ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್‌ಎಸ್‌ಎಸ್‌ ಸ್ವಯಂಸೇವಕರಿಗೆ ಉಚಿತ 'ಕಾಂತಾರ' ಟಿಕೆಟ್‌

|
Google Oneindia Kannada News

ಉಡುಪಿ, ಅಕ್ಟೋಬರ್‌ 18: ಉಡುಪಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರ್‌ಎಸ್‌ಎಸ್‌ ಸ್ವಯಂಸೇವಕರಿಗೆ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ನಡೆದ ಗದ್ದೆಯ ಕಳೆ ಕೀಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಭತ್ತದ ಗದ್ದೆಗೆ ಇಳಿದು ಇಡೀ ದಿನ ಬೆಳೆಗಳ ನಡುವಿನ ಕಳೆ ತೆಗೆದ ವಿದ್ಯಾರ್ಥಿಗಳಿಗೆ ಶಾಸಕ ರಘುಪತಿ ಭಟ್‌ ವಿಶೇಷ ಉಡುಗೊರೆ ನೀಡಿದ್ದಾರೆ.

ಉಡುಪಿ; ಅಕ್ಟೋಬರ್ 19ರಂದು ಮಿನಿ ಉದ್ಯೋಗ ಮೇಳಉಡುಪಿ; ಅಕ್ಟೋಬರ್ 19ರಂದು ಮಿನಿ ಉದ್ಯೋಗ ಮೇಳ

ಕೇದಾರೋತ್ಥಾನ ಟ್ರಸ್ಟ್ ಮೂಲಕ ಪಾಳು ಬಿದ್ದ ಕೃಷಿ ಭೂಮಿಗಳಲ್ಲಿ ಸಾಗುವಳಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಈ ವರ್ಷ ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ನಡೆದ ಗದ್ದೆಯ ಕಳೆ ಕೀಳುವ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರ್‌ಎಸ್‌ಎಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಕಳೆದ ಬಾರಿ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಭತ್ತದ ಗದ್ದೆ ಕಳೆ ಕೀಳುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಕಾಂತಾರ ಚಿತ್ರವನ್ನು ಉಚಿತವಾಗಿ ನೋಡಲು ಅವಕಾಶ

ಕಾಂತಾರ ಚಿತ್ರವನ್ನು ಉಚಿತವಾಗಿ ನೋಡಲು ಅವಕಾಶ

ಈ ಹಿನ್ನೆಲೆಯಲ್ಲಿ ಇಂದು ಗದ್ದೆಯ ಕಳೆ ಕೀಳುವ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಸಕ ರಘುಪತಿ ಭಟ್‌ ರಿಷಬ್‌ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರವನ್ನು ಉಚಿತವಾಗಿ ನೋಡಲು ಅವಕಾಶ ಮಾಡಿಕೊಡುವ ಭರವಸೆ ನೀಡಿದ್ದಾರೆ. ಮಣಿಪಾಲದ ಭಾರತ್‌ ಮಾಲ್‌ನಲ್ಲಿ ಸುಮಾರು 500 ಮಂದಿ ವಿದ್ಯಾರ್ಥಿಗಳಿಗೆ ಕಾಂತಾರ ವೀಕ್ಷಿಸಲು ಶಾಸಕರು ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ.

ಉಡುಪಿ: ಅಪಘಾತದಲ್ಲಿ ಮೆದುಳು ನಿಶ್ಕ್ರಿಯ: ವಿದ್ಯಾರ್ಥಿ ಸಾವಿನಲ್ಲೂ ಸಾರ್ಥಕತೆಉಡುಪಿ: ಅಪಘಾತದಲ್ಲಿ ಮೆದುಳು ನಿಶ್ಕ್ರಿಯ: ವಿದ್ಯಾರ್ಥಿ ಸಾವಿನಲ್ಲೂ ಸಾರ್ಥಕತೆ

