Union Budget 2023: ಬಜೆಟ್ ನಿರೀಕ್ಷೆಯಲ್ಲಿ ಜಿಗಿದ ಷೇರುಪೇಟೆ: ಸೆನ್ಸೆಕ್ಷ್ 516.97, ನಿಫ್ಟಿ 153.15 ಏರಿಕೆ

ಬುಧವಾರ ಬೆಳಗ್ಗೆ 10ಗಂಟೆ ವೇಳೆಗೆ ಕೇಂದ್ರ ಬಜೆಟ್​​​ ಮಂಡನೆಯಾಗುವ ಅದರ ನಿರೀಕ್ಷೆಯಲ್ಲಿ ಷೇರು ಮಾರುಕಟ್ಟೆಗಳ ವಹಿವಾಟಿನಲ್ಲಿ ಏರಿಕೆ ಆಗಿದೆ. ಸೆನ್ಸೆಕ್ಸ, ನಿಫ್ಟಿ ಜಿಗಿತ ಕಂಡಿದೆ.

ಮುಂಬೈ, ಫೆಬ್ರುವರಿ 01: ಬುಧವಾರ ಕೇಂದ್ರ ಬಜೆಟ್​​​ (Budget 2023) ಮಂಡನೆಯಾಗುವ ಮುನ್ನವೇ ಅದರ ನಿರೀಕ್ಷೆಯಲ್ಲಿ ಷೇರು ಮಾರುಕಟ್ಟೆಗಳಲ್ಲಿ ಬೆಳಗ್ಗೆಯೇ ವಹಿವಾಟಿನಲ್ಲಿ ಏರಿಕೆ ಆಗಿದೆ. ಬಿಎಸ್​ಇ ಸೆನ್ಸೆಕ್ಸ್ ಜಿಗಿತ ಕಂಡಿದೆ. ಬಜೆಟ್ ಉತ್ತಮವಾಗಿದ್ದರೆ ನಿರೀಕ್ಷೆ, ಗಳಿಕೆ ಉತ್ತಮವಾಗಿರುತ್ತದೆ ಎಂದು ಹೂಡಿಕೆ ತಜ್ಞರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ 10 ಗಂಟೆ ವೇಳೆಗೆ ಸೆನ್ಸೆಕ್ಸ್ 516.97 ಚೇತರಿಸಿ 60,066.87 ಆಗಿದೆ. ಇನ್ನು ಎನ್​ಎಸ್​​ಇ ನಿಫ್ಟಿ ಅಂಶವು 153.15ರಿಂದ ಚೇತರಿಸಿಕೊಂಡು 17,815.30 ಏರಿಕೆ ಆಗಿದೆ.

ಹಲವು ರಾಷ್ಟ್ರೀಯ ಬ್ಯಾಂಕ್‌ಗಳು ಉತ್ತಮ ಗಳಿಕೆ ಸಾಧಿಸಿವೆ. ಆ ಪೈಕಿ ಸೆನ್ಸೆಕ್ಸ್​​ನಲ್ಲಿ ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಏಷ್ಯನ್ ಪೈಂಟ್ಸ್, ಟಾಟಾ ಸ್ಟೀಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಎನ್​ಟಿಪಿಸಿ ಹಾಗೂ ಟೈಟಾನ್ ಆರಂಭಿಕ ವಹಿವಾಟುಗಳಲ್ಲಿ ಅಧಿಕ ಗಳಿಕೆ ಕಂಡಿವೆ. ಆದರೆ ಐಟಿಸಿ, ಮಹೀಂದ್ರಾ ಮತ್ತು ಮಹೀಂದ್ರಾ, ಅಲ್ಟ್ರಾಟೆಕ್ ಸಿಮೆಂಟ್‌ಕಂಪೆನಿಗಳ ಆರಂಭಿಕ ವಹಿವಾಟಿನಲ್ಲಿ ಕುಸಿತವಾಗಿದೆ.

