ಪರಿಕ್ಕರ್ ಹೇಳಿಕೆ ಟ್ರಿಬ್ಯೂನಲ್ ಮುಂದೆ ಪ್ರಶ್ನಿಸುತ್ತೇವೆ: ಎಂಬಿ ಪಾಟೀಲ್

Posted By: ವಿಜಯಪುರ ಪ್ರತಿನಿಧಿ
Subscribe to Oneindia Kannada

ವಿಜಯಪುರ, ಜನವರಿ 05: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಹಾದಾಯಿ ಹೋರಾಟಗಾರರಿಗೆ ಮೋಸ ಮಾಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಕ್ಕರ್ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ ಆದರೆ ಶಿಷ್ಟಾಚಾರ ಪ್ರಕಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕು. ಡಿಪಿಎಪಿ ಪ್ರದೇಶಕ್ಕೆ ನೀರು ಮಾತ್ರ ಕೊಡುವುದಾಗಿ ಗೋವಾ ಹೇಳಿದೆ ಟ್ರಿಬ್ಯೂನಲ್ ನಲ್ಲಿ ಮಹಾದಾಯಿ ವಿಚಾರ ಇರುವಾಗ ಗೋವಾ ಸಿಎಂ ಈ ರೀತಿ ಹೇಳಬಾರದಿತ್ತು ಎಂದರು.

ಟ್ರಿಬ್ಯೂನಲ್ ಯಾವ ಆದೇಶವನ್ನ ನೀಡದಿರುವಾಗಿ ಗೋವಾ ಸಿಎಂ ಹೇಳಿಕೆ ನೀಡಿ ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ನದಿ ಪಾತ್ರ ಪ್ರದೇಶಕ್ಕೆ ಮಾತ್ರ ನೀರು ಕೊಡುವುದಾಗಿ ಗೋವಾ ಹೇಳಿಕೆ ನೀಡಿದೆ ಆದರೆ ನಾನು ಉಳಿದ ಪ್ರದೇಶಕ್ಕೆ ನೀರು ಕೇಳುತ್ತಿದ್ದೇವೆ.

MB Patil

ಗೋವಾ ಮುಖ್ಯಮಂತ್ರಿಗಳ 1 ಟಿಎಂಸಿ ನೀರು ಕೊಡುವುದಾಗಿ ಹೇಳಿದ್ದಾರೆ ಫೆಬ್ರವರಿ 6 ರಿಂದ ವಿಚಾರಣೆ ಆರಂಭವಾಗಲಿದೆ ಈ ಬಗ್ಗೆ ಟ್ರಿಬ್ಯೂನಲ್ ನಲ್ಲಿ ಪ್ರಶ್ನೆ ಮಾಡಲಾಗುವುದು. ಕರ್ನಾಟಕದ ಜನರನ್ನು ಮೂರ್ಖರನ್ನಾಗಿ ಮಾಡುವ ಕಾರ್ಯವನ್ನು ಗೋವಾ ಸರ್ಕಾರ ಕೈಬಿಡಬೇಕು ಎಂದರು.

ಮಹದಾಯಿ ನದಿ ನೀರು ಹಂಚಿಕೊಳ್ಳುವುದು ಅನಿವಾರ್ಯ:ಪರಿಕ್ಕರ್

ಗೋವಾ ಸರ್ಕಾರದ ನಾಟಕವನ್ನು ನಾವು ಬಯಲು ಮಾಡುತ್ತೇವೆ ಕಾನೂನು ಹಾಗೂ ಜನರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಗೋವಾ ನಾಟಕವನ್ನ ತಿಳಿಸುತ್ತೇವೆ. ದಾರಿತಪ್ಪಿಸುವುದನ್ನು ಗೋವಾ ಸರ್ಕಾರ ಬಿಡಬೇಕು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನೀರು ಕೊಡಲು ಬರುವುದಿಲ್ಲ ಎಂದು ಮೊದಲು ಗೋವಾ ಹೇಳಿದೆ ಇದೀಗ ಇನ್ ಬೇಸ್ ಪ್ರದೇಶಕ್ಕೆ ಮಾತ್ರ ನೀರು ಕೊಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಗೋವಾ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಜನವರಿ 16 ಒಳಗಾಗಿ ಈ ಬಗ್ಗೆ ಟ್ರಿಬ್ಯೂನಲ್ ಗೆ ಪತ್ರ ಬರೆಯುತ್ತೇವೆ, ನಾಡಕರ್ಣಿ ಅವರ ಹೇಳಿಕೆ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಆಗಸ್ಟ್ ನಲ್ಲಿ ಟ್ರಿಬ್ಯೂನಲ್ ತಿರ್ಪು ಬರಲಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ತೀರ್ಪು ಬರುವ ಮೊದಲೆ ಈ ವಿಷಯವನ್ನು ಯಡಿಯೂರಪ್ಪ ಯಾಕೆ ಪ್ರಸ್ತಾಪ ಮಾಡಿದ್ದಾರೆ ಗೊತ್ತಿಲ್ಲ ಬಿಜೆಪಿಯವರು ರಾಜಕೀಯ ಮಾಡಲು ಈ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Water resources minister MB Patil said that the state government will question the statement of Goa chief minister Manohar Parrikar before the Mahadayi tribunal because he has said that they will give only One TMC of water for Basin area.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