ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ನವಜಾತ ಶಿಶು ಸಾವು
ವಿಜಯಪುರ, ಡಿಸೆಂಬರ್ 30 : ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದ ಕಾರಣ ಹೆರಿಗೆ ಸಂದರ್ಭದಲ್ಲಿ ಶಿಶು ಮೃತಪಟ್ಟ ಘಟನೆ ವಿಜಯಪುರದಲ್ಲಿ ಶನಿವಾರ ನಡೆದಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದಿರುವ ಕಾರಣ ಶಿಶು ಮೃತಪಟ್ಟಿದೆ.

ಸ್ವಾತಿ ಮಹಾಂತೇಶ ಜಾವಿರ ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ಆಗಮಿಸಿದ್ದರು. ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಸಿಬ್ಬಂದಿ ಗೈರಾಗಿದ್ದಾರೆ. ಮಹಿಳೆಯ ಹೆರಿಗೆ ನೋವು ಕೇಳಿ ಆಸ್ಪತ್ರೆಯ ಪಕ್ಕದ ಮನೆಯ ಸೂಲಗಿತ್ತಿ ಹೆರಿಗೆ ಮಾಡಿಸಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ.












Click it and Unblock the Notifications