• search

ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳು

By Manjunatha
Subscribe to Oneindia Kannada
For vijayapura Updates
Allow Notification
For Daily Alerts
Keep youself updated with latest
vijayapura News

  ವಿಜಯಪುರ, ಡಿಸೆಂಬರ್ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನವಕರ್ನಾಟಕ ಪರಿವರ್ತನಾ ಯಾತ್ರೆ ಇಂದು ವಿಜಯಪುರ ಜಿಲ್ಲೆ ತಲುಪಿದೆ.

  ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ, ಬಬಲೇಶ್ವರ ಮತ್ತು ವಿಜಯಪುರ ಕಸಬಾ ತಾಲ್ಲೂಕು ಕೇಂದ್ರದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನಿಡಲಿದ್ದು, ಹಲವು ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಿದ್ದಾರೆ.

  ಬಾಗಲಕೋಟೆ: 550 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟಿಸಿದ ಸಿಎಂ

  ಸಾರ್ವಜನಿಕ ಸಮಾವೇಶದಲ್ಲಿಯೂ ಮಾತನಾಡಲಿರುವ ಮುಖ್ಯಮಂತ್ರಿಗಳು ವಿಜಯಪುರ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಿದ್ದಾರೆ.

  ಸಿದ್ದರಾಮಯ್ಯನವರ 'ನವ ಕರ್ನಾಟಕ ನಿರ್ಮಾಣ' ಯಾತ್ರೆ ವಿಜಯಪುರದತ್ತ

  ಮುಖ್ಯಮಂತ್ರಿಗಳು ಭಾಷಣದಲ್ಲಿ ಪ್ರಸ್ತಾಪ ಮಾಡಲಿರುವ ವಿಜಯಪುರ ಅಭಿವೃದ್ಧಿಗೆ ಸರ್ಕಾರದ ಕೊಡುಗೆಗಳ ಪಟ್ಟಿ ಇಂತಿದೆ...

  203 ಕೆರೆಗಳ ಭರ್ತಿ

  203 ಕೆರೆಗಳ ಭರ್ತಿ

  ವಿಜಯಪುರ ಜಿಲ್ಲೆಯ 15 ಲಕ್ಷ ಎಕರೆ ಜಮೀನಿಗೆ ಒಟ್ಟು 13,769.70 ಕೋಟಿ ರೂ. ನೀರಾವರಿ ಸೌಲಭ್ಯ ನಿಗಿದಿಪಡಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಗೆ 5398.55 ಕೋಟಿ ರೂ. ವ್ಯಯಿಸಿದ್ದು ಒಟ್ಟು 54.431 ಟಿ.ಎಂ.ಸಿ. ಯೋಜಿತ ನೀರನ್ನು ಬಳಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 203 ಕೆರೆಗಳನ್ನು 197 ಕೋಟಿ ರೂ. ವೆಚ್ಚದಲ್ಲಿ ಭರ್ತಿ ಮಾಡಲಾಗಿದ್ದು, ಐತಿಹಾಸಿಕ 25 ಬಾವಿಗಳ ಪುನಶ್ಚೇತನವಾಗಿದೆ.

  3742 ರೈತರಿಗೆ ಯಂತ್ರೋಪಕರಣ

  3742 ರೈತರಿಗೆ ಯಂತ್ರೋಪಕರಣ

  ಕೃಷಿಭಾಗ್ಯ ಯೋಜನೆಯಡಿ 16066 ಕೃಷಿ ಹೊಂಡ, 61 ಪಾಲಿಹೌಸಗಳ ನಿರ್ಮಾಣ. 16127 ಫಲಾನುಭವಿಗಳಿಗೆ ಒಟ್ಟು 17230.87 ಲಕ್ಷ ಅನುದಾನ ವೆಚ್ಚ್ಚ ಭರಿಸಲಾಗಿದೆ. ಸೂಕ್ಷ್ಮ ನೀರಾವರಿ ಯೋಜನೆಯಡಿ ್ಟ 42883 ಹೆಕ್ಟೇರ್ ಪ್ರದೇಶದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕ ಅಳವಡಿಕೆ,41,016 ರೈತರಿಗೆ ಪ್ರಯೋಜನ. 7 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆ ಚಾಲನೆಯಲ್ಲಿದ್ದು 3742 ರೈತರಿಗೆ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಲಾಗಿದೆ.

  1354.38 ಲಕ್ಷ ರೂ. ಗಳ ಪ್ರೋತ್ಸಾಹ ಧನ

  1354.38 ಲಕ್ಷ ರೂ. ಗಳ ಪ್ರೋತ್ಸಾಹ ಧನ

  ಜಿಲ್ಲೆಯ 184452 ರೈತರ 50 ಸಾವಿರ ರೂ.ವರೆಗಿನ 68547.98 ಲಕ್ಷ ರೂ. ಅಲ್ಪಾವಧಿ ಸಾಲ ಮನ್ನಾ ಮಾಡಲಾಗಿದೆ. ಪಶು ಭಾಗ್ಯ ಯೋಜನೆಯಡಿ ಪಶುಸಂಗೋಪನೆ ಜತೆಗೆ ಆಡು ಕುರಿ ಸಾಕಣೆಗಾಗಿ 1705 ರೈತರಿಗೆ 377.255 ಲಕ್ಷ ರೂ. ಸಹಾಯಧನ ವಿತರಣೆ. ಕ್ಷೀರಧಾರೆಯಡಿ ಜಿಲ್ಲೆಯ 19,999 ಫಲಾನುಭವಿಗಳಿಗೆ 1354.38 ಲಕ್ಷ ರೂ. ಗಳ ಪ್ರೋತ್ಸಾಹ ಧನವನ್ನು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.

