• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಾಗತಿಕ ಬಳಕೆಗೆ ಚೀನಾ ಕೊರೊನಾ ಲಸಿಕೆ: ವಿಶ್ವ ಆರೋಗ್ಯ ಸಂಸ್ಥೆ ಜತೆ ಮಾತುಕತೆ

|

ವಾಷಿಂಗ್ಟನ್, ಅಕ್ಟೋಬರ್ 06: ಚೀನಾವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಕೆಯಾಗುವಂತೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಚೀನಾದೊಂದಿಗೆ ಮಾತುಕತೆ ನಡೆಸುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಈ ವಿಷಯ ತಿಳಿಸಿದ್ದಾರೆ. ಚೀನಾ ತನ್ನ ಲಸಿಕೆಗಳನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಜತೆ ಪ್ರಾಥಮಿಕ ಚರ್ಚೆ ನಡೆಸಿದೆ ಎಂದು ಹೇಳಿದರು.

ನವೆಂಬರ್ ವೇಳೆಗೆ ಚೀನಾದ ಕೊರೊನಾ ಲಸಿಕೆ ಲಭ್ಯ

ಈ ಲಸಿಕೆಗಳ ಗುಣಮಟ್ಟ ಮತ್ತು ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪಟ್ಟಿ ಮಾಡಲಾಗುತ್ತದೆ.ನಂತರ ಪರವಾನಗಿದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಚೀನಾದಲ್ಲಿ ಅಂತಿಮ ಪ್ರಯೋಗದಲ್ಲಿ ಕನಿಷ್ಠ ನಾಲ್ಕು ಕೊರೊನಾ ಲಸಿಕೆಗಳಿವೆ. ಎರಡನ್ನು ನ್ಯಾಷನಲ್ ಬಯೋಟೆಕ್ ಗ್ರೂಪ್ ಅಭಿವೃದ್ಧಿಪಡಿಸಿದೆ. ಮತ್ತು ಉಳಿದ ಎರಡನ್ನು ಸಿನೋವಾಕ್ ಬಯೋಟೆಕ್ ಮತ್ತು ಕ್ಯಾನ್ಸಿನೋ ಬಯೋಲಾಜಿಕ್ಸ್ ಅಭಿವೃದ್ಧಿಪಡಿಸಿದೆ.

ಲಸಿಕೆಯನ್ನು ಪಾಕಿಸ್ತಾನ, ಬ್ರೆಜಿಲ್, ರಷ್ಯಾ, ಇಂಡೋನೇಷ್ಯಾದಲ್ಲಿ ಪ್ರಯೋಗಿಸಲಾಗಿದೆ. ಕೆಲವು ರಾಷ್ಟ್ರಗಳಲ್ಲಿ ಇನ್ನೂ ಕ್ಲಿನಿಕಲ್ ಪ್ರಯೋಗ ಮುಗಿಯದ ಕಾರಣ ಲಸಿಕೆಯನ್ನು ಒಪ್ಪಿಕೊಳ್ಳುವುದು ಹೇಗೆ ಎಂದು ಪ್ರಶ್ನೆಯನ್ನಿಟ್ಟಿವೆ.

ರಷ್ಯಾದ ಕೊರೊನಾ ಲಸಿಕೆ ಸ್ಪುಟ್ನಿಕ್ V ಯನ್ನು ಭಾರತದ ರೆಡ್ಡೀಸ್ ಲ್ಯಾಬೊರೇಟರಿಯಲ್ಲಿ ಪ್ರಯೋಗಿಸಲಾಗುತ್ತಿದೆ.

   RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

   English summary
   A World Health Organisation official has said China is in talks to have its locally produced Covid-19 vaccines assessed by the WHO to make them available for international use.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X