ಅಫ್ಘಾನ್‌, ಕೋವಿಡ್‌ ಸುದ್ದಿ ನಡುವೆ ಬೈಡೆನ್‌ ರೇಟಿಂಗ್ಸ್‌ ಡೌನ್‌

ವಾಷಿಂಗ್ಟನ್‌, ಆ. 19: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಅಧಿಕಾರ ಸ್ವೀಕಾರ ಮಾಡಿದ ಸುಮಾರು ಎಂಟು ತಿಂಗಳ ಬಳಿಕ ಮೊದಲ ಬಾರಿಗೆ ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ರ ಅಪ್ರುವಲ್‌ ರೇಟಿಂಗ್ಸ್‌ (ಅನುಮೋದನೆ ಶೇಕಡಾಂಶ) ಶೇ. 50 ಕ್ಕೂ ಕೆಳಕ್ಕೆ ಕುಸಿತ ಕಂಡಿದೆ. ಬುಧವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಸುಮಾರು ಶೇಕಡ 7 ರಷ್ಟು ಅಪ್ರುವಲ್‌ ರೇಟಿಂಗ್ಸ್‌ ಕಡಿಮೆಯಾಗಿದ್ದು, ಇದು ಅತೀ ಕಡಿಮೆ ರೇಟಿಂಗ್ಸ್‌ ಆಗಿದೆ.

ಅಫ್ಘಾನಿಸ್ತಾನದಿಂದ ಯುಎಸ್‌ ಸೇನೆಯನ್ನು ಒಮ್ಮೆಲೇ ಹಿಂಪಡೆದ ಕಾರಣ ಅಫ್ಘಾನಿಸ್ತಾನದಲ್ಲಿ ಉಂಟಾದ ಎಲ್ಲಾ ಅವಾಂತರಗಳ ಹಿನ್ನೆಲೆ ಹಾಗೂ ಯುಎಸ್‌ನಲ್ಲಿ ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ವಿಫಕವಾದ ಹಿನ್ನೆಲೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಪ್ರುವಲ್‌ ರೇಟಿಂಗ್ಸ್‌ ತೀರಾ ಇಳಿಕೆ ಕಂಡಿದೆ ಎಂದು ಹೇಳಲಾಗಿದೆ.

ಸೋಮವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಅಪ್ರುವಲ್‌ ರೇಟಿಂಗ್ಸ್‌ 49.9 ಶೇಕಡಕ್ಕೆ ಇಳಿಕೆ ಕಂಡಿದೆ. ಬಳಿಕ ಈ ರೇಟಿಂಗ್ಸ್‌ಗಳು 49.3 ಶೇಕಡಕ್ಕೆ ಇಳಿಕೆ ಕಂಡಿದೆ ಎಂದು ಫೀವ್‌ ಥರ್ಟಿ ಏಟ್‌ ಪೋಲಿಂಗ್‌ಗಳು ತಿಳಿಸಿದೆ. ಹಾಗೆಯೇ ಆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಅಪ್ರುವಲ್‌ ರೇಟಿಂಗ್ಸ್‌ 49.6 ಕ್ಕೆ ಇಳಿದಿದೆ ಎಂದು ರಿಯಲ್‌ ಕ್ಲಿಯರ್‍ ಪೊಲಿಟಿಕ್ಸ್‌ ವರದಿ ಮಾಡಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ವಿರುದ್ದದ ರೇಟಿಂಗ್ಸ್‌ 44.5 ಶೇಕಡ ಇದೆ ಎಂದು ಫೀವ್‌ ಥರ್ಟಿ ಏಟ್‌ ಪೋಲಿಂಗ್‌ಗಳು ಉಲ್ಲೇಖ ಮಾಡಿದರೆ, ಜೋ ಬೈಡೆನ್‌ರ ವಿರುದ್ದದ ರೇಟಿಂಗ್ಸ್‌ 47.2 ಶೇಕಡ ಇದೆ ಎಂದು ಫೀವ್‌ ಥರ್ಟಿ ಏಟ್‌ ಪೋಲಿಂಗ್‌ಗಳು ಹೇಳಿದೆ.