  ರೂ. 258 ಕೋಟಿ ವೆಚ್ಚದಲ್ಲಿ ಅನ್ನಭಾಗ್ಯ ಯೋಜನೆ

  ರೂ. 258 ಕೋಟಿ ವೆಚ್ಚದಲ್ಲಿ ಅನ್ನಭಾಗ್ಯ ಯೋಜನೆ

  ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯ 19,17,192 ಮಕ್ಕಳಿಗೆ 2151.529 ಮೆಟ್ರಿಕ್ ಟನ್ ಹಾಲು ವಿತರಣೆ ವ್ಯಯಿಸಲಾದ ಹಣ ಒಟ್ಟು ರೂ. 69,09,23,061. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 3,42,313 ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ನೋಟ್ ಪುಸ್ತಕ ವಿತರಣೆ. ರೂ. 258 ಕೋಟಿ ವೆಚ್ಚದಲ್ಲಿ 417908 ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಒದಗಿಸಲಾಗಿದ್ದು ಫಲಾನುಭವಿಗಳ ಸಂಖ್ಯೆ 13,70,629.

  ವಿದ್ಯಾರ್ಥಿಗಳಿಗೆ ಊಟ, ವಸತಿಗೆ ಸಹಾಯ

  ವಿದ್ಯಾರ್ಥಿಗಳಿಗೆ ಊಟ, ವಸತಿಗೆ ಸಹಾಯ

  ಮಾತೃಪೂರ್ಣ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟವನ್ನು 26797 ಗರ್ಭಿಣಿಯರು, 27015 ಬಾಣಂತಿಯರು ಸೇರಿದಂತೆ ಒಟ್ಟು 53812 ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ 884 ಕೊರೆದ ಕೊಳವೆ ಬಾವಿಗಳಿಗೆ 707 ವಿದ್ಯುದ್ಧೀಕರಣಗೊಳಿಸಿ 650 ಪಂಪಸೆಟ್‍ಗಳನ್ನು ವಿತರಿಸಲಾಗಿದೆ. ವಿದ್ಯಾಸಿರಿ ಯೋಜನೆಯಡಿ 54017 ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಮಾಡಲಾಗಿದೆ. ಯೋಜನೆಯಡಿಯಲ್ಲಿ 3808.49 ಲಕ್ಷ ರೂ.ಗಳ ವೆಚ್ಚ ಭರಿಸಲಾಗಿದೆ.

  410.36 ಕಿಮೀ ಉದ್ದದ ರಸ್ತೆಗಳು

  410.36 ಕಿಮೀ ಉದ್ದದ ರಸ್ತೆಗಳು

  ಬಿದಾಯಿ ಯೋಜನೆಯಡಿ ಅಲ್ಪಸಂಖ್ಯಾತ ವಧುವಿನ ವಿವಾಹಕ್ಕಾಗಿ ತಲಾ ರೂ.50,000/- ರಂತೆ 2373 ಹೆಣ್ಣುಮಕ್ಕಳಿಗೆ ಒಟ್ಟು ರೂ.1186.00 ಲಕ್ಷ ಹಣವನ್ನು ನೇರ ಅವರ ಖಾತೆಗೆ ಜಮೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಒಟ್ಟು 1049 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗಿದೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ರೂ.20618.75 ಲಕ್ಷ ವೆಚ್ಚದಲ್ಲಿ ಒಟ್ಟು 410.36 ಕಿಮೀ ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

  730 ಲಕ್ಷ ರೂ. ವೆಚ್ಚದಲ್ಲಿ ಸೈಕ್ಲಿಂಗ್ ವೆಲೋಡ್ರೋಮ್

  730 ಲಕ್ಷ ರೂ. ವೆಚ್ಚದಲ್ಲಿ ಸೈಕ್ಲಿಂಗ್ ವೆಲೋಡ್ರೋಮ್

  ನಿರಂತರ ಜ್ಯೋತಿ ಯೋಜನೆಯಡಿ 1086 ಗ್ರಾಮ,ತಾಂಡಾ, ವಸತಿಗಳಿಗೆ ನಿರಂತರ ವಿದ್ಯುತ್ ಪೂರೈಸಲು 141.63 ಕೋಟಿ ರೂ. ವೆಚ್ಚದಲ್ಲಿ 98 ವಿದ್ಯುತ್ ಮಾರ್ಗಗಳ ನಿರ್ಮಾಣ. ರಾಷ್ಟ್ರ ಮತ್ತು ಅಂತರ್‍ರಾಷ್ಟ್ರೀಯ ಖ್ಯಾತಿಯ ಸೈಕ್ಲಿಸ್ಟ್‍ಗಳ ಅನುಕೂಲಕ್ಕಾಗಿ 730 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಸೈಕ್ಲಿಂಗ್ ವೆಲೋಡ್ರೋಮ್ ಕಾಮಗಾರಿ ಪ್ರಗತಿಯಲ್ಲಿದೆ.

  ಇನ್ನಷ್ಟು ವಿಜಯಪುರ ಸುದ್ದಿಗಳುView All

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  State Tour by CM Siddaramaiah has been a huge success with a host of development projects launched across the districts of Karnataka. Continuing the tour, CM will be visiting Vijayapura on December 20th.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more