Get Updates
Get notified of breaking news, exclusive insights, and must-see stories!

ಸೋನಿಯಾ ಗಾಂಧಿಗೆ ಪತ್ರ: ವರದಿ ವಿರುದ್ಧ ದೂರು ನೀಡಿದ ಎಂ.ಬಿ.ಪಾಟೀಲ

ವಿಜಯಪುರ, ಏಪ್ರಿಲ್ 16: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಹಾಲಿ ಗೃಹಸಚಿವ ಎಂಬಿ ಪಾಟೀಲ ಅವರು 2017 ರ ಜುಲೈ ತಿಂಗಳಿನಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರದ ಕುರಿತು ಖುದ್ದು ಎಂಬಿ ಪಾಟೀಲರೇ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

2017 ರ ಜುಲೈ ತಿಂಗಳಿನಲ್ಲಿ ಲಿಂಗಾಯಿತ ಪ್ರತ್ಯೇಕ ಧರ್ಮದ ಕುರಿತು ಪತ್ರವೊಂದನ್ನು ಎಂಬಿ ಪಾಟೀಲರು ಬರೆದಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯ ವಿರುದ್ಧ ಪಾಟೀಲರು ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದು, ಚುನಾವಣೆಯ ಸಮಯದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಚ್ಯುತಿಯಾಗುವಂತೆ ಮಾಡಿದ ಈ ವರದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಂಬಿ ಪಾಟೀಲ್ ಮನವಿ ಮಾಡಿದ್ದಾರೆ.

ತೇಜೋವಧೆಗಾಗಿ ಷಡ್ಯಂತ್ರ

ತೇಜೋವಧೆಗಾಗಿ ಷಡ್ಯಂತ್ರ

ನಾನು ಮಲ್ಲನಗೌಡ ತಂದೆ ಬಸನಗೌಡ ಪಾಟೀಲ, ವಯಸ್ಸು 54 ವರ್ಷ, ಅಧ್ಯಕ್ಷರು, ಬಿಎಲ್ ಡಿಇ ಸಂಸ್ಥೆ, ವಿಜಯಪುರ ಕೊಡುವ ಫಿರ್ಯಾದಿ ಏನಂದರೇ...

ಇಂದು ಪತ್ರಿಕೆಯೊಂದರಲ್ಲಿ ನಾನು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದೇನೆ ಎನ್ನಲಾದ ಪತ್ರದ ಬಗ್ಗೆ ಲೇಖನವೊಂದನ್ನು ಪ್ರಕಟಿಸಲಾಗಿದೆ. ದಿನಾಂಕ 10.07.2017 ರಂದು ಬಿ ಎಲ್ ಡಿ ಇ ಸಂಸ್ಥೆ, ವಿಜಯಪುರ ಇದರ ಲೆಟರ್ ಹೆಡ್ ನಲ್ಲಿ ಅವರು ಸೂಚಿಸಿದಂತೆ ಗ್ಲೋಬಲ್ ಕ್ರಿಸ್ಚಿಯನ್ ಕೌನ್ಸಿಲ್ ಮತ್ತು ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಶನ್ ಪ್ರತಿದನಿಧಿಗಳೊಂದಿಗೆ ವಿವರವಾಗಿ ಚರ್ಚಿಸಿ 2019 ರ ಲೋಕಸಭಾ ಮತ್ತು 2018 ರ ಕರ್ನಾಟಕ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು, ಆರೆಸ್ಸೆಸ್ ಬೆಳವಣಿಗೆಯನ್ನು ನಿಯಂತ್ರಿಸಲು ಮತ್ತು ಬಿಜೆಪಿಯನ್ನು ಸೋಲಿಸಲು ಮುಸ್ಲಿಂ ಮತ್ತು ಕ್ರಿಶ್ಚಿಯನ್ ರನ್ನು ಒಗ್ಗೂಡಿಸಿದಲ್ಲಿ ಮತ್ತು ಹಿಂದುಗಳನ್ನು ಅವರ ಜಾತಿ/ಉಪಜಾತಿ/ಪಂಗಡಗಳಲ್ಲಿ ವಿಭಜಿಸಿದರೆ ಮಾತ್ರ ಸಾಧ್ಯವೆಂದು ತಿಳಿಸಿ ಬರೆದಂತೆ ಖೊಟ್ತಿಯಾಗಿ ಸೃಷ್ಟಿಸಿದ ಬಿ ಎಸ್ ಡಿ ಇ ಲೆಟರ್ ಹೆಡ್ ಮೇಲೆ ಫೋರ್ಜರಿ ಮಾಡಿ ತಯಾರಿಸಿದ ಇದು ಪತ್ರವನ್ನು ಪ್ರಕಟಿಸಿರುತ್ತಾರೆ. ಸರದಿ ಪತ್ರವನ್ನು ಕುಚೋದ್ಯತನದಿಂದ ಮತ್ತು ದುರುದ್ದೇಶದಿಂದ ನನ್ನ ಹೆಸರಿಗೆ ಕಳಂಕ ತರುವ, ನನ್ನ ತೇಜೋವಧೆ ಮಾಡುವ ಮತ್ತು ಮತದಾರರಲ್ಲಿ ಗೊಂದಲ ಹುಟ್ಟಿಸುವ ಸಲುವಾಗಿ ಸೃಷ್ಟಿಸಲಾಗಿದೆ.

