ವಿಜಯಪುರದಲ್ಲಿ ಸೋಂಕಿತಳ ಫೋಟೋ ಹರಿಬಿಟ್ಟ ವ್ಯಕ್ತಿ ಬಂಧನ
ವಿಜಯಪುರ, ಏಪ್ರಿಲ್ 25: ಸರ್ಕಾರದ ಆದೇಶದಂತೆ ಕೊರೊನಾ ಸೋಂಕಿತರ ಹೆಸರು ಅಥವಾ ಫೋಟೋವನ್ನು ಯಾರು ಬಹಿರಂಗಪಡಿಸುವಾಗಿಲ್ಲ. ಹೀಗಾಗಿ, ಈ ನಿಯಮ ಪಾಲಿಸದೆ ಸೋಂಕಿತಳ ಫೋಟೋ ಹರಿಬಿಟ್ಟ ವ್ಯಕ್ತಿಯನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
24 ವರ್ಷದ ಅನೀಲ ಬಾಬು ರಾಠೋಡ ಎಂಬ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಸೋಂಕಿತಳ ಫೋಟೋವನ್ನ ಹಂಚಿಕೊಂಡಿದ್ದ. ವಾಟ್ಸಾಪ್ ನಲ್ಲಿ ಈಕೆ ತನ್ನ ಗೆಳತಿ, ಈಕೆಗೆ ಕೊರೊನಾ ಬಂದಿದೆ ಎಂದು ಫೋಟೋವನ್ನು ಪೋಸ್ಟ್ ಮಾಡಿದ್ದ.
ಕೊರೊನಾ ಸೋಂಕು ಬಂದ ಯುವತಿಯ ಹೆಸರು ಹಾಗೂ ಫೋಟೋದ ಜೊತೆಗೆ ಆಕೆ ಖಾಸಗಿ ಸಂಸ್ಥೆಯ ಮೆಡಿಕಲ್ ಕಾಲೇಜ್‌ನಲ್ಲಿ ಎಂಡಿ ಮಾಡುತ್ತಿದ್ದಾಳೆ ಎಂದು ಬರೆದುಕೊಂಡಿದ್ದನಂತೆ.

ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಆದರ್ಶನಗರ ಠಾಣೆಯಲ್ಲಿ ಕಲಂ-188, 505(2), 354(D) ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಎಸ್ಪಿ ಅನುಪಮ ಅಗರವಾಲ ತಿಳಿಸಿದ್ದಾರೆ.












Click it and Unblock the Notifications