯ ವಿನ್ಯಾಸಕಾರ ಡಾ.ರಾಜೇಶ್‌ ಅನುಮೊಲು ಅವರು ತಿಳಿಸಿದರು.

ಮದದ್ ಎಂದರೆ ನೆರವು ಎಂಬ ಅರ್ಥ ಬರುತ್ತದೆ. ಸೋಂಕಿತರಿಗೆ ನೆರವಾಗುವ ಉದ್ದೇಶದಿಂದಲೇ ಈ ಮ್ಯಾಪ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಲಾಗಿದೆ.

Doctors In US Launch Unique Real-Time Map Showing Vacant Beds For Covid-19 Patients In India

ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ವೈದ್ಯರು ಮತ್ತು ವೃತ್ತಿಪರರ ಗುಂಪೊಂದು ಈ ಹಾಸಿಗೆ ಲಭ್ಯತೆ ತೋರಿಸುವ ನಕ್ಷೆಯನ್ನು ಅಭಿವೃದ್ಧಿ ಪಡಿಸಿದ್ದು, ಆಸ್ಪತ್ರೆಯ ಹಾಸಿಗೆಗಳನ್ನು ನೈಜ-ಸಮಯದ ನವೀಕರಣಗಳೊಂದಿಗೆ ತೋರಿಸುವ ಆನ್‌ಲೈನ್ ನಕ್ಷೆಯನ್ನು ಬಿಡುಗಡೆ ಮಾಡಿದೆ.

ಇದರಿಂದಾಗಿ ಸೋಂಕತರು ಮತ್ತು ಅವರ ಸಂಬಂಧಿಕರು ಹಾಸಿಗೆ ಲಭ್ಯತೆ ಕುರಿತು ಸ್ಪಷ್ಟ ಮಾಹಿತಿ ಪಡೆಯಬಹುದು. ಇದು ರೋಗಿಗಳಿಗೆ ನಿರ್ಣಾಯಕ ಸಂದರ್ಭದಲ್ಲಿ ನೆರವಿಗೆ ಬರುತ್ತದೆ ಎಂದು ಹೇಳಲಾಗಿದೆ.

ಈ ಮದದ್ ಮ್ಯಾಪ್ ನಲ್ಲಿ ಆಸ್ಪತ್ರೆಯ ಹೆಸರು, ವಿಳಾಸ, ಐಸಿಯು ಹಾಸಿಗೆ, ವೆಂಟಿಲೇಟರ್‌ ಲಭ್ಯತೆ, ಆಮ್ಲಜನಕ ಪೂರೈಕೆ, ಆಸ್ಪತ್ರೆಯ ದೂರವಾಣಿ ಸಂಖ್ಯೆ, ಆಸ್ಪತ್ರೆಗೆ ಹೋಗುವ ಮಾರ್ಗಗಳನ್ನು ಈ ಮ್ಯಾಪ್‌ ತೋರಿಸುತ್ತದೆ ಎಂದು ತಂಡ ಹೇಳಿಕೊಂಡಿದೆ.

ಭಾರತ ಸರ್ಕಾರ ಮತ್ತು ಇತರೆ ಹೂಡಿಕೆದಾರರೊಂದಿಗೆ ಈ ಮ್ಯಾಪ್‌ ಅನ್ನು ಸ್ವಾಧೀನ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಿದ್ದೇವೆ. ಈ ಮ್ಯಾಪ್‌ ಅನ್ನು ಕೋವಿನ್‌ ಅಥವಾ ಆರೋಗ್ಯಸೇತು ಆ್ಯಪ್‌ನಲ್ಲಿ ಸೇರ್ಪಡೆ ಮಾಡಿದರೆ, ದೇಶದ ಹಲವು ಜನರನ್ನು ತಲುಪಬಹುದು. ಇದರಿಂದಾಗಿ ಸೋಂಕಿತರ ಸಂಕಷ್ಟ ಕೊಂಚವಾದರೂ ತಪ್ಪುವ ಭರವಸೆ ತಮಗಿದೆ ಎಂದು ಅವರು ಹೇಳಿದ್ದಾರೆ.

ಪ್ರಾಜೆಕ್ಟ್ ಮದದ್ 15 ಭಾರತೀಯ ಮತ್ತು ಭಾರತೀಯ ವಲಸೆ ವೈದ್ಯರು, ಕೋವಿಡ್-19 ತಜ್ಞರು ಮತ್ತು 12 ವೃತ್ತಿಪರರ ಸ್ವಯಂಪ್ರೇರಿತ ತಂಡದಿಂದ ಸಿದ್ಧವಾಗಿದ್ದು, ಇದರೊಂದಿಗೆ ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮತ್ತು ನೋಂದಾಯಿತ ವೈದ್ಯಕೀಯ ವೈದ್ಯರ ಸರಿಯಾದ ಶಿಕ್ಷಣ ಮತ್ತು ತರಬೇತಿ ಎಂಬ ಧ್ಯೇಯದೊಂದಿಗೆ ರಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+