2018 ರಲ್ಲೂ ಇದನ್ನೇ ಮಾಡಲಾಗಿತ್ತು!

2018 ರಲ್ಲೂ ಇದನ್ನೇ ಮಾಡಲಾಗಿತ್ತು!

2018 ರ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಮತದಾನದ ಎರಡು ಮೂರು ದಿನದ ಹಿಂದೆ ಈ ತರಹದ ಆರೋಪವನ್ನು ನನ್ನ ಮೇಲೆ ಮಾಡಿ ಇದೇ ಪತ್ರವನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು. ಸದರಿ ಪತ್ರವನ್ನು ಕುಚೋದ್ಯದಿಂದ ಸೃಷ್ಟಿಮಾಡಲಾಗಿದೆ ಎಂದು ನಾನು ಸ್ಪಷ್ಟನೆ ನೀಡುತ್ತೇನೆ.

ಗೊಂದಲ ಹುಟ್ಟಿಸುವ ಉದ್ದೇಶ

ಗೊಂದಲ ಹುಟ್ಟಿಸುವ ಉದ್ದೇಶ

ವಸ್ತುಸ್ಥಿತಿ ಹೀಗಿರುವಾಗ ಮೇ 18 ಮತ್ತು 23 ರಂದು ಕರ್ನಾಟದಲ್ಲಿ ಮತದಾನ ಇರುವಾಗ ಮತದಾರರಲ್ಲಿ ಗೊಂದಲ ಹುಟ್ಟಿಸಲು ಮತ್ತು ನನ್ನ ಗೌರವಕ್ಕ ಕಳಂಕ ತರುವ ಉದ್ದೇಶದಿಂದ ಪತ್ರ ಪ್ರಕಟಿಸಲಾಗಿದೆ.

ಕಾಕೂನು ಕ್ರಮ ಕೈಗೊಳ್ಳಿ

ಕಾಕೂನು ಕ್ರಮ ಕೈಗೊಳ್ಳಿ

ಸದರಿ ಪತ್ರವನ್ನು ನಾನು ಬರೆದಿಲ್ಲ. ನಾಣು ಬರೆದಂತೆ ಅದನ್ನು ಖೊಟ್ಟಿಯಾಗಿ, ಕುಚೋದ್ಯತನದಿಂದ ನನ್ನ ತೇಜೋವಧೆ ಮಾಡಲು ಮತ್ತು ಮತದಾರರಲ್ಲಿ ಗೊಂದಲ ಮೂಡಿಸಲು ಸೃಷ್ಟಿಸಿದ್ದು, ಅದರ ಕುರಿತು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕಾದಿ ಫಿರ್ಯಾದಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+