ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 3 ರಾಜ್ಯಗಳಲ್ಲಿ ಗೆದ್ದವರೇ ಅಮೆರಿಕದ ಬಾಸ್, ಹೆಚ್ಚಾಯ್ತು ಟೆನ್ಷನ್..!

|
Google Oneindia Kannada News

ಜಗತ್ತಿನ ಕಣ್ಣು ಅಮೆರಿಕದ ಮೇಲೆ ನೆಟ್ಟಿದ್ದರೆ, ಅಮೆರಿಕನ್ನರ ಕಣ್ಣು ಮಾತ್ರ ಪೆನ್ಸಿಲ್ವೇನಿಯಾ, ಜಾರ್ಜಿಯಾ ಮತ್ತು ಆರಿಜೋನಾ ಮೇಲೆ ನೆಟ್ಟಿದೆ. ಏಕೆಂದರೆ ಸದ್ಯದ ಸ್ಥಿತಿಯಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷರನ್ನು ನಿರ್ಧರಿಸುವ ಶಕ್ತಿ ಈ ರಾಜ್ಯಗಳಿಗೆ ಮಾತ್ರ ಉಳಿದಿದೆ. ಈಗಾಗಲೇ ಬೈಡನ್ ಗೆಲವಿನ ಸಮೀಪದಲ್ಲಿದ್ದಾರೆ. ಹಾಗಂತಾ ಗೆದ್ದು ಬಿಟ್ಟರು ಎಂದಲ್ಲ. ಬೈಡನ್ ಗೆಲುವಿಗೆ ಸನಿಹವಿದ್ದರೂ ನಿರ್ಣಾಯಕ ರಾಜ್ಯಗಳಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.

ಅದರಲ್ಲೂ 20 ಎಲೆಕ್ಟೊರಾಲ್ ವೋಟ್ ಇರುವ ಪೆನ್ಸಿಲ್ವೇನಿಯಾ, 16 ಎಲೆಕ್ಟೊರಾಲ್ ವೋಟ್ ಹೊಂದಿರುವ ಜಾರ್ಜಿಯಾ ಹಾಗೂ 11 ಎಲೆಕ್ಟೊರಾಲ್ ಮತಗಳಿರುವ ಆರಿಜೋನಾ 2020ರ ಅಧ್ಯಕ್ಷೀಯ ಚುನಾವಣೆಯ ವಿಜೇತರನ್ನು ಘೋಷಿಸಲಿವೆ. ಈ 3 ರಾಜ್ಯಗಳ ಜೊತೆಯಲ್ಲಿ ನೆವಾಡ ಕೂಡ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯವಾಗಿದೆ. ಒಟ್ಟು 4 ರಾಜ್ಯಗಳ ಪೈಕಿ ಯಾವುದಾದರೂ ಎರಡಲ್ಲಿ ಬೈಡನ್ ಗೆದ್ದರೂ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗೋದು ಪಕ್ಕಾ.

120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ120 ವರ್ಷದ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನ

ಅಕಸ್ಮಾತ್ ಜಾದೂ ನಡೆದು, ಈ ಎಲ್ಲಾ ರಾಜ್ಯಗಳಲ್ಲಿ ಟ್ರಂಪ್ ಗೆದ್ದುಬಿಟ್ಟರೆ ಅಲ್ಲಿಗೆ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆ. 46ನೇ ಅಧ್ಯಕ್ಷರ ಆಯ್ಕೆಯ ಪ್ರಸಂಗವೇ ಬರುವುದಿಲ್ಲ. ಇದೇ ಕಾರಣಕ್ಕೆ ಇಡೀ ಜಗತ್ತಿನ ಕಣ್ಣು ಅಮೆರಿಕದ ಮೇಲೆ ನೆಟ್ಟಿದ್ದರೆ, ಅಮೆರಿಕನ್ನರ ಕಣ್ಣು ಮಾತ್ರ ಪೆನ್ಸಿಲ್ವೇನಿಯಾ, ಜಾರ್ಜಿಯಾ, ಆರಿಜೋನಾ ಹಾಗೂ ನೆವಾಡ ಮೇಲೆ ಕೇಂದ್ರಿಕೃತವಾಗಿದೆ.

