Get Updates
Get notified of breaking news, exclusive insights, and must-see stories!

ಬಿಜಾಪುರ ನಗರ ಚುನಾವಣೆ ಫಲಿತಾಂಶ 2023: ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹಿನ್ನೆಡೆ

ಬಿಜಾಪುರ, ಮೇ, 13: ರಾಜ್ಯ ವಿಧಾನಸಭೆ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಖಾಜಾಸಾಬ್ ಮುಷ್ರಫ್‌ ಮುನ್ನಡೆ ಸಾಧಿಸಿದ್ದು, ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಹಿನ್ನೆಡೆಯಾಗಿದೆ.

ಬಿಜಾಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಖಾಜಾಸಾಬ್ ಮುಷ್ರಫ್‌ ವಿರುದ್ಧ ಕಣಕ್ಕಿಳಿದಿದ್ದಾರೆ. ಇನ್ನು ಈ ಕ್ಷೇತ್ರದಲ್ಲಿ 2,47,240 ಮತದಾರರಿದ್ದು, ಈ ಪೈಕಿ 1,24,652 ಪುರುಷ, 1,22,520 ಜನ ಮಹಿಳಾ ಮತದಾರರಿದ್ದರೆ ಇನ್ನು 68 ಇತರರಿದ್ದಾರೆ. ಹಾಗೆಯೇ ಈ ಬಾರಿ 64.68% ಮತದಾನ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಹಿಂದೆ ಕ್ಷೇತ್ರ ಕಾಂಗ್ರೆಸ್‌ ಹಿಡಿತದಲ್ಲಿತ್ತು. ಇದೀಗ ಬಿಜೆಪಿ ವಶದಲ್ಲಿದೆ. ಇಲ್ಲಿ ಮುಸ್ಲಿಂ ಸಮುದಾಯದ ಮತಗಳೇ ಹೆಚ್ಚಿರುವ ಹಿನ್ನೆಲೆ, ಧರ್ಮ ಆಧರಿತ ರಾಜಕಾರಣ ನಡೆಯುತ್ತಲೇ ಇದೆ. ಆದ್ದರಿಂದ ಕಳೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್‌ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಈ ಬಾರಿಯೂ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. ಇನ್ನು ವಿಶೇಷವೆಂದರೆ ಇಲ್ಲಿ ಲಿಂಗಾಯತರು ಹಾಗೂ ಮುಸ್ಲಿಂ ಅಭ್ಯರ್ಥಿಗಳೇ ಇದುವರೆಗೂ ಆಯ್ಕೆ ಆಗಿದ್ದು, ಲಿಂಗಾಯತ, ಮುಸ್ಲಿಂ ಮತಗಳೇ ನಿರ್ಣಾಯಕ ಆಗಿವೆ.

Bijapur city Election Result

2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್‌ ಯತ್ನಾಳ್‌ 76,308 ಮತಗಳನ್ನು ಪಡೆಯುವ ಮೂಲಕ ಗೆಲುವು ಕಂಡಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅಬ್ದುಲ್‌ ಹಮೀದ್‌ ಮುಷ್ರಿಫ್‌ 69,895 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದ್ದರು. ಇನ್ನು ಜೆಡಿಎಸ್‌ನ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಅವರು ಕೇವಲ 2,083 ಮತಗಳನ್ನು ಗಳಿಸಿದ್ದರು.

ಹಾಗೆಯೆ 2013ರಲ್ಲಿ ಕಾಂಗ್ರೆಸ್‌ನ ಮಕ್ಬುಲ್‌ ಎಸ್‌.ಭಗವಾನ್‌ 48,615 ಮತಗಳನ್ನು ಪಡೆದು ಗೆಲುವು ಕಂಡಿದ್ದು, ಈಗ ಬಿಜೆಪಿ ಶಾಸಕರಾಗಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಜೆಡಿಎಸ್‌ನಿಂದ ಸ್ಪರ್ಧಿಸಿ 39,235 ಮತ ಪಡೆಯುವ ಮೂಲಕ ಸೋಲನುಭವಿಸಿದ್ದರು. ಇನ್ನು ಬಿಜೆಪಿಯಿಂದ ಅಪ್ಪು ಪಟ್ಟಣಶೆಟ್ಟಿ ಅವರು 26,235 ಮತಗಳನ್ನು ಪಡೆದು ತೀವ್ರ ಪೈಪೋಟಿ ನಡೆಸಿದ್ದರು.

2008ರಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಸ್ಪರ್ಧಿಸಿದ್ದ ಅಪ್ಪು ಪಟ್ಟಣಶೆಟ್ಟಿ ಅವರು 34,217 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಸಾಹೇಬ್‌ಮೊದ್ದಿನ್‌ ಅಬ್ದುಲ್‌ ರಹಿಮಾನ್‌ 16,653 ಮತಗಳನ್ನು ಪಡೆದು ಸೋಲನುಭವಿಸಿದ್ದರು. ಇನ್ನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬಂದೇನವಾಜ್‌ ಹುಸೇನ್‌ಸಾಬ್‌ 15,696 ಮತಗಳನ್ನು ಪಡೆಯುವ ಮೂಲಕ ಕೊನೆಯ ಸ್ಥಾನವನ್ನು ಅಲಂಕರಿಸಿದ್ದರು. ಮತ್ತೊಂದೆಡೆ ಈ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿರುವುದು ವಿಶೇಷವಾಗಿದೆ.

ವಿಜಯಪುರ ವಿಧಾನಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರವನ್ನು ನೋಡುವುದಾದರೆ, ಇಲ್ಲಿ 67,000 ಮುಸ್ಲಿಂ ಮತದಾರರು, ಬಣಜಿಗ ಮತ್ತು ಪಂಚಮಸಾಲಿ ಮತಗಳು ಪ್ರಮುಖ ಆಗಲಿದ್ದು, ಎರಡು ಸಮುದಾಯಗಳು ಕ್ರಮವಾಗಿ 28,000 ಹಾಗೂ 25,000 ಮತಗಳನ್ನು ಹೊಂದಿವೆ. ಇನ್ನು ಗಾಣಿಗ ಸಮುದಾಯ 20,000 ಮತಗಳು, ಮರಾಠಾ ಸಮುದಾಯ 10,500 ಮತಗಳು, ಕುರುಬ 9,000 ಮತಗಳು, ಎಸ್‌ಸಿ, ಎಸ್‌ಟಿ 37,000, 15,000 ಬ್ರಾಹ್ಮಣ ಮತದಾರರಿದ್ದರೆ, ಇತರೆ 34,645 ಮತಗಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+