Covid, Afghanistan news: US President Biden’s approval ratings dip below 50 Per cent

ಆದರೆ ಇದೇ ಸಂದರ್ಭದಲ್ಲಿ ಫೀವ್‌ ಥರ್ಟಿ ಏಟ್‌ ಸರ್ವೇ ಪೋಲಿಂಗ್‌ಗಳು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದವರ ರೇಟಿಂಗ್ಸ್‌ಗಳಿಗಿಂತ ಪ್ರಸ್ತುತ ಅಮೆರಿಕ ಅಧ್ಯಕ್ಷರಾಗಿರುವ ಜೋ ಬೈಡೆನ್‌ ರೇಟಿಂಗ್‌ಗಳು ಹೆಚ್ಚಿದೆ ಎಂದು ಹೇಳುತ್ತದೆ. ಇನ್ನು ತನ್ನ ಅಧಿಕಾರವಧಿಯ 211 ನೇ ದಿನದಂದು ಈ ಹಿಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಶ್ರೇಯಾಂಕ 37.8 ಶೇಕಡ ಇತ್ತು ಎಂದು ಹೇಳಲಾಗಿದೆ. ಹಾಗೆಯೇ ಅದಕ್ಕೂ ಹಿಂದಿನ ಅಧ್ಯಕ್ಷ ಬರಾಕ್‌ ಒಬಾಮರ ಶ್ರೇಯಾಂಕವು 52 ಶೇಕಡ ಇತ್ತು ಎಂದು ವರದಿ ತಿಳಿಸಿದೆ. ಇನ್ನು ಆಡಳಿತವಧಿಯಲ್ಲಿ ಜಾರ್ಜ್ ಡಬ್ಲ್ಯೂ ಬುರ್ಷ್ ಅನುಮೋದಿತ ಶ್ರೇಯಾಂಕ, 52.3 ಶೇಕಡ ಇತ್ತು ಎಂದು ವರದಿಯು ಹೇಳುತ್ತದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರೇಟಿಂಗ್ಸ್‌ ಕುಸಿಯುತ್ತಿರುವುದು ಏಕೆ?

ಜೋ ಬೈಡೆನ್‌ರ ಕ್ಷೀಣಿಸುತ್ತಿರುವ ರೇಟಿಂಗ್‌ನ ಹಿಂದಿನ ಅಂಶಗಳನ್ನು ವಿಶ್ಲೇಷಣೆ ಮಾಡಿದ ಫೀವ್‌ ಥರ್ಟಿ ಏಟ್‌ ಸರ್ವೇ ಪೋಲಿಂಗ್‌ ಅಫ್ಘಾನಿಸ್ತಾನದಿಂದ ಯುಎಸ್‌ ಸೇನೆಯನ್ನು ಹಿಂದಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ದಾಳಿ ನಡೆಸಿರುವ ಹಿನ್ನೆಲೆ ಅಫ್ಘಾನಿಸ್ತಾನದ ಎಲ್ಲಾ ಬೆಳವಣಿಗೆಯ ದೃಷ್ಟಿಯಿಂದ ಜೋ ಬೈಡೆನ್‌ರ ರೇಟಿಂಗ್‌ ಕುಸಿತ ಕಂಡಿದೆ ಎಂದು ಹೇಳುವುದು ಸರಿಯಲ್ಲ. ಇಂತಹ ನಿರ್ಧಾರ ತೆಗೆದು ಕೊಳ್ಳುವುದು ಅತೀ ಶೀಘ್ರವಾಗಿದೆ ಎಂದು ಫೀವ್‌ ಥರ್ಟಿ ಏಟ್‌ ಸರ್ವೇ ಪೋಲಿಂಗ್‌ ಸರ್ವೆ ಹೇಳಿದೆ. ಆದರೆ "ಕೊರೊನಾ ವೈರಸ್‌ ಸಾಂಕ್ರಾಮಿಕದ ನಿರ್ವಹಣೆ ಕಾರಣದಿಂದಾಗಿ ಈ ರೇಟಿಗ್ಸ್‌ಗಳು ಕಡಿಮೆ ಆಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ, ಎಂದು ಕೂಡಾ ಇದೇ ಸಂದರ್ಭದಲ್ಲಿ ಫೀವ್‌ ಥರ್ಟಿ ಏಟ್‌ ಸರ್ವೇ ಪೋಲಿಂಗ್‌ ಸರ್ವೆ ತಿಳಿಸಿದೆ.

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ಅಫ್ಘಾನ್‌ನಿಂದ ಸೇನಾ ವಾಪಸ್ ನಿರ್ಧಾರಕ್ಕೆ ಬದ್ಧನಾಗಿ ನಿಂತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿದ್ದರು. ಹಾಗೆಯೇ ನಾಯಕತ್ವವನ್ನು ತಾಲಿಬಾನ್‌ಗೆ ಬಿಟ್ಟುಕೊಟ್ಟ ಅಫ್ಘಾನ್‌ ಸರ್ಕಾರವನ್ನು ಟೀಕೆ ಮಾಡಿದ್ದರು. ಹಾಗೆಯೇ "ಅಫ್ಘಾನಿಸ್ತಾನವನ್ನು ನಂಬಿ ನಮ್ಮ ಸೈನಿಕರನ್ನು ಬಲಿ ಕೊಡಲು ನಾವು ಸಿದ್ದರಿಲ್ಲ," ಎಂದು ಸ್ಪಷ್ಟಪಡಿಸಿದ್ದರು.

(ಒನ್‌ ಇಂಡಿಯಾ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+