ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದ ವಿಶ್ವಸಂಸ್ಥೆ

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 28: ಭಾರತಕ್ಕೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ಉಪವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.

ಕನಿಷ್ಠ 17 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ಪತ್ತೆ:WHO ಕನಿಷ್ಠ 17 ದೇಶಗಳಲ್ಲಿ ಭಾರತದ ರೂಪಾಂತರಿ ಕೊರೊನಾ ಪತ್ತೆ:WHO

ನಿರ್ದಿವಾದ ನೆರವಿಗಾಗಿ ಈ ವರೆಗೆ ಬೇಡಿಕೆ ಬಂದಿಲ್ಲ, ಯಾವುದೇ ಪರಿಹಾರ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ನಾವು ಭಾರತಕ್ಕೆ ಕಳುಹಿಸಿಲ್ಲ, ಆದರೆ ಬೇಡಿಕೆ ಬಂದ ತಕ್ಷಣ ಸ್ಪಂದಿಸಲು ಸಿದ್ಧವಾಗಿದ್ದೇವೆ ಎಂದರು.

COVID-19: United Nations Offered Assistance Of Its Integrated Supply Chain To India

ಅಭಾರತದ ವಿವಿಧ ಹಂತ ಅಧಿಕಾರಿಗಳೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದೇವೆ, ನ್ಯಾಉಯಾರ್ಕ್ ಹಾಗೂ ಭಾರತದಲ್ಲಿರುವ ಸಂಬಂಧಪಟ್ಟ ಪ್ರತಿನಿಧಿಗಳೊಂದಿಗೂ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ಸಂಸ್ಥೆಯ ಸಿಬ್ಬಂದಿಯ ಆರೋಗ್ಯ ಕಾಪಾಡುವ ಜವಾಬ್ದಾರಿಯನ್ನು ನಾವೇ ತೆಗೆದುಕೊಂಡಿದ್ದೇವೆ. ಈಗಾಗಲೇ ಕೋವಿಡ್ ಪಿಡುಗಿನಿಂದ ತತ್ತರಿಸಿರುವ ಭಾರತದ ಆರೋಗ್ಯ ಕ್ಷೇತ್ರದ ಮೇಲೆ ಮತ್ತಷ್ಟು ಒತ್ತಡ ಹೇರಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಭಾರತದ ರೂಪಾಂತರಿ ಕೊರೊನಾ ಸೋಂಕು ವಿಶ್ವದ 17ಕ್ಕೂ ಅಧಿಕ ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಈಗಾಗಲೇ ಕೆನಡಾ, ಆಸ್ಟ್ರೇಲಿಯಾ ಸೇರಿ ಹಲವು ರಾಷ್ಟ್ರಗಳು ಭಾರತದಿಂದ ಬರುವ ಪ್ರಯಾಣಿಕ ವಿಮಾನಗಳಿಗೆ ನಿರ್ಬಂಧ ಹೇರಿವೆ.ಈಗಾಗಲೇ ಅನೇಕ ದೇಶಗಳಲ್ಲಿ ರೂಪಾಂತರಿ ಕೊರೊನಾ ಸೋಂಕು ಹರಡುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೋವಿಡ್-19 ನ ಬಿ.1.617 ಕೊರೊನಾ ರೂಪಾಂತರಿ ಮೊದಲಿಗೆ ಭಾರತದಲ್ಲಿ ಪತ್ತೆಯಾದ ನಂತರ ನಿನ್ನೆಯ ಹೊತ್ತಿಗೆ ಕನಿಷ್ಠ 17 ದೇಶಗಳಲ್ಲಿ 1,200 ಕ್ಕೂ ಹೆಚ್ಚು ಅನುಕ್ರಮಗಳಲ್ಲಿ ಪತ್ತೆಯಾಗಿದೆ. ಇದು ಬೇರೆ ರೂಪಾಂತರಿ ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ವೇಗವಾಗಿ ಹರಡುತ್ತಿದೆ. ಅವುಗಳಲ್ಲಿ ಅತಿ ಹೆಚ್ಚು ಭಾರತ, ಇಂಗ್ಲೆಂಡ್, ಅಮೆರಿಕ ಮತ್ತು ಸಿಂಗಾಪುರಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಕುರಿತ ವರದಿಯಲ್ಲಿ ತಿಳಿಸಿದೆ.

English summary
As India battles a crippling surge in COVID-19 infections and deaths, the United Nations has offered the assistance of its integrated supply chain and is “willing to help” in whatever way it can, a spokesperson for UN Secretary-General Antonio Guterres has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X