ಟ್ರಂಪ್ ಗೆಲುವು ಕಷ್ಟ ಕಷ್ಟ

ಟ್ರಂಪ್ ಗೆಲುವು ಕಷ್ಟ ಕಷ್ಟ

ಸದ್ಯದ ಮಾಹಿತಿಗಳ ಪ್ರಕಾರ ಟ್ರಂಪ್ ಜಾರ್ಜಿಯಾ, ಆರಿಜೋನಾ ಹಾಗೂ ನೆವಾಡದಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ. ಈ 3 ರಾಜ್ಯಗಳಲ್ಲಿ ಟ್ರಂಪ್ ಪುಟಿದೆದ್ದು ಬರುವುದು 99% ಡೌಟ್. ಏಕೆಂದರೆ ಇದೀಗ ಮತ ಎಣಿಕೆ ನಡೆಯುತ್ತಿರುವ ಪ್ರದೇಶಗಳಲ್ಲಿ ಡೆಮಾಕ್ರಟಿಕ್ ಪಕ್ಷ ಎಂದರೆ ಬೈಡನ್ ಪಕ್ಷದ ಪ್ರಾಬಲ್ಯವಿದೆ. ಹೀಗಾಗಿ ಬೈಡನ್‌ಗೆ ಇನ್ನಷ್ಟು ಮತಗಳು ಬೀಳುವ ಸಾಧ್ಯತೆ ಇದೆ. ಇದು ಟ್ರಂಪ್ ಮತ್ತು ಬೈಡನ್ ನಡುವಿನ ಮತಗಳ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಟ್ರಂಪ್ ಗೆಲುವು ಕಷ್ಟಕರವಾಗಿದೆ. ಇನ್ನೇನು ಮತ ಎಣಿಕೆ ಕೂಡ ಮುಗಿಯು ಹಂತದಲ್ಲಿದ್ದು, ಭಾರಿ ಬದಲಾವಣೆಯನ್ನೂ ನಿರೀಕ್ಷಿಸಲು ಆಗದು.

ಸೋಲಿನ ಭೀತಿ ನಡುವೆ ಕಿರಿಕ್..!

ಸೋಲಿನ ಭೀತಿ ನಡುವೆ ಕಿರಿಕ್..!

ಪೆನ್ಸಿಲ್ವೇನಿಯಾ, ಜಾರ್ಜಿಯಾ, ಆರಿಜೋನಾ ಮತ್ತು ನೆವಾಡ ಪರಿಸ್ಥಿತಿ ಬೂದಿ ಮುಚ್ಚಿರುವ ಕೆಂಡದಂತಾಗಿದೆ. ಟ್ರಂಪ್ ಮೊದಲಿಗೆ ಲೀಡ್ ಪಡೆದು, ಇದೀಗ ಹಿನ್ನಡೆ ಅನುಭವಿಸುತ್ತಿರುವುದು ಅವರ ಬೆಂಬಲಿಗರನ್ನು ತೀವ್ರ ಪ್ರಮಾಣದಲ್ಲಿ ಕೆರಳಿಸಿದೆ. ಟ್ರಂಪ್ ಬೆಂಬಲಿಗರು ಮತ ಎಣಿಕೆ ಕೇಂದ್ರಗಳ ಬಳಿ ಬಂದು ಗಲಾಟೆ ಮಾಡುತ್ತಾ, ಮತ ಎಣಿಕೆಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೆನ್ಸಿಲ್ವೇನಿಯಾ, ಜಾರ್ಜಿಯಾ, ಆರಿಜೋನಾ ಮತ್ತು ನೆವಾಡ ರಾಜ್ಯಗಳ ಮತ ಎಣಿಕೆ ಕೇಂದ್ರಗಳಿಗೆ ಭಾರಿ ಭದ್ರತೆ ನೀಡಲಾಗಿದೆ. ಸುತ್ತಮುತ್ತಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಷ್ಟಾದರೂ ಟ್ರಂಪ್ ಬೆಂಬಲಿಗರು ರೊಚ್ಚಿಗೆದ್ದು, ಹೋರಾಟ ನಡೆಸಲು ಮುಂದಾಗಿದ್ದಾರೆ. ಇದು ಮತ ಎಣಿಕೆ ಮಾಡುತ್ತಿರುವ ಸಿಬ್ಬಂದಿಗೂ ತಳಮಳ ತಂದಿದೆ.

ಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂಗೆಲುವಿನ ಸನಿಹದಲ್ಲಿ ಜೋ ಬೈಡನ್, ಟ್ರಂಪ್ ಮತ್ತೆ ಗರಂ

ಅಮೆರಿಕ ಮಿಲಿಟರಿ ಎಂಟ್ರಿ ಆಗುತ್ತಾ..?

ಅಮೆರಿಕ ಮಿಲಿಟರಿ ಎಂಟ್ರಿ ಆಗುತ್ತಾ..?

