Bhagappa Harijan: ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹತ್ಯೆ

ವಿಜಯಪುರ, ಫೆಬ್ರವರಿ 12: ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಕುಖ್ಯಾತ ರೌಡಿ ಚಂದಪ್ಪ ಹರಿಜನ ಬಲಗೈ ಬಂಟನಾಗಿದ್ದ ಬಾಗಪ್ಪ ಹರಿಜನನನ್ನು ವಿಜಯಪುರ ನಗರದ ಆಕಾಶವಾಣಿ ಬಳಿ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ವಿಜಯಪುರ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದಾರೆ.

ಮಂಗಳವಾರ ರಾತ್ರಿ ಬಾಗಪ್ಪ ಹರಿಜನನನ್ನು ಮದಿನಾ ನಗರದಲ್ಲಿ ಬಾಡಿಗೆ ಮನೆಯ ಮುಂಭಾಗದಲ್ಲಿಯೇ ಹತ್ಯೆ ಮಾಡಲಾಗಿದೆ. ಬಾಗಪ್ಪ ಹರಿಜನ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ಮಾಡಿದ್ದು, ಮುಚ್ಚಿನಿಂದ ತಲೆ, ಮುಖ ಸೇರಿದಂತೆ ವಿವಿಧ ಭಾಗಕ್ಕೆ ಹೊಡೆದು ಭೀಕರವಾಗಿ ಹತ್ಯೆ ಮಾಡಲಾಗಿದೆ.

Gangster Bhagappa Harijan Murdered In Vijayapura

ಜೈಲಿನಿಂದ ಬಿಡುಗಡೆಯಾದ ಬಳಿಕ ಬಾಗಪ್ಪ ಹರಿಜನ "ನಾನೂ ಕೂಡಾ ಸಾಮಾನ್ಯರಂತೆ ಬದುಕಬೇಕು ಎಂದುಕೊಂಡಿದ್ದೇನೆ. ಆದರೆ ವಿರೋಧಿಗಳು ಬಿಡುತ್ತಿಲ್ಲ" ಎಂದು ಹೇಳಿಕೊಂಡಿದ್ದರು. ಕೊಲೆ, ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ ಬಾಗಪ್ಪ ಹರಿಜನ ಸಹ ಕೊಲೆಯಾಗಿದ್ದಾನೆ.

ಬಾಗಪ್ಪ ಹರಿಜನ ಹತ್ಯೆಯಾದ ಸ್ಥಳಕ್ಕೆ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಾಗಪ್ಪ ಹರಿಜನ ಹತ್ಯೆ ಮಾಡಿದ ಆರೋಪಿಗಳ ಪತ್ತೆಗೆ ಎಎಸ್‌ಪಿ ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ.

ಕೋರ್ಟ್ ಆವರಣದಲ್ಲಿಯೇ ಹತ್ಯೆ ಯತ್ನ ನಡೆದಿತ್ತು: ಭೀಮಾ ತೀರದ ವಿಜಯಪುರ, ಕಲಬುರಗಿಯಲ್ಲಿ ಹಲವು ಅಪರಾಧ ಪ್ರಕರಣದಲ್ಲಿ ಬಾಗಪ್ಪ ಹರಿಜನ ಆರೋಪಿ. 2017ರ ಆಗಸ್ಟ್‌ 7ರಂದು ವಿಜಯಪುರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಬಾಗಪ್ಪ ಹರಿಜನ ಹತ್ಯೆ ಯತ್ನ ನಡೆದಿತ್ತು.

ಆತನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆರು ಗುಂಡುಗಳು ತಗುಲಿದ್ದ ಬಾಗಪ್ಪ ಹರಿಜನನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಬಳಿಕ ಬಹುತೇಕ ಆತ ಭೂಗತನಾಗಿದ್ದ.

ಬಾಗಪ್ಪ ಹರಿಜನ, "ನಾನು ಸಮಾಜಮುಖಿಯಾಗಿ ಬದುಕಬೇಕು ಎಂದು ಕೊಂಡಿದ್ದೇನೆ. ಆದರೆ ನನ್ನ ಸಹನೆಯನ್ನು ಪರೀಕ್ಷೆ ಮಾಡಬೇಡಿ. ನನ್ನ ವಿಷಯಕ್ಕೆ ಬಂದರೆ 24 ಗಂಟೆಯಲ್ಲಿ ಮತ್ತೆ ಬಂದೂಕು ಹಿಡಿಯುತ್ತೇನೆ" ಎಂದು ವಿರೋಧಿಗಳಿಗೆ ಎಚ್ಚರಿಕೆ ಕೊಟ್ಟಿದ್ದ.

ಭೀಮಾ ತೀರದ ಅಪರಾಧ ಚಟುವಟಿಕೆ, ಕೊಲೆಗಳ ಬಗ್ಗೆ 'ಭೀಮಾ ತೀರದ ಹಂತಕರು' ಎಂಬ ಸಿನಿಮಾವೇ ಕನ್ನಡದಲ್ಲಿ ಬಂದಿದೆ. 2019ರಲ್ಲಿ ರಸ್ತೆ ಅಪಘಾತದಲ್ಲಿ ಬಾಗಪ್ಪ ಹರಿಜನ ಪತ್ನಿ ಸಾವನ್ನಪ್ಪಿದ್ದರು.

ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬಾಗಪ್ಪ ಹರಿಜನ ಹತ್ಯೆ ನಡೆದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ಸದ್ಯ ಬಾಗಪ್ಪ ಹರಿಜನ ಶವ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಾಗಪ್ಪ ಹರಿಜನ ಹತ್ಯೆ ಹಿನ್ನಲೆಯಲ್ಲಿ ಪೊಲೀಸರು ವಿಜಯಪುರದಲ್ಲಿ ಹೆಚ್ಚಿನ ನಿಗಾವಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+