ಅಮೆರಿಕಾದಲ್ಲಿ ಕೊವಿಡ್-19 ನಿಂದ ಪ್ರಾಣ ಬಿಟ್ಟವರಿಗೆ ಇದೆಂಥಾ ಗೌರವ?

ವಾಶಿಂಗ್ಟನ್, ಮೇ.22: ನೊವೆಲ್ ಕೊರೊನಾ ವೈರಸ್ ಸೋಂಕಿಗೆ ಸಿಕ್ಕು ಪ್ರಾಣ ಬಿಟ್ಟ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ(ಯುಎಸ್ಎ)ದ ಪ್ರಜೆಗಳಿಗೆ ಡೊನಾಲ್ಡ್ ಟ್ರಂಪ್ ವಿಶೇಷ ಗೌರವ ಸಲ್ಲಿಸಲು ಮುಂದಾಗಿದ್ದಾರೆ.

ಅಮೆರಿಕಾದಲ್ಲಿರುವ ಎಲ್ಲ ಸಂಯುಕ್ತ ಕಚೇರಿಗಳು ಹಾಗೂ ರಾಷ್ಟ್ರೀಯ ಸ್ಮಾರಕಗಳ ಮೇಲೆ ಹಾರಾಡುವ ರಾಷ್ಟ್ರ ಬಾವುಟವನ್ನು ಅರ್ಧಕ್ಕೆ ಇಳಿಸಲಾಗುತ್ತದೆ. ದೇಶಾದ್ಯಂತ ಮುಂದಿನ ಮೂರು ದಿನಗಳ ಕಾಲ ರಾಷ್ಟ್ರಧ್ವಜವು ಅರ್ಧಕ್ಕಿಳಿದು ಹಾರಾಟ ನಡೆಸಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವು ನೀಡಿರುವ ಅಂಕಿ ಅಂಶಗಳ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 15,75,064 ಮಂದಿಗೆ ಕೊರೊನಾ ವೈರಸ್ ಸೋಂಕಿತರಿದ್ದು, ದೇಶದಲ್ಲಿ ಈವರೆಗೂ 95,591 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

American President Ordered Flags To Fly At Half-Staff To Honor Coronavirus Victims

ಮಿಲಿಟರಿಗೆ ಗೌರವ ಸಲ್ಲಿಸಲು ಬಾವುಟದ ಅರ್ಧ ಹಾರಾಟ:

ಕಳೆದ ಮೇ.18ರ ಸೋಮವಾರ ಕೂಡಾ ಅಮೆರಿಕಾದ ಸಂಯುಕ್ತ ಕಟ್ಟಡಗಳು ಮತ್ತು ರಾಷ್ಟ್ರೀಯ ಸ್ಮಾರಕಗಳ ಮೇಲಿನ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಲಾಗಿತ್ತು. ಆ ಮೂಲದ ಕೊರೊನಾ ವೈರಸ್ ನಿಂದ ದೇಶದ ಪ್ರಜೆಗಳನ್ನು ರಕ್ಷಿಸಲು ಹೋರಾಟ ನಡೆಸುತ್ತಿರುವ ಹಾಗೂ ದೇಶಕ್ಕಾಗಿ ಪ್ರಾಣ ಬಿಟ್ಟರುವ ಮಿಲಿಟರಿ ಪಡೆಯ ಸಿಬ್ಬಂದಿಗೆ ಗೌರವ ಅರ್ಪಿಸಲಾಗಿತ್ತು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+