• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೂರು ವರ್ಷದ ಮಗುವಿಗೆ ಆ ಅನಾಮಿಕ ನೀಡಿದ ದಾನ 14 ಲಕ್ಷ ರುಪಾಯಿ

|

ಎಲ್ಲ ಧರ್ಮಗಳಲ್ಲೂ ಒಂದಲ್ಲಾ ಒಂದು ಹಬ್ಬದಲ್ಲಿ ದಾನ-ಧರ್ಮದ ಬಗ್ಗೆ ಹೇಳಲಾಗಿದೆ. ಕ್ರಿಶ್ಚಿಯನ್ನರಿಗೆ ಕ್ರಿಸ್ ಮಸ್ ಅಂಥದ್ದೇ ದೊಡ್ಡ ಆಚರಣೆ. ಇಂಥ ಹಬ್ಬದ ಸಂದರ್ಭದಲ್ಲಿ ಅಮೆರಿಕ ನ್ಯೂಯಾರ್ಕ್ ನಿವಾಸಿಯೊಬ್ಬರು ತಮ್ಮ ಗುರುತನ್ನು ಬಯಲು ಮಾಡದಂತೆ, ಮೂರು ವರ್ಷದ ಹೆಣ್ಣುಮಗುವಿಗೆ ಒಂದು ತಿಂಗಳಿಗೆ ಬೇಕಾದಂಥ ಔಷಧಿಗೆ 20 ಸಾವಿರ ಡಾಲರ್ ನೀಡಿದ್ದಾರೆ.

ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ 14 ಲಕ್ಷ ರುಪಾಯಿಗಿಂತ ಹೆಚ್ಚಿನ ಮೊತ್ತವಿದು. ಬ್ರೂಕ್ಲಿನ್ ನ ಬಾಲಕಿ ಸಿಸ್ಟಿಕ್ ಫೈಬ್ರೋಸಿಸ್ ನಿಂದ ನರಳುತ್ತಿದ್ದಾಳೆ. ಔಷಧ ತಯಾರಕರು ಆ ಕಾಯಿಲೆಯ ಔಷಧದ ಖರ್ಚು ಬಿಟ್ಟುಕೊಡಲು ನಿರಾಕರಿಸಿದ್ದರಿಂದ ಆ ಮಗು ಕ್ರಿಸ್ ಮಸ್ ರಜಾಗೆ ಮನೆಯಲ್ಲಿ ಇರಲು ಸಾಧ್ಯವಿಲ್ಲ, ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂಬ ಪರಿಸ್ಥಿತಿ ಬಂದಿದೆ.

ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸು

ಈ ಬಗ್ಗೆ ವೆಬ್ ಸೈಟ್ ವೊಂದರಲ್ಲಿ ಈ ಮಾಹಿತಿ ಪ್ರಕಟವಾಗಿತ್ತು. ಮೂರು ವರ್ಷದ ಕ್ಲಿಯೋ ಕೆನಡಿ ಆಸ್ಪತ್ರೆಯಲ್ಲಿದ್ದು, ಆಕೆಗೆ ಟ್ಯೂಬ್ ಮೂಲಕ ಆಹಾರ ನೀಡಲಾಗುತ್ತಿದೆ. ಆ ಬಾಲಕಿಯ ತಂದೆ ಮಾಡಿಸಿದ ಹೆಲ್ತ್ ಇನ್ಷೂರೆನ್ಸ್ ನಿಂದ ಒರ್ಕಂಬಿ ಎಂಬ ಔಷಧ (ವರ್ಷಕ್ಕೆ ಅದಕ್ಕೆ 2,72,000 ಅಮೆರಿಕನ್ ಡಾಲರ್ ಆಗುತ್ತದೆ) ಕವರ್ ಆಗುವುದಿಲ್ಲ ಎಂದು ಗೊತ್ತಾಗಿದೆ.

ವರದಿ ಬಂದ ಒಂದು ಗಂಟೆಯೊಳಗೆ ಸ್ಪಂದನೆ

ವರದಿ ಬಂದ ಒಂದು ಗಂಟೆಯೊಳಗೆ ಸ್ಪಂದನೆ

ಆ ತಕ್ಷಣವೇ ಅಂದರೆ ವರದಿ ಪ್ರಕಟವಾದ ಒಂದು ಗಂಟೆಯೊಳಗೆ ವರದಿಗಾರರನ್ನು ಸಂಪರ್ಕಿಸಿದ ದಾನಿಯು ತನ್ನ ಹೆಸರನ್ನು ಬಯಲು ಮಾಡದಂತೆ ಮನವಿ ಮಾಡಿದ್ದಾರೆ. ಆ ಬಾಲಕಿಯ ಔಷಧಿಗೆ 20 ಸಾವಿರ ಡಾಲರ್ ನೀಡಿದ್ದಾರೆ. ಆತ ದಾನಿ ತನ್ನನ್ನು ಕ್ರಿಸ್ ಮಸ್ ಸಾಂಟಾ ಎಂದು ಗುರುತಿಸಿ ಸಾಕು ಎಂದು ಹೇಳಿದ್ದಾರೆ.

