ಉಡುಪಿ ಕಲಾವಿದನ ಕುಂಚಕ್ಕೆ ಸಂದಿತು ಅಮೆರಿಕದ ಮಾನ್ಯತೆ

ಉಡುಪಿ: ಕಡಲ ತೀರದ ಕಲಾವಿದನೊಬ್ಬನ ಸಾಧನೆಗೆ ವಿಶ್ವ ಮಾನ್ಯತೆ ಸಿಕ್ಕಿದೆ. ಅಮೆರಿಕದ ವೈದ್ಯಕೀಯ ಪಠ್ಯಗ್ರಂಥವೊಂದಕ್ಕೆ ಸಾವಿರಾರು ಚಿತ್ರಗಳನ್ನು ಬರೆದು ಕೊಡುವ ಮಹತ್ವದ ಕೈಂಕರ್ಯ ಇವರನ್ನು ಹುಡುಕಿಕೊಂಡು ಬಂದಿದೆ. ಇಂಥದ್ದೊಂದು ಅಮೋಘ ಅವಕಾಶಕ್ಕೆ ಪಾತ್ರರಾಗಿರುವವರು ಉಡುಪಿಯ ಪಿ.ಎನ್ . ಆಚಾರ್ಯ.

ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೂಡಂಕೂರಿನ ಪಿ. ಎನ್. ಆಚಾರ್ಯರ (೬೬) ಮಣಿಪಾಲ ವಿವಿಯ ನಿವೃತ್ತ ಮುಖ್ಯ ಕಲಾವಿದ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿಯನ್ ಮಾಜಿ ಸದಸ್ಯರೂ ಹೌದು.

Udupi artist Acharya gets great opportunity to work with Boston University of America

ಜಗತ್ತಿನ ಶ್ರೇಷ್ಠ ಖಾಸಗಿ ಸಂಶೋಧನಾ ವಿವಿ ಅಮೇರಿಕಾದ ಬೋಸ್ಟನ್ ನ ವಿವಿ (ಲಿನಸ್ ಪಬ್ಲಿಕೇಷನ್) ಅನಾಟಮಿ ವಿಭಾಗ ಸಿದ್ಧಪಡಿಸುತ್ತಿರುವ ವೈದ್ಯಕೀಯ ಗ್ರಂಥವೊಂದಕ್ಕೆ ಈಗ ಆಚಾರ್ಯ ಅವರು ಕೆಲವಾರು ಚಿತ್ರಗಳನ್ನು ರಚಿಸಿಕೊಡುವ ಜವಾಬ್ದಾರಿ ಹೊತ್ತಿದ್ದಾರೆ.

ಇದು ಸುಲಭವಾಗಿ ಸಿಕ್ಕ ಅವಕಾಶವಲ್ಲ. ಬೋಸ್ಟನ್ ವಿವಿಯು ಈ ಸೇವೆಗಾಗಿ ಜಗತ್ತಿನ ನಾನಾ ಕಲಾವಿದರಿಂದ ಅರ್ಜಿಗಳು ಹಾಗೂ ಅವರಿಂದ ಕೆಲ ಉತ್ತಮ ಕಲಾಕೃತಿಗಳನ್ನು ಆಹ್ವಾನಿಸಿತ್ತು. ಹೀಗಾಗಿ, ಈಜಿಪ್ಟ್, ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಿಂದ ಕಲಾಕೃತಿಗಳು ವಿವಿಯ ಅವಗಾಹನೆಗಾಗಿ ಬಂದಿದ್ದವು. ಆ ಎಲ್ಲಾ ಕಲಾವಿದರ ಚಿತ್ರಗಳನ್ನು ಬಿಟ್ಟ ವಿವಿ ಆಡಳಿತ ಮಂಡಳಿ ಆಚಾರ್ಯರ ಕಲಾಕೃತಿಗಳಿಗೆ ಸೈ ಎಂದಿದೆ. ಅಂದಹಾಗೆ, ಆಚಾರ್ಯ ಅವರಿಗೆ ಬೋಸ್ಟನ್ ವಿವಿ ಈ ಅವಕಾಶ ಕಲ್ಪಿಸುತ್ತಿರುವುದು ಇದು ಎರಡನೇ ಬಾರಿ.

