ವಿಜಯಪುರ : ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ವಿಜಯಪುರ, ಫೆಬ್ರವರಿ 25 : ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರದಲ್ಲಿ ಭಾನುವಾರ ಬೆಳಗ್ಗೆ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು.

ಭಾನುವಾರ ಮುಂಜಾನೆ ವೃಕ್ಷ ಅಭಿಯಾನ ಟ್ರಸ್ಟ್‌ ವಿಜಯಪುರದಲ್ಲಿ 'ವೃಕ್ಷೋತ್ಥಾನ್ 2018' ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಿತ್ತು. ಹಸಿರು ‌ವಿಜಯಪುರ ನಿರ್ಮಾಣಕ್ಕಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು.

ವಿಜಯಪುರದ ಗೋಳಗುಮ್ಮಟ ಆವರಣದಲ್ಲಿ ರಾಹುಲ್ ಗಾಂಧಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

rahul gandhi

ನೂರಾರು ಸ್ಪರ್ಧಿಗಳು ಹಾಫ್ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡಿದ್ದರು. ನಟ ಯಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 2017 ರಿಂದ ಹಸಿರು ವಿಜಯಪುರಕ್ಕಾಗಿ ಮ್ಯಾರಾಥಾನ್ ನಡೆಸಲಾಗುತ್ತಿದೆ.

ಏನಿದು ಹಸಿರು ವಿಜಯಪುರ? : ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲು 2017ರಿಂದ ಮ್ಯಾರಾಥಾನ್ ಆಯೋಜನೆ ಮಾಡಲಾಗುತ್ತಿದೆ. ಜಿಲ್ಲಾಡಳಿತ ಮತ್ತು ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಮ್ಯಾರಾಥಾನ್‌ ಆಯೋಜಿಸಲಾಗುತ್ತದೆ.

yash

ಹಸಿರು ವಿಜಯಪುರ ಹಾಗೂ ಸ್ಮಾರಕಗಳ ಸಂಕರಕ್ಷಣೆಗಾಗಿ ಮ್ಯಾರಾಥಾನ್ ಆಯೋಜಿಸಲಾಗುತ್ತದೆ. ರಾಹುಲ್ ಗಾಂಧಿ ಅವರು ಕರ್ನಾಟಕ ಪ್ರವಾಸದಲ್ಲಿದ್ದು ಅವರು ಇಂದು ಮ್ಯಾರಾಥಾನ್‌ಗೆ ಚಾಲನೆ ಕೊಟ್ಟರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+