Union Budget 2023: ಬಜೆಟ್ ನಿರೀಕ್ಷೆ, ಸೆನ್ಸೆಕ್ಷ್, ನಿಫ್ಟಿ ಜಿಗಿತ

ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್​​ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಅವರು, ಆರ್ಥಿಕ ಸಮೀಕ್ಷೆಯು ಕಾರ್ಪೊರೇಟ್ ಗಳಿಕೆ ಹಾಗೂ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಆಶಾದಾಯವಾಗಿರಲಿದೆ. ಈ ಸಮೀಕ್ಷೆ ಮಧ್ಯಮ ಅವಧಿಯ ಮಾರುಕಟ್ಟೆಗಳಿಗೆ ಉತ್ತಮ ಭವಿಷ್ಯದ ಬಗ್ಗೆ ಮುನ್ಸೂಚನೆ ನೀಡಿದೆ ಎಂದರು.

ಈ ಆರ್ಥಿ ಸಮೀಕ್ಷೆ ಪ್ರಕಾರ, ದೇಶದಲ್ಲಿ 2023-24ರಲ್ಲಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (GDP) ಬೆಳವಣಿಗೆಯ ದರವು ಶೇ. 6 ರಿಂದ 6.8 ದರದಲ್ಲಿದೆ. ಇದು ಇತ್ತೀಚೆಗಿನ ಮೂರು ವರ್ಷದಲ್ಲೇ ಅತ್ಯಂತ ನಿಧಾನಗತಿ ಬೆಳೆವಣಿಗೆ ಎಂದು ಸಹ ಸಮೀಕ್ಷೆಯು ಅಂದಾಜಿಸಿದೆ. ವಿಶ್ವದ ರಾಷ್ಟ್ರಗಳ ಪೈಕಿ ಭಾರತವು ಅಭಿವೃದ್ಧಿ ಸಾಲಿನಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ಹಣದುಬ್ಬರ ಸಮಸ್ಯೆ ಕಡಿಮೆಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದ ನಂತರವ ದೇಶಕ್ಕೆ ವಿದೇಶ ಬಂಡವಾಳ ಹೂಡಿಕೆ ವ್ಯಾಪಕವಾಗಿ ಹರಿದು ಬರುತ್ತಿದೆ.

ಆರ್ಥಿಕ ಹಿಂಜರಿತದ ಪರಿಸ್ಥಿತಿಗಳು, ಹಣದುಬ್ಬರ ಸಮಸ್ಯೆ ಹಾಗೂ ಟೆಕ್ ಕಂಪನಿಗಳಲ್ಲಿನ ಉದ್ಯೋಗ ಕಡಿತವು ಭಾರತದ ಕಂಪನಿಗಳ ಮೇಲೆ ಹೂಡಿಕೆ ಹೆಚ್ಚಾಗುವಂತೆ ಮಾಡಿದೆ ಎಂದು ಮಂಗಳವಾರ ಬಿಡುಗಡೆಯಾದ ಆರ್ಥಿಕ ಸಮೀಕ್ಷೆ ತಿಳಿಸಿದೆ.

Union Budget 2023: ಬಜೆಟ್ ನಿರೀಕ್ಷೆ, ಸೆನ್ಸೆಕ್ಷ್, ನಿಫ್ಟಿ ಜಿಗಿತ

ಸೆನ್ಸೆಕ್ಸ ದರ ಏರಿಕೆ ಆಶಾಧಾಯಕ

ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ವರದಿ ಪ್ರಕಾರ ಅದಾನಿ ಸಮೂಹದ ಕಂಪನಿಗಳ ಷೇರು ದರ ಅತ್ಯಧಿಕ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಈ ಕುಸಿತವು ದೇಶದ ಷೇರು ಮಾರುಕಟ್ಟೆಗಳ ಒಟ್ಟು ವಹಿವಾಟಿನ ಮೇಲೂ ಪರಿಣಾಮ ಬೀರಿತ್ತು. ಇದರ ಮಧ್ಯೆ ಬಜೆಟ್ 2023 ನಿರೀಕ್ಷೆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅಂಸಗಳ ಜಿಗಿತವು ಮಾರುಕಟ್ಟೆಯ ಹೂಡಿಕೆದಾರರಲ್ಲಿ ಭರವಸೆ ತಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+