ಕೃಷಿ ಚಟುವಟಿಕೆ ಮೆಚ್ಚಿದ ನಟ-ನಟಿಯರು

ಕೃಷಿ ಚಟುವಟಿಕೆ ಮೆಚ್ಚಿದ ನಟ-ನಟಿಯರು

ಗದ್ದೆಯ ಕಳೆ ಕೀಳುವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕ ರಘುಪತಿ ಭಟ್‌, "ಚಲನಚಿತ್ರ ನಟ-ನಟಿಯರು ಕೃಷಿ ಚಟುವಟಿಯನ್ನು ಮೆಚ್ಚಿದ್ದಾರೆ ಎಂದರೆ, ವಿದ್ಯಾರ್ಥಿಗಳಾದ ನೀವು ಈ ಚಟುವಟಿಕೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು. ಕೃಷಿಯಲ್ಲಿ ಆಸಕ್ತಿಯನ್ನು ಹೆಚ್ಚಾಗಿ ತೋರಿಸಬೇಕು. ಇದು ಒಂದು ಉತ್ತಮವಾದ ಅನುಭವ. ಈ ಅನುಭವವನ್ನು ನೀವು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಕು" ಎಂದು ಕೃಷಿ ಚಟುವಟಿಕೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಇನ್ನು "ಇಂದು ರಿಷಬ್‌ ಶೆಟ್ಟಿ ಈ ನಮ್ಮ ಕೇದಾರೋತ್ಥಾನ ಟ್ರಸ್ಟ್ ಅಭಿಯಾನವನ್ನು ರೂಪಿಸಿದ ಸವಿ ನೆನಪಿಗಾಗಿ. ಕೇದಾರೋತ್ಥಾನ ಟ್ರಸ್ಟ್‌ನಿಂದ ನಾವು ಕಾರ್ಯಕ್ರಮವೊಂದನ್ನು ಮಾಡಿದ್ದೇನೆ. ಇಂದು ಕಳೆ ಕೀಳುವ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ. ನಿಮೆಲ್ಲರಿಗೂ ಕಾಂತಾರ ಸಿನಿಮಾವನ್ನು ಉಚಿತವಾಗಿ ತೋರಿಸುತ್ತೇವೆ," ಎಂದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.

"ಈ ಹಿಂದೆ ನಾವು ಕಾಂತಾರದ 200 ಟಿಕೆಟ್‌ ಬುಕ್‌ ಮಾಡಿದ್ದೇವು. ಈಗ ಇಲ್ಲಿಗೆ ಬಂದ ಮೇಲೆ 450 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ, ಒಟ್ಟು 500 ಟಿಕೆಟ್‌ ಬುಕ್ ಮಾಡುತ್ತೇವೆ. ಮಣಿಪಾಲದ ಭಾರತ್‌ ಮಾಲ್‌ನಲ್ಲಿ 500 ಟಿಕೆಟ್‌ ಬುಕ್ ಮಾಡುತ್ತೇವೆ" ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

ರಿಷಬ್‌ ಶೆಟ್ಟಿ ನಿರ್ದೇಶನಕ್ಕೆ ಭಾರಿ ಮೆಚ್ಚುಗೆ

ರಿಷಬ್‌ ಶೆಟ್ಟಿ ನಿರ್ದೇಶನಕ್ಕೆ ಭಾರಿ ಮೆಚ್ಚುಗೆ

ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುದರ ಜೊತೆಗೆ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿ ಮುನ್ನುಗ್ಗುತ್ತಿದೆ. ಕರಾವಳಿ ಸಂಸ್ಕೃತಿ ಮತ್ತು ಆಚರಣೆಗಳನ್ನು ಹೊತ್ತು ತಂದ ಕಾಂತಾರ ಚಿತ್ರ ಎಲ್ಲಾ ರೀತಿಯ ಪ್ರೇಕ್ಷರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

ಸಪ್ಟೆಂಬರ್‌ 30ರಂದು ತೆರೆಕಂಡ ಕಾಂತಾರ ಚಿತ್ರ ಇಂದಿಗೂ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿದೆ. ಮೊದಲು ಕನ್ನಡದಲ್ಲಿ ತೆರೆಕಂಡ ಕಾಂತಾರ ಸದ್ಯ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಡಬ್‌ ಆಗಿದ್ದು, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸುತ್ತಿದೆ. ಕೇವಲ ಪ್ರೇಕ್ಷಕರಷ್ಟೇ ಅಲ್ಲದೇ ಎಲ್ಲಾ ಭಾಷೆಯ ನಟ-ನಟಿಯರು ರಿಷಬ್‌ ಶೆಟ್ಟಿ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Udupi MLA Raghupathi Bhat Promise Free Kantara movie ticket for NSS Volunteers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X