ಉಡುಪಿ: ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

ಉಡುಪಿ, ಮೇ 26: ಕುಡಿಯುವ ನೀರಿನ ಸಮಸ್ಯೆಯಿಂದ ಉಡುಪಿ ಜಿಲ್ಲೆ ತತ್ತರಿಸುತ್ತಿದೆ. ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನಲ್ಲಿ ಮಳೆಯ ಕೊರತೆ ಕಾರಣದಿಂದ ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಇನ್ನು 10-12 ದಿನಗಳಲ್ಲಿ ಮುಂಗಾರು ಮಳೆ ಆಗಮನದ ನಿರೀಕ್ಷೆಯಿದೆ ಎಂದು ಉಡುಪಿ ನಗರ ಸಭೆ ಆಶಿಸಿದೆ.

ಹೀಗಾಗಿ, ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‌ಗಳಿಗೆ ಮೇ 27ರಿಂದ ಈ ಮುಂದಿನ ವೇಳಾಪಟ್ಟಿಯಂತೆ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು ಎಂದು ಪೌರಾಯುಕ್ತ ಡಿ ಮಂಜುನಾಥಯ್ಯ ಅವರು ಹೇಳಿದ್ದಾರೆ.

Udupi district water supply once in three days

ಮುಂಜಾನೆ 4:30ರಿಂದ 9:30ರವರೆಗೆ : ಅಜ್ಜರಕಾಡು, ಕಿನ್ನಿಮೂಲ್ಕಿ, ತೆಂಕಪೇಟೆ, ಒಳಕಾಡು, ಬೈಲೂರು, ಶಿರಿಬೀಡು, ಬನ್ನಂಜೆ, ಅಂಬಲಪಾಡಿ, ಚಿಟ್ಪಾಡಿ, ನಿಟ್ಟೂರು, ಕರಂಬಳ್ಳಿ, ಕಕ್ಕುಂಜೆ, ಕಡಿಯಾಳಿ, ಗುಂಡಿಬೈಲು (ದೊಡ್ಡಣಗುಡ್ಡೆ) ಪ್ರದೇಶಗಳಲ್ಲಿ

ಬೆಳಗ್ಗೆ 9:30ರಿಂದ ಮಧ್ಯಾಹ್ನ 1 ಗಂಟೆಯವರೆಗೆ: ಇಂದಿರಾ ನಗರ, ಕಸ್ತೂರ್ಬಾ ನಗರ, ಬಡಗುಬೆಟ್ಟು, ಕುಂಜಿಬೆಟ್ಟು, ಇಂದ್ರಾಳಿ, ಮಂಚಿ, ಸುಬ್ರಹ್ಮಣ್ಯ ನಗರ, ಗೋಪಾಲಪುರ, ಮೂಡುಬೆಟ್ಟು, ಮೂಡುಪೆರಂಪಳ್ಳಿ, ಸಗ್ರಿ, ಕೊಡಂಕೂರು, ಕೊಡವೂರು ಪ್ರದೇಶಗಳಿಗೆ ಪರ್ಕಳ, ಸೆಟ್ಟಿಬೆಟ್ಟು

ಮುಂಜಾನೆ 5:30ರಿಂದ 8:30ರವರೆಗೆ: ಕೊಡವೂರು (ಭಾಗಶಃ), ಕಲ್ಮಾಡಿ, ಈಶ್ವರನಗರ, ಸರಳೇಬೆಟ್ಟು, ಮಲ್ಪೆ ಸೆಂಟ್ರಲ್, ವಡಬಾಂಡೇಶ್ವರ, ಕೊಳ ಈ ಸ್ಥಳಗಳಲ್ಲಿ ಅಪರಾಹ್ನ 2 ರಿಂದ ಸಂಜೆ 6:30ರವರೆಗೆ ಹಾಗೂ ಮಣಿಪಾಲ, ಅನಂತನಗರ, ದುಗ್ಲಿಪದವು ಈ ಭಾಗಗಳಲ್ಲಿ ಮುಂಜಾನೆ 5:30ರಿಂದ 7:30ರವರೆಗೆ ನೀರು ಸರಬರಾಜು ಮಾಡಲಾಗುವುದು, ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಕೇಳಿಕೊಂಡಿದ್ದಾರೆ. (ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+