ಬಿಜೆಪಿ ಪ್ರಭಾವಿ ಬಿ.ಎಲ್.ಸಂತೋಷ್ ವಿರುದ್ಧವೇ ಶಾಸಕ ಯತ್ನಾಳ್ ವಾಗ್ದಾಳಿ

ವಿಜಯಪುರ, ಅಕ್ಟೋಬರ್ 03: 'ಸಂಘಟನಾ ಚತುರ, ವೀರ, ಧೀರ ಎಂದೆಲ್ಲಾ ಹೇಳಿಕೊಳ್ಳುವ ಸಂತೋಶ್ ಉಸ್ತುವಾರಿ ವಹಿಸಿದ್ದ ಕೇರಳ, ಆಂಧ್ರಪ್ರದೇಶದಲ್ಲಿ ಬಿಜೆಪಿಗೆ ಎಷ್ಟು ಸೀಟು ಬಂದಿದೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕಿಡಿ ಕಾರಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೇರಳದಲ್ಲಿ ಐದು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಭಾಷಣ ಬಿಗಿದಿದ್ದ ಅವರು ತಂದಿದ್ದು ಎಷ್ಟು ಸೀಟು? ಒಂದೇ ಒಂದು ಲೋಕಸಭಾ ಸೀಟು ತರಲಿಲ್ಲ, ಶಬರಿಮಲೆ ವಿವಾದ ಇದ್ದರೂ ಒಂದೂ ಸೀಟು ಗೆಲ್ಲಲಿಲ್ಲ ಎಂದು ಅವರು ಹೇಳಿದರು.

ಸುಮ್ಮನೇ ಭಾಷಣ ಬಿಗಿದಿದ್ದೇ ಆಯಿತು. ಬಿ.ಎಲ್.ಸಂತೋಷ್ ಜಾತಿಯ ಕಾರಣಕ್ಕೆ ಕೆಲವು ಮಾಧ್ಯಮಗಳು ಆತನನ್ನು ಇಂದ್ರ, ಚಂದ್ರ ಎಂದವು ಅಷ್ಟೆ ಅವರಿಗೆ ಗೆಲ್ಲಿಸುವ ಛಾತಿ ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

 BJP MLA Basanagouda Patil Yatnal Lambasted On BL Santhosh

ಯಡಿಯೂರಪ್ಪ, ಅನಂತ್‌ಕುಮಾರ್ ಅವರೆಲ್ಲಾ ಹಳ್ಳಿ ಹಳ್ಳಿಗೆ ಸೈಕಲ್‌ನಲ್ಲಿ ಹೋಗಿ ಪಕ್ಷ ಕಟ್ಟಿದ್ದಾರೆ. ಇವರ ಹಾಗೆ ಎಸಿ ಕಾರಿನಲ್ಲಿ ತಿರುಗಾಡಿ ಪಕ್ಷ ಸಂಘಟನೆ ಹೆಸರಲ್ಲಿ ಮಜಾ ಮಾಡಿಲ್ಲವೆಂದು ತೀವ್ರ ವಾಗ್ದಾಳಿಯನ್ನೇ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಪಕ್ಷದ ಪ್ರಭಾವಿ ನಾಯಕರಾಗಿದ್ದು ಅವರ ವಿರುದ್ಧವೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಇದು ಭಾರಿ ವಿವಾದ ಎಬ್ಬಿಸುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+