ವಿಜಯಪುರ ಆದಿಲ್ ಶಾಹಿ ಬೇಸಿಗೆ ಅರಮನೆ ವೈಭವ ಮರುಕಳಿಸಲಿದೆ

Posted By: Nayana
Subscribe to Oneindia Kannada

ವಿಜಯಪುರ, ನವೆಂಬರ್ 30 : ಐತಿಹಾಸಿಕ ಹಿನ್ನೆಲೆ ಇರುವ ವಾಸ್ತುಶಿಲ್ಪ ಕಲೆಗೆ ಸಾಕ್ಷಿಯಾಗಿದ್ದ ಆದಿಲ್ ಶಾಹಿ ನಿರ್ಮಿತ ವಿಜಯಪುರದ ಬೇಸಿಗೆ ಅರಮನೆ ವೈಭವ ಮರುಕಳಿಸಲಿದೆ.

ಒಣಗಿದ್ದ ವಿಜಯಪುರ ಕೆರೆಗಳಿಗೀಗ ಜೀವ ಬಂದಿದ್ದು ಹೇಗೆ?

ನೀರಿಲ್ಲದೆ ಭಣಗುಡುತ್ತಿದ್ದ ಈ ಕೆರೆಗಯ ಸುತ್ತಮುತ್ತಲಿನ ಅನೇಕ ಸ್ಮಾರಕಗಳನ್ನು ದಾರಿಹೋಕರು, ದನದಾಹಿಗಳು ವಿರೂಪಗೊಳಿಸಿದ್ದರು. ಆದರೆ ಬೇಸಿಗೆ ಅರಮನೆ ಇನ್ನುಮುಂದೆ ವೈಭವವನ್ನು ಮರಳಿ ಪಡೆಯಲಿದೆ. ಈ ಹಿಂದೆ ಗೋಳ ಗುಮ್ಮಟಕ್ಕೆ ಬಂದವರು ಲಕ್ಷಾಂತರ ಮಂದಿ ಬೇಸಿಗೆ ಅರಮನೆಗೆ ಭೇಟಿ ಕೊಡದೆ ತೆರಳುತ್ತಿರಲಿಲ್ಲ.

ಎಲ್ಲಾ ಯೋಜನೆ ಪೂರ್ಣಗೊಳ್ಳಲು 1 ಲಕ್ಷ ಕೋಟಿ ಬೇಕು: ಎಂಬಿ ಪಾಟೀಲ್

ಆದರೆ ಈಗ ಅರಮನೆಯ ಅಂದ ಕಳೆಗುಂದಿದೆ. ಪ್ರವಾಸಿಗರು ಅಷ್ಟಾಗಿ ಬರುತ್ತಿಲ್ಲ. ಇದನ್ನು ತಿಳಿದ ರಾಜ್ಯಸರ್ಕಾರ ಅರಮನೆಯ ಅಂದವನ್ನು ಇಮ್ಮಡಿಗೊಳಿಸಲು ತೀರ್ಮಾನಿಸಿದೆ. ಕೆರೆಯ ಹೂಳು ಎತ್ತಿ ಮರುಜೀವ ಕೊಡುವುದರ ಜತೆಗೆ ಆವರಣವನ್ನು ಇನ್ನಷ್ಟು ಹಸಿರು ಮಾಡಲು ಯೋಜನೆ ರೂಪಿಸಿದೆ.

ಹಿಂದಿನ ಉದ್ದೇಶ

ಹಿಂದಿನ ಉದ್ದೇಶ

ನಿರ್ಮಾಣದ ಹಿಂದಿನ ಉದ್ದೇಶ: ಮೊಹಮ್ಮದ್ ಆದಿಲ್ ಶಾಹಿ 1627 ಹಾಗೂ 1656 ಕ್ರಿಸ್ತಶಕದಲ್ಲಿ ವಿಜಯಪುರದಿಂದ 10 ಕಿ.ಮೀ ದೂರದಲ್ಲಿರುವ ಕುಮಟಗಿಯಲ್ಲಿ ಅಲ್ಲಿರುವ ಸ್ಥಳೀಯರಿಗೆ ಬೇಸಿಗೆ ಬಿಸಿಲಿನಿಂದ ರಕ್ಷಿಸುವ ಸಲುವಾಗಿ ನಿರ್ಮಿಸಿದರು. ಅರಮನೆಯ ಸುತ್ತಮುತ್ತಲೂ ಹಸಿರಿನಿಂದ ಕೂಡಿದ್ದು ಪಕ್ಷಿಗಳ ತಾಣವಾಗಿದೆ.

