ಯುಎಸ್ ದಾಖಲೆ: 24 ಗಂಟೆಗಳಲ್ಲೇ 1.36 ಲಕ್ಷ ಜನರಿಗೆ ಕೊರೊನಾವೈರಸ್!
ವಾಶಿಂಗ್ಟನ್, ನವೆಂಬರ್.23: ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳು ಅಮೆರಿಕಾದಲ್ಲಿ ವರದಿಯಾಗಿವೆ.
ಒಂದು ದಿನದಲ್ಲಿ 136627 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದರಿಂದಾಗಿ ದೇಶದಲ್ಲಿ ಒಟ್ಟು ಕೊವಿಡ್-19 ಸೋಂಕಿತರ ಸಂಖ್ಯೆ 12588661ರ ಗಡಿ ದಾಟಿ ಹೋಗಿದೆ.
ಇಡೀ ವಿಶ್ವದ ಪೈಕಿ ಅಮೆರಿಕಾದಲ್ಲಿಯೇ ಅತಿಹೆಚ್ಚು ಜನರು ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನ ಮಹಾಮಾರಿಗೆ 866 ಜನರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯು 262696ಕ್ಕೆ ಏರಿಕೆಯಾಗಿದೆ.

ಯುಎಸ್ ನಲ್ಲಿ 74 ಲಕ್ಷ ಸೋಂಕಿತರು ಗುಣಮುಖ:
ಅಮೆರಿಕಾದಲ್ಲಿ ಕೊರೊನಾವೈರಸ್ ಸೋಂಕಿತರ ಜೊತೆ ಜೊತೆಗೆ ಗುಣಮುಖರ ಸಂಖ್ಯೆಯು ಕೊಂಚ ಹೆಚ್ಚಳವಾಗಿದೆ. ದೇಶದಲ್ಲಿ ಈವರೆಗೂ 74,52,540 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, 48,73,425 ಸಕ್ರಿಯ ಪ್ರಕರಣಗಳಿರುವುದಾಗಿ ಅಮೆರಿಕಾದ ಜಾನ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯಲವು ಮಾಹಿತಿ ನೀಡಿದೆ.
ಇನ್ನು, ವಿಶ್ವದಲ್ಲಿ 58970525 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಈವರೆಗೂ 1393227 ಜನರು ಪ್ರಾಣ ಬಿಟ್ಟಿದ್ದಾರೆ. ಕೊಂಚ ಸಮಾಧಾನದ ವಿಚಾರ ಎಂದರೆ 40759532 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದಾರೆ. ಈ ಪೈಕಿ ಅಮೆರಿಕಾ ಅಗ್ರಸ್ಥಾನದಲ್ಲಿದ್ದರೆ, ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರ ಭಾರತವು ಇದರಲ್ಲೂ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.












Click it and Unblock the Notifications