ಉಡುಪಿ: ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸಾದ ಯುವಕ

ಉಡುಪಿ, ಅಕ್ಟೋಬರ್ 1: ಕುಂದಾಪುರದ ಕಟ್ ಬೆಲ್ತೂರು ಗ್ರಾಮದಲ್ಲಿ ಆರು ವರ್ಷಗಳ ಹಿಂದ ಸತೀಶ್ ಎಂಬಾತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಇದೀಗ ಆತ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾನೆ.

ಕುಂದಾಪುರ ತಾಲೂಕು ಕಟ್ ಬೆಲ್ತೂರು ಗ್ರಾಮದ ನಿವಾಸಿ ಶಿವರಾಮ ಪೂಜಾರಿ ಮತ್ತು ಸುಜಾತಾ ಪೂಜಾರಿ ಪುತ್ರ ಸುಕೇಶ್ ಪೂಜಾರಿ (24) ತನ್ನ 18 ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮ ಸ್ವೀಕರಿಸಿ ತಯಬ್ ಶಿಯಾನ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಆದರೆ, ಇತ್ತೀಚೆಗೆ ಆತ ಮಾನಸಿಕವಾಗಿ ಜರ್ಝರಿತನಾಗಿದ್ದ. ಈತನನ್ನು ಸ್ಥಳೀಯರು 2016ರ ಮಾರ್ಚ್ 23ರಂದು ಕೇರಳದ ಎರ್ನಾಕುಲಂನ ಕಂಡನಾಡು ಸಮೀಪದಲ್ಲಿರುವ ಚೂರಕ್ಕಾಡ್ ಶಿವಶಕ್ತಿ ಯೋಗ ವಿದ್ಯಾ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ಸತೀಶ್ ಮನಸ್ಸು ಪರಿವರ್ತನೆಗೊಂಡಿದ್ದು ಮತ್ತೆ ಹಿಂದೂ ಧರ್ಮಕ್ಕೆ ಬಂದಿದ್ದಾರೆ.

Youth who was converted from Hindu to Muslim comes back to Hinduism in Udupi

ಸುಕೇಶ್ ಹಿಂದೂ ಧರ್ಮಕೆ ಮರಳಿರುವುದಕ್ಕೆ ಕುಂದಾಪುರದ ಹೆಮ್ಮಾಡಿ ಪರಿಸರದ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಹಿಂದು ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡ ಅನೇಕ ಯುವಕ ಯುವತಿಯರು ಶಿವಶಕ್ತಿ ಯೋಗ ವಿದ್ಯಾಕೇಂದ್ರದ ಮೂಲಕ ಹಿಂದೂ ಧರ್ಮಕ್ಕೆ ಮರಳಿದ್ದು, ಬೇರೆ ಬೇರೆ ರಾಜ್ಯಗಳ ಯುವಕ-ಯುವತಿಯರು ಸನಾತನ ಧರ್ಮದ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+