ಉಡುಪಿ; ದಾರಿಯಲ್ಲಿ ನೋಟು ಎಸೆದು ಆತಂಕ ಸೃಷ್ಟಿಸಿದ ಯುವಕ

ಉಡುಪಿ, ಏಪ್ರಿಲ್ 13: ಕೃಷ್ಣ ಮಠ ಸಮೀಪದ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ನೋಟಿನ ಕಂತೆ ಎಸೆಯುತ್ತಾ ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ.

ಇಂದು ಯುವಕನೊಬ್ಬ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನು ಎಸೆದಿದ್ದಾನೆ. ನೋಟಿನ ಕಟ್ಟುಗಳನ್ನು ಕೈಗಳಲ್ಲಿ ಹಿಡಿದುಕೊಂಡು ಬಂದ ಈ ಯುವಕ ಎರಡು ಸಾವಿರ, ಐನೂರು ಹಾಗೂ ಇನ್ನೂರರ ನೋಟುಗಳನ್ನು ರಸ್ತೆಯಲ್ಲಿ ಚೆಲ್ಲಿಕೊಂಡು ಹೋಗಿದ್ದಾನೆ. ಯುವಕ ನೋಟುಗಳನ್ನು ಎಸೆಯುತ್ತಿದ್ದುದನ್ನು ನೋಡಿದ ಜನ ನೋಟು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ.

ಆದರೆ ಈ ನೋಟುಗಳೆಲ್ಲವೂ ನಕಲಿ ನೋಟುಗಳೆಂಬುದು ತಿಳಿಯುತ್ತಿದ್ದಂತೆ ಜನ ಕೂಡಲೇ ಯುವಕನನ್ನು ಹಿಡಿಯಲು ಯತ್ನಿಸಿದ್ದಾರೆ. ಯುವಕ ಪರಾರಿಯಾಗಿದ್ದಾನೆ. ಜೆರಾಕ್ಸ್ ಮಾಡಲಾದ ಈ ನಕಲಿ ನೋಟುಗಳನ್ನು ಸಂಗ್ರಹಿಸಿ ನಗರ ಠಾಣಾ ಪೊಲೀಸರಿಗೆ ಒಪ್ಪಿಸಲಾಗಿದೆ.

Youth Create Panic By Throwing Duplicate Notes In Krishna Math Road

ಈ ಯುವಕ ಹೀಗೆ ನಕಲಿ ನೋಟುಗಳನ್ನು ಎಸೆಯುತ್ತಿದ್ದ ದೃಶ್ಯ ಉಡುಪಿಯ ವಾದಿರಾಜ ರಸ್ತೆಯಲ್ಲಿರುವ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಯುವಕ ಮಾಸ್ಕ್ ನಿಂದ ಮುಚ್ಚಿಕೊಂಡು ನಕಲಿ ನೋಟುಗಳನ್ನು ಎಸೆದುಕೊಂಡು ಹೋಗಿರುವುದು ಕಂಡುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+