ವೈಟ್‌ಹೌಸ್ ವಾಸಕ್ಕೆ ಅಮೆರಿಕದ 12 ರಾಜ್ಯಗಳಲ್ಲಿ ಗೆಲುವು ಅತ್ಯಗತ್ಯ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ 270ರ ಗಡಿ ಮುಟ್ಟಲು ಹಾಲಿ ಅಧ್ಯಕ್ಷ ಟ್ರಂಪ್ ಮತ್ತು ಮಾಜಿ ಉಪಾಧ್ಯಕ್ಷ ಬೈಡನ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅತ್ತ ಚುನಾವಣಾ ಸಮೀಕ್ಷೆಗಳು, ಈ ಬಾರಿ ಬಿಡೆನ್ ಗೆಲ್ಲುತ್ತಾರೆ ಎನ್ನುತ್ತಿವೆ. ಆದರೂ 2016ರ ಘಟನೆ ನಮ್ಮ ಕಣ್ಣಮುಂದೆ ಉದಾಹರಣೆಯಾಗಿ ನಿಂತಿದೆ. 2016ರಲ್ಲಿ ಹಿಲರಿ ಅಧ್ಯಕ್ಷೆ ಆಗೇ ಹೋದರು ಎನ್ನುವ ಹೊತ್ತಿನಲ್ಲಿ, ಟ್ರಂಪ್ ಗೆದ್ದಿದ್ದರು.

ಇದೆಲ್ಲಾ ಏನೇ ಇದ್ದರೂ, ವೈಟ್‌ಹೌಸ್‌ನಲ್ಲಿ ಜೀವನ ಸಾಗಿಸಲು ಅಮೆರಿಕದ 12 ರಾಜ್ಯಗಳಲ್ಲಿ ಗೆಲ್ಲಲೇಬೇಕಿದೆ. 12 ರಾಜ್ಯಗಳು ಅಮೆರಿಕ ಅಧ್ಯಕ್ಷರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಲಿಸ್ಟ್‌ನಲ್ಲಿ ಅರಿಜೋನಾ, ಪೆನ್ಸಿಲ್ವೇನಿಯಾ, ನಾರ್ಥ್ ಕರೊಲಿನಾ, ಮಿಷಿಗನ್, ನೆವಾಡಾ, ವಿಸ್ಕಾನ್ಸಿನ್, ಫ್ಲೋರಿಡಾ, ಜಾರ್ಜಿಯಾ, ಒಹಾಯೊ, ಲೋವಾ, ನ್ಯೂ ಹ್ಯಾಂಪ್ ಶೈರ್, ಟೆಕ್ಸಾಸ್ ರಾಜ್ಯಗಳು ಸೇರಿವೆ.

ಈ ರಾಜ್ಯಗಳೇ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದ್ದು, ಈ ರಾಜ್ಯಗಳ ಬಲಾಬಲದ ಆಧಾರದಲ್ಲಿ ಯಾರು ಗೆಲ್ಲುವರು ಎಂಬುದನ್ನ ಲೆಕ್ಕಾಚಾರ ಹಾಕಲಾಗುತ್ತದೆ. ಹಾಗೂ ಅವರ ಹೆಸರಿನಲ್ಲೇ ವೈಟ್‌ಹೌಸ್‌ನಲ್ಲಿ ಜಾಗ ಫಿಕ್ಸ್ ಆಗಲಿದೆ.

ಅತಿಮುಖ್ಯವಾದ ರಾಜ್ಯಗಳಲ್ಲಿ ಲೆಕ್ಕಾಚಾರ

ಅತಿಮುಖ್ಯವಾದ ರಾಜ್ಯಗಳಲ್ಲಿ ಲೆಕ್ಕಾಚಾರ

ಅರಿಜೋನಾ, ಪೆನ್ಸಿಲ್ವೇನಿಯಾ, ನಾರ್ಥ್ ಕರೊಲಿನಾ, ಮಿಷಿಗನ್, ನೆವಾಡಾ, ವಿಸ್ಕಾನ್ಸಿನ್, ಜಾರ್ಜಿಯಾ, ಫ್ಲೋರಿಡಾ, ಒಹಾಯೊ, ಲೋವಾ, ನ್ಯೂ ಹ್ಯಾಂಪ್ ಶೈರ್, ಟೆಕ್ಸಾಸ್ ರಾಜ್ಯಗಳ ಪೈಕಿ ಅತಿಮುಖ್ಯವಾದ 9 ರಾಜ್ಯಗಳನ್ನ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗುರುತಿಸಬಹುದು. ಇಲ್ಲಿ ಅತ್ಯಧಿಕ ಮತಗಳನ್ನು ಕಾಣಬಹುದು. ಪ್ರಮುಖವಾಗಿ ಟೆಕ್ಸಾಸ್ 38, ಪೆನ್ಸಿಲ್ವೇನಿಯಾ 20, ಫ್ಲೋರಿಡಾ 29, ಒಹಾಯೊ 18, ನಾರ್ಥ್ ಕರೊಲಿನಾ 15, ಜಾರ್ಜಿಯಾ 16, ಮಿಷಿಗನ್ 16, ಅರಿಜೋನಾ 11, ವಿಸ್ಕಾನ್ಸಿನ್ 10 ಸ್ಥಾನಗಳು ಸಿಗಲಿವೆ. ಕೇವಲ 9 ರಾಜ್ಯಗಳಿಂದ 173 ಸ್ಥಾನಗಳನ್ನ ಅಧ್ಯಕ್ಷೀಯ ಅಭ್ಯರ್ಥಿ ಗೆಲ್ಲಬಹುದಾಗಿವೆ. ಇಲ್ಲಿ ಗೆದ್ದರೆ ಮಾತ್ರ ವೈಟ್‌ಹೌಸ್ ಬಾಗಿಲು ತೆರೆಯಲಿದೆ.

