• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಸಿಕೆ ಸಂಶೋಧನೆ ಹ್ಯಾಕ್: ಅಮೆರಿಕ ಆರೋಪಕ್ಕೆ ಚೀನಾ ಹೇಳಿದ್ದೇನು?

|

ನ್ಯೂಯಾರ್ಕ್, ಮೇ 12: ಇಡೀ ವಿಶ್ವವೇ ಕೊವಿಡ್ 19 ರೋಗದಿಂದ ಬಳಲುತ್ತಿದೆ. ಅಮೆರಿಕದ ತಜ್ಞರು ಲಸಿಕೆ ಸಂಶೋಧನೆಗೆ ಹೆಚ್ಚು ಒತ್ತುಕೊಟ್ಟು ರಾತ್ರಿ ಹಗಲೆನ್ನದೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಮೆರಿಕದಲ್ಲಿ ಈಗಗಲೇ ಕೊರೊನಾ ವೈರಸ್‌ಗೆ 70 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಲಸಿಕೆ ಸಂಶೋಧನೆಯೂ ಕೂಡ ಅನಿವಾರ್ಯವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಬಂತು ಮತ್ತೊಂದು ಎಚ್ಚರಿಕೆ ಸಂದೇಶ

ಆದರೆ ಅಮೆರಿಕದ ಈ ಕೆಲಸಕ್ಕೆ ಚೀನಾ ಅಡ್ಡಗಾಲು ಹಾಕುತ್ತಿದೆ, ಲಸಿಕೆ ಸಂಶೋಧನೆಗೆ ಚೀನಾ ಹ್ಯಾಕರ್ಸ್ ಕನ್ನ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಪೊಲೀಸರು ನೀಡಿದ ಮಾಹಿತಿ ಏನು?

ಪೊಲೀಸರು ನೀಡಿದ ಮಾಹಿತಿ ಏನು?

ಅಮೆರಿಕದ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ಪೈಪೋಟಿಗೆ ಬಿದ್ದವರಂತೆ ಸಂಶೋಧನೆಯಲ್ಲಿ ತೊಡಗಿವೆ. ಆದರೆ, ಈ ಮಾಹಿತಿಯನ್ನು ಕದಿಯಲು ಚೀನಾ ಹ್ಯಾಕರ್‌ಗಳು ಯತ್ನಿಸುತ್ತಿದ್ದು, ಎಚ್ಚರಿಕೆಯಿಂದ ಇರುವಂತೆ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಅಮೆರಿಕದ ವಾದವನ್ನು ತಳ್ಳಿ ಹಾಕಿ ಚೀನಾ

ಅಮೆರಿಕದ ವಾದವನ್ನು ತಳ್ಳಿ ಹಾಕಿ ಚೀನಾ

ಅಮೆರಿಕ ಪೊಲೀಸರ ವಾದವನ್ನು ಚೀನಾ ತಳ್ಳಿ ಹಾಕಿದೆ. ಯಾವುದೇ ರೀತಿಯ ಸೈಬರ್ ದಾಳಿಯನ್ನು ಚೀನಾ ಕೂಡ ವಿರೋಧಿಸುತ್ತದೆ. ಸದ್ಯ ಕೊರೊನಾ ಲಸಿಕೆ ಸಂಶೋಧನೆಯಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ . ಹೀಗಾಗಿ ಸುಳ್ಳು ಸುದ್ದಿಗಳ ಮೂಲಕ ಚೀನಾವನ್ನು ಗುರಿಯಾಗಿಸಲಾಗುತ್ತಿದೆ ಎಂದು ಚೀನಾ ವಿದೇಶಾಂಗ ವಕ್ತಾರ ಜಾಹೋ ಲಿಜಿಯಾನ್ ತಿಳಿಸಿದ್ದಾರೆ.

ಪೊಲೀಸರು ಅಧಿಕೃತ ಮಾಹಿತಿ ಹೊರಡಿಸಲಿದ್ದಾರೆ

ಪೊಲೀಸರು ಅಧಿಕೃತ ಮಾಹಿತಿ ಹೊರಡಿಸಲಿದ್ದಾರೆ

ಕೊರೊನಾ ಚಿಕಿತ್ಸೆ ಹಾಗೂ ಪರೀಕ್ಷೆ ನಡೆಸಿರುವ ಮಾಹಿತಿಗೂ ಕನ್ನ ಹಾಕುತ್ತಿದ್ದಾರೆ. ಈ ಹ್ಯಾಕರ್‌ಗಳು ಚೀನಾ ಸರ್ಕಾರಕ್ಕೆ ಸಂಬಂಧಿಸಿದವರಾಗಿದ್ದಾರೆ. ಈ ಕುರಿತ ಎಚ್ಚರಿಕೆಯನ್ನು ಕೆಲ ದಿನಗಳಲ್ಲಿಯೇ ಪೊಲೀಸರು ಅಧಿಕೃತವಾಗಿ ಹೊರಡಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕ ಹಾಗೂ ಬ್ರಿಟನ್ ಕಳವಳ

ಅಮೆರಿಕ ಹಾಗೂ ಬ್ರಿಟನ್ ಕಳವಳ

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ವೈದ್ಯಕೀ ಸಂಶೋಧನೆ ಹಾಗೂ ಆರೋಗ್ಯ ಕ್ಷೇತ್ರದ ಸಂಸ್ಥೆಗಳ ಮೇಲೆ ಹೆಚ್ಚುತ್ತಿರುವ ಸೈಬರ್ ದಾಳಿಯ ಬಗ್ಗೆ ಅಮೆರಿಕ, ಬ್ರಿಟನ್ ಕಳವಳ ವ್ಯಕ್ತಪಡಿಸಿದ್ದವು.

English summary
The US Federal Bureau of Investigation and cybersecurity experts believe Chinese hackers are trying to steal research on developing a vaccine against coronavirus, two newspapers reported on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X