ಸಚಿವರು ಹೇಳಿದ ಮಾತ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮವಾಗುವುದಿಲ್ಲ!

Posted By: Nayana
Subscribe to Oneindia Kannada

ವಿಜಯಪುರ, ನವೆಂಬರ್ 20 : ತಿಳಿವಳಿಕೆ ಇಲ್ಲದ ಸಚಿವ ಎಂ.ಬಿ. ಪಾಟೀಲ ಅವರು ಹೇಳಿದ ಮಾತ್ರಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮ ಆಗುವುದಿಲ್ಲ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀ ವಿಜಯಪುರದಲ್ಲಿ ಸೋಮವಾರ(20) ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ವೀರಶೈವ ಒಂದು ವ್ರತ, ಲಿಂಗಾಯತ ಸ್ವತಂತ್ರ ಧರ್ಮ!

ನಾವು ಕೂಡ ವೀರಶೈವ ಬಗೆಗಿನ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಲಿಂಗಾಯತ ಪ್ರತ್ಯೇಕ ಧರ್ಮ ಹುಟ್ಟು ಹಾಕುವುದಕ್ಕೆ ಕೈ ಹಾಕಿದ್ದು ಸರಿಯಲ್ಲ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕೆಲವರು ಬಸವಣ್ಣ ಹೆಸರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಮೃತ್ಯುಂಜಯ ಸ್ವಾಮಿ ಹೇಳಿಕೆ ಸಮರ್ಥಿಸಿಕೊಂಡ ಎಂ.ಬಿ ಪಾಟೀಲ್

Rambhapuri shri slams Minister MB Patil

ಚಿತ್ರಗಳು : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬಸವಣ್ಣನ ಹೆಸರಿನಲ್ಲಿ ವೀರಶೈವ ಬೇರೆ ಲಿಂಗಾಯತ ಬೇರೆ ಎಂದು ಹೇಳಿ ಬಸವಣ್ಣ ಅಭಿಪ್ರಾಯಗಳ ವಿರೋಧ ದಿಕ್ಕಿನಲ್ಲಿ ನಡೆದುಕೊಳ್ಳುತ್ತಿದ್ದಾರೆ. ಲಿಂಗಾಯತರು ವೀರಶೈವದ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದರು.

'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಸಿದ್ದರಾಮಯ್ಯ ಕುಮ್ಮಕ್ಕು'

ಸಚಿವರ ಬಳಿ ರಾಜಕೀಯ ಅಧಿಕಾರದ ಜತೆಗೆ ಹಣವೂ ಇದೆ ಹೀಗಾಗಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ವೀರಶೈವರು ಮೂತ್ರ ಮಾಡಿದರೆ ಹರಿದು ಹೋಗುವ ಕುರಿತು ಖಾವಿ ಬಟ್ಟೆ ಹಾಕಿಕೊಂಡವರು ಖಾವಿ ಬಗ್ಗೆ ಗೌರವ ಉಳಿಸಿ ಬೆಳೆಸಬೇಕು.

ಇತ್ತೀಚೆಗೆ ಕೇಲವು ಸ್ವಾಮೀಜಿಯವರು ವ್ಯಕ್ತಿತ್ವಕ್ಕೆ ಕಳಂಕ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿ ಕಾಲೆಳೆದರು ಕೆಲವು ಸ್ವಾಮೀಜಿಯವರರು ಬೆಳೆದು ಬಂದ ದಾರಿ, ಸಂಸ್ಕಾರ, ಪರಿಸರ , ಆಡಿದ ಮಾತುಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many peoples are misusing Basavanna name for their sake. Minister miss using his power and money. We have sufficient document regarding Veerashaiva and we will submit it to the court.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