Udupi artist Acharya gets great opportunity to work with Boston University of America

ಈ ಹಿಂದೆ, ಅದೇ ವಿವಿ (ಲಿನಸ್ ಪಬ್ಲಿಕೇಷನ್) ಅನಾಟಮಿ ವಿಭಾಗದ ಪ್ರೊ. ಎಂ. ಎಸ್. ಎ. ಕುಮಾರ್ ರಚಿಸಿದ 'ಕ್ಲಿನಿಕಲ್ ಓರಿಯೆಂಟೆಡ್ ಅನಾಟಮಿ ಆಫ್ ದಿ ಡಾಗ್' ಕೃತಿಗಾಗಿ ಪಿ.ಎನ್. ಆಚಾರ್ಯರು ೨,೩೪೨ ಕಲಾಕೃತಿಗಳನ್ನು ರಚಿಸಿ ನೀಡಿದ್ದರು. ೧,೬೧೪ ಪುಟಗಳ ಈ ಗ್ರಂಥ ಜಪಾನ್, ಚೀನಾ ಭಾಷೆಯಲ್ಲೂ ಬಂದಿದೆ. ಬೆಕ್ಕು ಮತ್ತು ನಾಯಿಯ ದೇಹ ರಚನೆ ಕುರಿತ ಪಿ. ಎನ್. ಆಚಾರ್ಯರ ಕಲಾಕೃತಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿವೆ. ಹಿತ್ತಲ ಗಿಡ ಮದ್ದಲ್ಲದಿದ್ದರೂ ಈಗ ಭಾರತದ ವಿವಿಗಳಿಂದಲೂ ಬೇಡಿಕೆ ಬರುತ್ತಿವೆ ಎನ್ನುತ್ತಾರೆ ಆಚಾರ್ಯರು.

Udupi artist Acharya gets great opportunity to work with Boston University of America

ಆಚಾರ್ಯರ ಸಾಧನೆಯ ಇಣುಕು ನೋಟ
ಬಾಲ್ಯದಿಂದಲೇ ಪಿ.ಎನ್. ಆಚಾರ್ಯರಿಗೆ ಚಿತ್ರಕಲೆಯಲ್ಲಿ ವಿಶೇಷ ಒಲವು, ಬಿಡುವ ಸಿಕ್ಕಾಗಲೆಲ್ಲ ಚಿತ್ರಕಲೆಯಲ್ಲಿ ತಲ್ಲೀನರಾಗುತ್ತಿದ್ದರು. ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ಕಾಲ ಶಿಕ್ಷಕರಾಗಿದ್ದ ರಂಗವಲ್ಲಿ ಬ್ರಹ್ಮ ಬಿ.ಪಿ. ಬಾಯಾರಿ ಚಿತ್ರಕಲಾ ಬದುಕಿಗೆ ಪ್ರೇರಣೆ ನೀಡಿದ್ದರು. ಶ್ರೀವಿಶ್ವಕರ್ಮ ಕಲಾಕೃತಿ ಪಿ.ಎನ್. ಆಚಾರ್ಯರು ಕುಂಚದಲ್ಲಿ ೨೦ನೇ ವಯಸ್ಸಿಗೆ ಮೂಡಿ ಬಂದ ಸುಂದರ ಕಲಾಕೃತಿ.

Udupi artist Acharya gets great opportunity to work with Boston University of America

ಮುಂಬಯಿಯ ಜೆ.ಜೆ ಆಸ್ಪತ್ರಯಲ್ಲಿ ವೈದ್ಯಕೀಯ ಕಳೆಯ ಬಗ್ಗೆ ಪಡೆದ ತರಬೇತಿ ನಿವೃತ್ತಿ ಇದರ ಹಿಂದೆ ೨ ವರ್ಷಗಳ ಶ್ರಮವಿದೆ. ವಿಶ್ವಾಸದಿಂದ ಕೊಟ್ಟ ಕೆಲಸ ಶ್ರದ್ದೆ, ಪ್ರಾಮಾಣಿಕತೆಯಿಂದ ಮಾಡಿದ್ದು ತುಂಬಾ ಖುಷಿ, ತೃಪ್ತಿ ನೀಡಿದೆ ಎಂದು ಪಿ ಎನ್ ಆಚಾರ್ಯರು 'ಒನ್ ಇಂಡಿಯಾ ಕನ್ನಡ'ದ ಜೊತೆಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+