ಬಾಟಲಿ ಹಿಡಿದು ಕುಣಿದಿದ್ದ ಹುಡುಗರು ಕ್ಷಮೆ ಕೇಳಿದ ವಿಡಿಯೋ ವೈರಲ್

Recommended Video

      Boys who danced with bottle imitating the vaishnavi krishna dance apolized

      ಉಡುಪಿ, ಸೆಪ್ಟೆಂಬರ್ 9: ಗೋಕುಲಾಷ್ಟಮಿಯಂದು 'ಗೋಕುಲ ಪಾಲಕನೇ' ಎಂದು ಕುಣಿಯುತ್ತಾ ಯುವಜನತೆ ಎದೆಯಲ್ಲಿ ಕಚಗುಳಿ ಇಟ್ಟ ಕೃಷ್ಣ ವೇಷಧಾರಿ ವೈಷ್ಣವಿ ಅದೆಷ್ಟು ವೈರಲ್ ಆಗ್ಬಿಟ್ಲು ಗೊತ್ತಲ್ವಾ!

      ಯಾರ ಡಿಪಿಯಲ್ಲಿ ನೋಡಿದ್ರೂ ಅವಳದ್ದೇ ವಿಡಿಯೋ, ಅವಳದ್ದೇ ಫೋಟೋ. ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಕೃಷ್ಣ ವೇಷ ಧರಿಸಿ ಕುಣಿಯುತ್ತಾ ಮೊಸರಿನ ಕುಡಿಕೆ ಒಡೆದ ವೈಷ್ಣವಿಯ ಹೆಜ್ಜೆಗಳು, ಎಕ್ಸ್ ಪ್ರೆಷನ್ ಗಳಿಗೆ ಮಾರು ಹೋಗದವರೇ ಇಲ್ಲ. ಆನಂತರ ಅದೇ ಹಾಡಿಗೆ, ಅವಳದ್ದೇ ಅಭಿನಯ ಮಾಡುತ್ತಾ ಬಂದ ಟಿಕ್ ಟಾಕ್ ಗಳೆಷ್ಟೋ!

      ಚಿಕ್ಕಮಗಳೂರಿನ ಯುವಕರಿಗೂ ಈ ಹಾಡು ನೋಡಿ ಅದೆಷ್ಟು ನಶೆ ಏರಿತು ಅಂದ್ರೆ? ಚೌತಿ ಬಂದಾಗ, ಅವರೂ ಒಂದು ಬಿಯರ್ ಬಾಟಲ್ ಹಿಡ್ಕೊಂಡು ಟಿಕ್ ಟಾಕ್ ಮಾಡಿದ್ರು. ಮೊಸರಿನ ಕುಡಿಕೆಯ ಬದಲಿಗೆ ಬಿಯರ್ ಬಾಟಲ್ ಒಡೆದಂತೆ ಅಭಿನಯಿಸಿದ ಟಿಕ್ ಟಾಕ್ ಕೂಡಾ ವೈರಲ್ ಆಗಿತ್ತು. ಇದರಿಂದ ಕೋಪಗೊಂಡ, ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಬಜರಂಗದಳದ ಯುವಕರು ಟಿಕ್ ಟಾಕ್ ವೀರರ ವಿಳಾಸ ಪತ್ತೆ ಮಾಡಿದ್ದಾರೆ.

      Video Of Boys Who Danced With Bottle And Apolized Gone Viral

      ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾದರು. ಇದರಿಂದ ಕಸಿವಿಸಿಕೊಂಡ ಈ ತರುಣರು ಕ್ಷಮೆ ಕೇಳುವ ವಿಡಿಯೋ ಮಾಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕೂಡ ವೈರಲ್ ಆಗ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+