ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಅಮೆರಿಕ ಚುನಾವಣಾ ಫಲಿತಾಂಶ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 09: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶವು ಚೀನಾ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

Recommended Video

China ಹೊಸ Railway ಮಾರ್ಗ ಭಾರತದ ತೀರ ಹತ್ತಿರದಲ್ಲಿ ಹಾದು ಹೋಗುತ್ತಿದೆಯೇಯಾ | Oneindia Kannada

ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಚೀನಾ-ಅಮೆರಿಕ ಸಂಬಂಧ ತೀವ್ರ ಹದಗೆಟ್ಟಿತ್ತು. ಮುಂದಿನ ಅಧ್ಯಕ್ಷ ಜೋ ಬೈಡನ್ ಅವಧಿಯಲ್ಲಿ ಸಂಬಂಧ ಸುಧಾರಿಸಬಹುದು ಹಾಗೂ ಚೀನಾ ವಿರೋಧ ನೀತಿಗಳು ಬದಲಾಗಬಹುದು ನಿರೀಕ್ಷೆ ಎಲ್ಲರ ಮನದಲ್ಲಿದೆ.

ಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆ ಸೋತರೂ ಟ್ರಂಪ್ ಬಿಂದಾಸ್, ಮುಂದುವರಿದ ಬೈಡನ್ ಸಂಭ್ರಮಾಚರಣೆ

ಹೀಗಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆದಿದೆ.

Chinese Social Media Abuzz With Joe Bidens Election Triumph

ಈ ಚರ್ಚೆ ನೋಡಿ ಚೀನೀಯರಿಗೆ ಅಲ್ಪ ಮೊತ್ತದ ಮುಜುಗರ ಸೃಷ್ಟಿಸುವಂತಾಗದೆ. ಶಾಂಘೈ ಮೇಯರ್ ಯಾರು ಎಂದು ಗೊತ್ತಿಲ್ಲದವರೂ ಕೂಡ ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ಹಿಂಬಾಲಿಸುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.

''ಚುನಾವಣೆಯಲ್ಲಿ ಬೈಡನ್ ಅಧಿಕಾರ ಸ್ವೀಕರಿಸಿದ ಬಳಿಕ ಸಾಕಷ್ಟು ಸವಾಲುಗಳು ಎದುರಾಗಲಿವೆ, ಟ್ರಂಪ್ ಅವರನ್ನು ವೈಟ್‌ಹೌಸ್‌ನಿಂದ ಹೊರಹಾಕುವುದು ಅವರ ಮೊದಲ ಸವಾಲು''.

ಅಮೆರಿಕದ ಜನರು, ವ್ಯವಸ್ಥೆ ಬದಲಾವಣೆಗೆ ಮುಂದಾಗಿದ್ದಾರೆ. ಟ್ರಂಪ್ ಆಡಳಿತ ಹಳಿ ತಪ್ಪುತ್ತಿರುವುದು ಗೊತ್ತಾಗುತ್ತಿದ್ದಂತೆ ರೈಲ್ವೆ ಪೈಲಟ್‌ನ್ನೆ ಬದಲಿಸಿದ್ದಾರೆಎಂದು ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದು ಸಾಕಷ್ಟು ಪೋಸ್ಟ್‌ಗಳು ಬೈಡನ್ ಪರವಾಗಿ ಹಾಗೂ ಚೀನಾಗೆ ಇದರಿಂದ ಲಾಭವಾಗಲಿದೆ ಎನ್ನುವ ಅರ್ಥ ಬರುವ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಕೆಲವರು ಇದನ್ನು ಯಾವುದೇ ಬಲಾವಣೆಯ ನಿರೀಕ್ಷೆ ಇಲ್ಲ ಎನ್ನುವ ರೀತಿಯಲ್ಲೂ ಹೇಳಿದ್ದಾರೆ.

ಬೈಡನ್ ಏನೋ ಆಯ್ಕೆಯಾಗಿದ್ದಾರೆ ಆದರೆ ಚೀನಾದ ಪರವಾಗಿದ್ದಾರೆ ಎನ್ನುವುದು ಸೂಕ್ತವಲ್ಲ, ಕಾದು ನೋಡಿ ಎಂದು ಎಚ್ಚರಿಸಿದವರೂ ಇದ್ದಾರೆ.ಟ್ರಂಪ್ ಅವಧಿಯಲ್ಲಿ ಚೀನಾವಸ್ತುಗಳ ನಿಷೇಧ, ಚೀನಾ ಉದ್ಯಮದ ಮೇಲೆ ನಿರ್ಬಂಧ ಸೇರಿ ಸಾಕಷ್ಟು ಚೀನಾ ವಿರೋಧಿ ನೀತಿಗಳನ್ನು ಪ್ರಕಟಿಸಿದ್ದರು.

ಇದರಿಂದ ಜಾಗತಿಕ ವೇದಿಕೆಯಲ್ಲಿ ಅಮೆರಿಕ-ಚೀನಾ ವಾಣಿಜ್ಯ ಸಮರ ಆಂಭವಾಗಿತ್ತು. ಬೈಡನ್ ಈ ವಿಷಯದಲ್ಲಿ ಯಾವ ಕ್ರಮ ತೆಗೆದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ವಿಶೇಷವಾಗಿ ಚೀನಿಯರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

English summary
News about the victory of Joe Biden in the recent US presidential elections, saw China's tightly controlled social media platforms buzzing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X