ಸಿಸ್ಟಿಕ್ ಫೈಬ್ರೋಸಿಸ್ ಕಾಯಿಲೆಯ ಪರಿಣಾಮ

ಸಿಸ್ಟಿಕ್ ಫೈಬ್ರೋಸಿಸ್ ಕಾಯಿಲೆಯ ಪರಿಣಾಮ

ಕ್ಲಿಯೋ ವಯಸ್ಸಿನವರಿಗೆ ಸಿಸ್ಟಿಕ್ ಫೈಬ್ರೋಸಿಸ್ ಕಾಯಿಲೆಗೆ ಇರುವ ಏಕೈಕ ಔಷಧ ಒರ್ಕಂಬಿ. ಕಾಯಿಲೆಯ ಪರಿಣಾಮವಾಗಿ ಕ್ಲಿಯೋಳ ತೂಕವು 13 ಕೇಜಿಗೆ ಇಳಿದು ಹೋಗಿದೆ. ಸಿಸ್ಟಿಕ್ ಫೈಬ್ರೋಸಿಸ್ ಇರುವವರಿಗೆ ಶ್ವಾಸಕೋಶದ ಮೇಲೆ ದಾಳಿ ಆಗುತ್ತದೆ. ದೇಹವು ಪೌಷ್ಟಿಕಾಂಶವನ್ನು ತೆಗೆದುಕೊಳ್ಳಲು ಅವಕಾಶ ಆಗಲ್ಲ. ದಿನದಿನಕ್ಕೂ ಇದು ಹೆಚ್ಚಾಗುತ್ತಾ ಹೋಗುತ್ತದೆ. ಒರ್ಕಂಬಿ ಔಷಧಿ ತೆಗೆದುಕೊಳ್ಳುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಕ್ಯಾಲೋರಿ ದೊರೆಯುತ್ತದೆ. ಆಸ್ಪತ್ರೆಗೆ ಸೇರುವ ಅಗತ್ಯ ಇರುವುದಿಲ್ಲ.

Image Credit: Mathew McDermott

ಕೆಲಸಗಾರರಿಗೆ ಬೋನಸ್ ಆಗಿ ಕೊಟ್ಟಿದ್ದು ಮರ್ಸಿಡಿಸ್ ಕಾರು, ಕೊಟ್ಟವರು ಯಾರು?

ಇತರರು ಕೂಡ ನೆರವು ನೀಡಲು ಮುಂದೆ ಬಂದಿದ್ದಾರೆ

ಇತರರು ಕೂಡ ನೆರವು ನೀಡಲು ಮುಂದೆ ಬಂದಿದ್ದಾರೆ

ಯಾವಾಗ ಈ ಸುದ್ದಿ ಗೊತ್ತಾಯಿತೋ ಅಲ್ಲಿನ ಕೆಲ ಸ್ಥಳೀಯರು, ಅದರಲ್ಲಿ ಇದೇ ಕಾಯಿಲೆ ಹದಿಮೂರು ವರ್ಷದ ಹಿಂದೆ ತಮ್ಮ ಮಗಳನ್ನು ಕಳೆದುಕೊಂಡ ವೈದ್ಯರೊಬ್ಬರು ಆ ಕುಟುಂಬಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಅಂದ ಹಾಗೆ ಕ್ಲಿಯೋ ಕುಟುಂಬದವರ ಹತ್ತಿರ ಇನ್ಷೂರೆನ್ಸ್ ಇದೆ. ಆದರೆ ಅದರಲ್ಲಿ ಈ ಔಷಧ ಕವರ್ ಆಗುವುದಿಲ್ಲ.

Image Credit: Mathew McDermott

ಮನಸಾರೆ ಸ್ಮರಿಸುತ್ತಾರೆ ಕ್ಲಿಯೋಳ ಪೋಷಕರು

ಮನಸಾರೆ ಸ್ಮರಿಸುತ್ತಾರೆ ಕ್ಲಿಯೋಳ ಪೋಷಕರು

ಇಲ್ಲಿ ಇನ್ನೊಂದು ಸಂತೋಷದ ವಿಚಾರವೂ ಇದೆ. ಮುಂದಿನ ವರ್ಷದ ಜನವರಿಯಿಂದ ಹೊಸ ಯೋಜನೆ ಅನ್ವಯ ಇನ್ಷೂರೆನ್ಸ್ ಪ್ಲಾನ್ ಒರ್ಕಂಬಿಗೂ ಅನ್ವಯಿಸುತ್ತದೆ. ಅದರಿಂದ ಆ ಕುಟುಂಬದ ಮೇಲಿನ ಹೆಚ್ಚಿನ ಒತ್ತಡ ಇಳಿಯುತ್ತದೆ. ಈ ಒಂದು ತಿಂಗಳ ಔಷಧಕ್ಕೆ ಅಷ್ಟು ದೊಡ್ಡ ಮೊತ್ತವನ್ನು ದಾನ ಮಾಡಿದ ಆ ಅಗೋಚರ ಸಾಂಟಾ ಕ್ಲಾಸ್ ನನ್ನು ಕ್ಲಿಯೋಳ ಪೋಷಕರು ಮನಸಾರೆ ನೆನಪಿಸಿಕೊಳ್ಳುತ್ತಾರೆ.

English summary
It’s a Christmas miracle. A prominent New Yorker has anonymously paid $20,000 for a month’s supply of a life-changing medication for a 3-year-old Brooklyn girl with cystic fibrosis, after its drug-maker refused to waive the staggering cost so the child could receive it and stay home for the holidays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more