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಪರೋಕ್ಷ ಚುನಾವಣೆ ಮೂಲಕ ಆಯ್ಕೆ

ಭಾರತದಲ್ಲಿ ಇರುವಂತೆ ಅಮೆರಿಕದಲ್ಲಿ ಹತ್ತಾರು ಪಕ್ಷಗಳು ಅಸ್ತಿತ್ವದಲ್ಲಿ ಇಲ್ಲ. ಅಮೆರಿಕದಲ್ಲಿ 2 ರಾಜಕೀಯ ಪಕ್ಷಗಳಿದ್ದು, ಅಧ್ಯಕ್ಷರನ್ನು 'ಎಲೆಕ್ಟೊರೋಲ್ ಕಾಲೇಜು' ಮೂಲಕ ಆಯ್ಕೆಮಾಡಲಾಗುತ್ತದೆ. ಸಾರ್ವಜನಿಕರು 'ಎಲೆಕ್ಟೊರೋಲ್ ಕಾಲೇಜು'ಗಳ ಮೂಲಕ ಚುನಾಯಿತ ಪ್ರತಿನಿಧಿಗಳಿಗೆ ಮತ ಹಾಕುತ್ತಾರೆ. ಹೀಗೆ ಜನರ ಮತ ಪಡೆದು ಆಯ್ಕೆಯಾಗುವ ಪ್ರತಿನಿಧಿಗಳು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಪಡೆಯುತ್ತಾರೆ. ಈ ಬಾರಿ ಡೊನಾಲ್ಡ್ ಟ್ರಂಪ್ ಹಾಗೂ ಜೋ ಬಿಡೆನ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ. ಪ್ರತಿ ರಾಜ್ಯದಲ್ಲಿ ಎಲೇಕ್ಟರ್‌ಗಳ ಸಂಖ್ಯೆ ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಆ ರಾಜ್ಯದ ಪಾಲು ಆಧರಿಸಿ ನಿರ್ಧರಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಇತ್ತೀಚಿನ ಜನಸಂಖ್ಯಾ ವರದಿ ಆಧಾರವಾಗಿರುತ್ತದೆ.

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟು..?

ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ 50 ರಾಜ್ಯಗಳಿದ್ದು, ವಾಶಿಂಗ್‌ಟನ್ ಡಿಸಿ ಅಮೆರಿಕದ ರಾಜಧಾನಿಯಾಗಿದೆ. ಹೀಗೆ ವಾಶಿಂಗ್‌ಟನ್ ಡಿಸಿ ಸೇರಿದಂತೆ 51 ರಾಜ್ಯಗಳ ಪ್ರಜೆಗಳು ಅಮೆರಿಕ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುತ್ತಾರೆ. ಒಟ್ಟು 538 ಚುನಾಯಿತ ಪ್ರತಿನಿಧಿಗಳಿರುತ್ತಾರೆ. 538 ಪ್ರತಿನಿಧಿಗಳ ಪೈಕಿ ಪ್ರತಿ ರಾಜ್ಯವನ್ನೂ ಪ್ರತಿನಿಧಿಸಲು ಇಬ್ಬರು ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ಒಟ್ಟು 100 ಸೆನೆಟರ್‌ಗಳು ಆಯ್ಕೆಯಾಗುತ್ತಾರೆ. ವಾಷಿಂಗ್ಟನ್ ಡಿಸಿ ಸೇರಿದಂತೆ ಒಟ್ಟು 51 ಎಲೆಕ್ಟೊರಾಲ್ ಕಾಲೇಜುಗಳಿವೆ. ಪ್ರತಿ ರಾಜ್ಯದಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬಹುಮತ ದೊರೆಯುತ್ತದೆಯೋ ಆ ಅಭ್ಯರ್ಥಿಗೆ ರಾಜ್ಯದ ಇತರ ಎಲ್ಲ ಮತಗಳು ಒಗ್ಗೂಡುತ್ತವೆ.

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಧ್ಯಕ್ಷರಾಗಲು ಎಷ್ಟು ಬಹುಮತ ಅಗತ್ಯ..?

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನ ಅಲಂಕರಿಸಬೇಕಾದರೆ ಕನಿಷ್ಠ 270 ಮತ ಅಗತ್ಯವಾಗಿರುತ್ತದೆ. ಅಂದರೆ ಒಟ್ಟು 538 ಚುನಾಯಿತ ಪ್ರತಿನಿಧಿಗಳ ಪೈಕಿ 270 ಚುನಾಯಿತ ಅಭ್ಯರ್ಥಿಗಳ ಬೆಂಬಲ ಅತ್ಯಗತ್ಯವಾಗಿರುತ್ತದೆ. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗೂ 2 ಮತಗಳನ್ನು ಹಾಕುವ ಹಕ್ಕು ಇರುತ್ತದೆ. ಒಂದು ಮತ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮತ್ತೊಂದು ಮತ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲುತ್ತದೆ. ಇನ್ನು ಚುನಾವಣೆ ಪ್ರಕ್ರಿಯೆ ಬಗ್ಗೆ ಅನುಮಾನ ಹೊಂದಿದ್ದರೆ ಅಥವಾ ಈ ಕುರಿತಾಗಿ ತಕರಾರು ಇದ್ದರೆ ಸೋತ ಅಭ್ಯರ್ಥಿ ಅಮೆರಿಕದ ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ಇದೆ. ಇದೀಗ ಟ್ರಂಪ್ ಕೂಡ ಅಂಚೆ ಮತದಾನದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತಾವು ಸೋತರೆ ಅಧಿಕಾರ ಹಸ್ತಾಂತರ ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಬಹುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+