ಡೆಲ್ಟಾ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ
ವಾಷಿಂಗ್ಟನ್, ಆಗಸ್ಟ್ 10: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಉಲ್ಬಣಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಕೊರೊನಾ ವೈರಸ್ ಡೆಲ್ಟಾ ರೂಪಾಂತರಿಯಿಂದಾಗಿ ಅಮೆರಿಕದಲ್ಲಿ ಸೋಂಕಿಗೀಡಾಗುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಫ್ಲೋರಿಡಾದಲ್ಲಿ ಒಂದೇ ದಿನ 28,317 ಪ್ರಕರಣಗಳು ವರದಿಯಾಗಿವೆ, ಫ್ಲೋರಿಡಾದಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆಯೂ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.
ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ.40ರಷ್ಟು ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ನೀಡಿರುವ ದಾಖಲೆಗಳ ಪ್ರಕಾರ, ಸಂಪೂರ್ಣವಾಗಿ ಲಸಿಕೆ ಡೋಸ್ ಪಡೆದುಕೊಂಡಿರುವ ವ್ಯಕ್ತಿಗಳು, ಲಸಿಕೆ ಪಡೆದುಕೊಳ್ಳದ ಜನರಷ್ಟೇ ಪ್ರಮಾಣದಲ್ಲಿ ಡೆಲ್ಟಾ ಪ್ರಭೇದದ ವೈರಸ್ ಹರಡುತ್ತಾರೆ ಎಂದು ವರದಿ ತಿಳಿಸಿದೆ.
ಡೆಲ್ಟಾ ತಳಿ ತಗುಲಿದ ವ್ಯಕ್ತಿಗಳು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಅವರು ಲಸಿಕೆ ಪಡೆಯದ ಜನರಷ್ಟೇ ಪ್ರಮಾಣದಲ್ಲಿ ಮೂಗು ಹಾಗೂ ಗಂಟಲಿನಲ್ಲಿ ಸಾಗಿಸುತ್ತಾರೆ. ಹೀಗಾಗಿ ಅದರ ಹರಡುವಿಕೆ ಅಪಾಯಕಾರಿಯಾಗಿದೆ ಎಂದು ಸಿಡಿಸಿ ನಿರ್ದೇಶಕಿ ಡಾ. ರೋಚೆಲ್ಲೆ ಪಿ ವಾಲೆನ್ಸ್ಕಿ ತಿಳಿಸಿದ್ದಾರೆ.
ಡೆಲ್ಟಾ ತಳಿ ಹೆಚ್ಚು ಪ್ರಸಾರ ಸಾಮರ್ಥ್ಯ ಹೊಂದಿದೆ. ಇದು ಮೆರ್ಸ್, ಸಾರ್ಸ್, ಎಬೋಲಾ, ಸಾಮಾನ್ಯ ಶೀತ, ವಿಷಮ ಶೀತ ಮತ್ತು ಸ್ಮಾಲ್‌ಪಾಕ್ಸ್‌ನಂತಹ ಕಾಯಿಲೆಗಳಿಗೆ ಕಾರಣವಾಗುವ ವೈರಸ್‌ಗಿಂತಲೂ ಹೆಚ್ಚು ಪ್ರಸರಣವಾಗುತ್ತದೆ. ಚಿಕನ್‌ಪಾಕ್ಸ್‌ಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವರದಿ ಹೇಳಿದೆ.
ಈ ಜೆನೋಮ್ ಸೀಕ್ವೆನ್ಸಿಂಗ್ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಸುಮಾರು 77 ಪ್ರತಿಶತದಷ್ಟು ಸೋಂಕು ಡೆಲ್ಟಾ (B.1.617.2) ರೂಪಾಂತರದಿಂದ ಉಂಟಾಗಿವೆ. 1089ರಲ್ಲಿ 1413 ಕೊರೊನಾ ಪ್ರಕರಣಗಳು ಡೆಲ್ಟಾ ರೂಪಾಂತರದ್ದಾಗಿವೆ.
ಡೆಲ್ಟಾ ಹೊರತಾಗಿ 159 ಪ್ರಕರಣಗಳಲ್ಲಿ ಕಪ್ಪಾ ರೂಪಾಂತರ, 155 ಪ್ರಕರಣಗಳಲ್ಲಿ ಆಲ್ಫಾ ರೂಪಾಂತರ, ಏಳರಲ್ಲಿ ಬೆಟಾ ರೂಪಾಂತರ, ಮೂರರಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪತ್ತೆಯಾಗಿದೆ.
ಕರ್ನಾಟಕದಲ್ಲಿ ದಾಖಲಾದ 29.05 ಲಕ್ಷ ಪಾಸಿಟಿವ್ ಪ್ರಕರಣಗಳಲ್ಲಿ ಸುಮಾರು 10 ಪ್ರತಿಶತದಷ್ಟು ಮಕ್ಕಳು ಸೋಂಕಿಗೆ ಒಳಗಾಗಿದ್ದು, 0-19 ವಯಸ್ಸಿನವರಾಗಿದ್ದಾರೆ ಹಾಗೂ ಅವರಲ್ಲಿ ಮರಣ ಪ್ರಮಾಣವು ಶೇ 0.1ರಷ್ಟಿದೆ ಎಂದು ಪರೀಕ್ಷೆ ತಿಳಿಸಿದೆ.
ಕೋವಿಡ್ 19ನ ರೂಪಾಂತರ ತಳಿ ಎನಿಸಿಕೊಂಡಿರುವ ಡೆಲ್ಟಾ B.1.617 ದೇಶದಲ್ಲಿ ಆತಂಕವನ್ನು ಹೆಚ್ಚು ಮಾಡುತ್ತಿದೆ. ಈ ರೂಪಾಂತರಿ ಕಾಣಿಸಿಕೊಂಡಿರುವ ವ್ಯಕ್ತಿಗಳಲ್ಲಿ ಗಂಭೀರ ಸ್ವರೂಪದ ಲಕ್ಷಣಗಳು ಗೋಚರಿಸಿವೆ.
ಡೆಲ್ಟಾ ತಳಿ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದೆ, ರಕ್ತ ಹೆಪ್ಪುಗಟ್ಟುವುದು, ಶ್ರವಣದೋಷ, ಗ್ಯಾಸ್ಟ್ರಿಕ್, ಇನ್ನೂ ಕೆಲಸವರಿಗೆ ಗ್ಯಾಂಗ್ರಿನ್‌ಕೂಡ ಉಂಟಾಗಬಹುದು ಎಂದು ಹೇಳಲಾಗಿದೆ.
ಅಲ್ಫಾ, ಬೀಟಾ, ಗಾಮಾ ರೂಪಾಂತರಿ ದಕ್ಷಿಣ ಆಫ್ರಿಕಾ, ಬ್ರೆಜಿಲ್‌ನಲ್ಲಿ ಕಾಣಸಿಕೊಂಡಿರುವ ತಳಿಯಾಗಿದೆ. ಕೆಲವು ರೋಗಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತಿದ್ದು, ಇದರಿಂದ ಹಾನಿಗೊಳಗಾದ ಕೋಶ ಸತ್ತು ಗ್ಯಾಂಗ್ರಿನ್‌ಗೆ ಕಾರಣವಾಗುತ್ತಿದೆ ಎಂದು ಮುಂಬೈನ ಹೃದ್ರೋಗ ತಜ್ಞ ಗಣೇಶ್ ಮಾನುಧಾನೆ ಮಾಹಿತಿ ನೀಡಿದ್ದಾರೆ.












Click it and Unblock the Notifications