ಕೋವಿಡ್ ಉಲ್ಲಂಘನೆ: ಉಡುಪಿಯಲ್ಲಿ ದಂಡದ ರೂಪದಲ್ಲಿ ಸಂಗ್ರಹಿಸಿದ ಮೊತ್ತವೆಷ್ಟು?

ಉಡುಪಿ, ನವೆಂಬರ್ 9: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಮತ್ತು ನಂತರದ ದಿನಗಳಲ್ಲಿ ಪೊಲೀಸರು ಜನರ ನಿಯಂತ್ರಣಕ್ಕೆ ಸಾಕಷ್ಟು ಬಿಗಿ ಕ್ರಮ ಕೈಗೊಂಡಿದ್ದರು. ಈ ಅವಧಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಗಾಗಿ 14,134 ಪ್ರಕರಣಗಳಲ್ಲಿ 15.72 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದ 47 ಪ್ರಕರಣ (4,700ರೂ.) ಭಾನುವಾರ ದಾಖಲಾಗಿದ್ದು, ಈ ತನಕ ಒಟ್ಟು 14,134 ಪ್ರಕರಣದಲ್ಲಿ 15,72,050 ರೂ. ದಂಡ ವಸೂಲಾಗಿದೆ.

ಐದು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2 ಪ್ರಕರಣ(200 ರೂ.) ಸಹಿತ ಈ ತನಕ ಒಟ್ಟು 2,103 ಪ್ರಕರಣದಲ್ಲಿ 2,12,000 ರೂ. ದಂಡ ಸ್ವೀಕರಿಸಲಾಗಿದೆ.

Udupi: Violation Of Covid-19 Rules And Penalty Amount During The Lockdown

ಏಳು ತಾಲೂಕಿನ 155 ಗ್ರಾ.ಪಂ ವ್ಯಾಪ್ತಿಯಲ್ಲಿ ಶುಕ್ರವಾರ 5 ಪ್ರಕರಣ (500 ರೂ.) ಸಹಿತ ಈ ತನಕ ಒಟ್ಟು 2,791 ಪ್ರಕರಣಗಳಲ್ಲಿ 2,81,500 ರೂ. ವಸೂಲಾಗಿದೆ.

ಪೊಲೀಸ್ ಇಲಾಖೆ ವತಿಯಿಂದ 39 ಪ್ರಕರಣ 3,900 ರೂ. ಸಹಿತ ಈ ತನಕ 8,631 ಪ್ರಕರಣಗಳಿಂದ 10,17,650 ರೂ., ಅಬಕಾರಿ ಇಲಾಖೆಯಿಂದ 1 ಪ್ರಕರಣ 100ರೂ. ಸಹಿತ ಈ ತನಕ 166 ಪ್ರಕರಣ 16,600 ರೂ. ಹಾಗೂ ಕಂದಾಯ ಇಲಾಖೆ ವತಿಯಿಂದ ಈ ತನಕ 438 ಪ್ರಕರಣಗಳಿಂದ 44,300 ರೂ. ದಾಖಲಾಗಿದೆ.

Recommended Video

      ಚುನಾವಣೆ ಸೋಲೇ ವಿಚ್ಛೇದನಕ್ಕೆ ಕಾರಣನಾ? | Melaina to divorce Donald Trump? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+