ಕೆರೆಯ ಅಭಿವೃದ್ಧಿ

ಕೆರೆಯ ಅಭಿವೃದ್ಧಿ

ಕುಮಟಗಿ ಕೆರೆ ಅಭಿವೃದ್ಧಿ: ಐತಿಹಾಸಿಕ ಬೇಗಂ ತಾಲಾಬ ಕೆರೆಯ ಮಾದರಿಯಲ್ಲಿ ಆದಿಲ್ ಶಾಹಿ ಅರಸರು ಬೇಸಿಗೆಯಲ್ಲಿ ತಂಗುತ್ತಿದ್ದ ಕುಮಟಗಿ ಕೆರೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಪ್ರಮುಖ ಪ್ರವಾಸಿ ಸ್ಥಾನವಾಗಿ ಆಕರ್ಷಣೆಗೊಳಿಸುವ ನಿಟ್ಟಿನಲ್ಲಿ ಈ ಕೆರೆಯ ಹೂಳು ಎತ್ತುವುದು, ಕೆರೆಯ ಸುತ್ತಲೂ ಪಿಚ್ಚಿಂಗ್ ನಿರ್ಮಿಸುವುದು

ಸಂಪೂರ್ಣ ಅಭಿವೃದ್ಧಿ

ಸಂಪೂರ್ಣ ಅಭಿವೃದ್ಧಿ

ಬೇಸಿಗೆ ಅರಮನೆಯ ಸಂಪೂರ್ಣ ಅಭಿವೃದ್ಧಿ: ಸಿಂದಗಿ ಮುಖ್ಯರಸ್ತೆಯಿಂದ ಕೆರೆಯವರೆಗೆ ರಸ್ತೆ ನಿರ್ಮಾಣಗೊಳಿಸುವುದು, ಕೆರೆಯ ಏರಿಯ ರಸ್ತೆಯನ್ನು ಸುಂದರವಾಗಿ ಅಭಿವೃದ್ಧಿಪಡಿಸುವುದು, ಕೆರೆಯಲ್ಲಿ ಹಾಗೂ ಸುತ್ತಲೂ ಇರುವ ಕಸ-ಕಂಟಿಗಳನ್ನು ಜಂಗಲ್ ಕಟಿಂಗ್ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸ್ಥಳದಲ್ಲಿದ್ದ ಕೆಬಿಜೆಎನ್ ಎಲ್ ಅಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ್ ಸೂಚಿಸಿದ್ದಾರೆ.

ಮುಳವಾಡ ಏತ ನೀರಾವರಿ

ಮುಳವಾಡ ಏತ ನೀರಾವರಿ

ಮುಳವಾಡ ಏತ ನೀರಾವರಿ ಯೋಜನೆ ಮೂಲಕ ನೀರು: ಬೇಸಿಗೆ ಅರಮನೆಯ ಐತಿಹಾಸಿಕ ಪೇಂಟಿಂಗ್ ಗಳು ಶಿಥಿಲಾವಸ್ಥೆಯಲ್ಲಿದ್ದು, ಅವುಗಳನ್ನು ರಕ್ಷಿಸಿ ಅರಮನೆಯನ್ನು ಸುಂದರ, ಸುಸಜ್ಜಿತಗೊಳಿಸಲು ಪ್ರಾಚ್ಯವಸ್ತು ಇಲಾಖೆ ಎಎಸ್ ಐಗೆ ವರದಿ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದರು.

ಸಚಿವರ ವೈಯಕ್ತಿಕ ಆಸಕ್ತಿಯ ಮೇರೆಗೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಈ ಕೆರೆಯನ್ನು ತಮ್ಮ ಜಲಸಂಪನ್ಮೂಲ ಇಲಾಖೆಯಿಂದಲೇ ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ, ಅಲ್ಲದೇ ಈ ಕೆರೆಯನ್ನು ಮುಳವಾಡ ಏತ ನೀರಾವರಿ ಯೋಜನೆ, ವಿಜಯಪುರ ಮುಖ್ಯ ಕಾಲುವೆಯಿಂದ ತುಂಬಿಸಲು ಸಹ ಯೋಜನೆ ರೂಪಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Historical Kumatagi Summer palace in Vijayapur built by Adil Shahi is getting new face lift and it will be a new tourism place in Northern part of Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