ಅಮೆರಿಕದಲ್ಲಿ ರಾಜ್ಯಗಳು ಪ್ರಬಲವಾಗಿರುತ್ತವೆ. ರಾಜ್ಯಗಳ ಅನುಮತಿ ಇಲ್ಲದೆ ಅಮೆರಿಕದ ಮಿಲಿಟರಿ ಎಲ್ಲಿಗೂ ಪ್ರವೇಶ ಮಾಡುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪೆನ್ಸಿಲ್ವೇನಿಯಾ, ಜಾರ್ಜಿಯಾ, ಆರಿಜೋನಾ ಮತ್ತು ನೆವಾಡ ರಾಜ್ಯಗಳ ಪೊಲೀಸರು ಗಲಾಟೆ ನಿಯಂತ್ರಿಸುತ್ತಿದ್ದಾರೆ. ಆದರೆ ಟ್ರಂಪ್ ಬೆಂಬಲಿಗರ ಕಿರಿಕ್ ಮುಂದುವರಿದು, ಹಿಂಸಾಚಾರ ಭುಗಿಲೆದ್ದರೆ ಪೆನ್ಸಿಲ್ವೇನಿಯಾ, ಜಾರ್ಜಿಯಾ, ಆರಿಜೋನಾ ಮತ್ತು ನೆವಾಡ ರಾಜ್ಯಗಳಿಗೆ ಅಮೆರಿಕ ಮಿಲಿಟರಿ ಎಂಟ್ರಿ ಕೊಡುವ ಸಾಧ್ಯತೆ ಇದೆ. ಇದಕ್ಕಾಗಿ ಅಲ್ಲಿನ ರಾಜ್ಯ ಸರ್ಕಾರಗಳು ಪೂರ್ವ ತಯಾರಿಯನ್ನು ಮಾಡಿಕೊಂಡಿವೆ. ಪರಿಸ್ಥಿತಿ ಕೈಮೀರಿದರೆ ತಕ್ಷಣ ಅಮೆರಿಕ ಮಿಲಿಟರಿ ಎಂಟ್ರಿಕೊಟ್ಟು, ಗಲಭೆಕೋರರ ಸೊಂಟ ಮುರಿಯಲಿದೆ. ಇಷ್ಟೆಲ್ಲದರ ನಡುವೆ ಮತ ಎಣಿಕೆ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ.

ದಾಖಲೆ ಪ್ರಮಾಣದಲ್ಲಿ ಮತದಾನ

ದಾಖಲೆ ಪ್ರಮಾಣದಲ್ಲಿ ಮತದಾನ

ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಶೇ 66.9ರಷ್ಟು ದಾಖಲೆಯ ಮತದಾನ ನಡೆದಿದೆ. ಇದು 1900ರ ಇಸವಿಯಿಂದಲೇ ಅತ್ಯಧಿಕ ಶೇಕಡಾವಾರು ಪ್ರಮಾಣ. 1900ರಲ್ಲಿ ಶೇ 73.7ರಷ್ಟು ಮತದಾನ ನಡೆದಿತ್ತು. ಅಲ್ಲಿಂದ ಇಷ್ಟು ಪ್ರಮಾಣದಲ್ಲಿ ಮತದಾನವಾಗಿರಲಿಲ್ಲ.

2016ರಲ್ಲಿ ಅಮೆರಿಕದಲ್ಲಿ ಶೇ 66ರಷ್ಟು ಮತದಾನವಾಗಿದ್ದರೆ, 2008ರಲ್ಲಿ ಶೇ 58ರಷ್ಟು ಮತ ಚಲಾಚಣೆ ನಡೆದಿತ್ತು. ಮಿನ್ನೆಸೊಟಾ ಮತ್ತು ಮೈನೆ ಈ ಬಾರಿ ಅತಿ ಹೆಚ್ಚು ಮತಗಳು ಚಲಾವಣೆಯಾದ ರಾಜ್ಯಗಳಾಗಿವೆ. ಈ ರಾಜ್ಯಗಳಲ್ಲಿ ತಲಾ ಶೇ 79.2ರಷ್ಟು ಮತದಾನವಾಗಿದೆ. ಲೋವಾದಲ್ಲಿ ಶೇ 78.6ರಷ್ಟು ಮಂದಿ ಮತ ಚಲಾಯಿಸಿದ್ದಾರೆ. ಮೈನೆ ಮತ್ತು ಲೋವಾಗಳಲ್ಲಿ ಡೊನಾಲ್ಡ್ ಟ್ರಂಪ್ ಜಯಗಳಿಸಿದ್ದರೆ, ಮಿನ್ನೆಸೊಟಾದಲ್ಲಿ ಜೋ ಬೈಡೆನ್ ವಿಜಯಶಾಲಿಯಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆಡೊನಾಲ್ಡ್ ಟ್ರಂಪ್ ಸೋತರೆ ಮರು ಆಯ್ಕೆಯಾಗದ ಅಧ್ಯಕ್ಷರ ಸಾಲಿಗೆ ಸೇರ್ಪಡೆ

English summary
Arizona, Georgia, Pennsylvania and Nevada. These 4 states of America will play a decisive role in choosing the 46th president of the United States at this moment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X