ಶಿರೂರು ಹೆದ್ದಾರಿ ಬದಿಯಲ್ಲಿ ಸಾವಿರಾರು ಪಡಿತರ ಚೀಟಿಗಳು ಪತ್ತೆ
ಉಡುಪಿ, ಜೂನ್. 21: ಕುಂದಾಪುರ ತಾಲೂಕಿನ ಶಿರೂರು ಹೆದ್ದಾರಿ ಬದಿಯಲ್ಲಿ ಸಾವಿರಾರು ಪಡಿತರ ಚೀಟಿಗಳು ಒಂದು ಚೀಲದಲ್ಲಿ ಪತ್ತೆಯಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯ ಸಮೀಪ ಈ ಪಡಿತರ ಚೀಟಿಗಳು ಪತ್ತೆಯಾಗಿವೆ.
ಪತ್ತೆಯಾದ ಪಡಿತರ ಚೀಟಿಗಳೆಲ್ಲವೂ ಬಂಟ್ವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದಾಗಿದೆ. ಇವು 2003, 2004 ಮತ್ತು 2011ನೇ ಇಸವಿಯದ್ದಾಗಿದೆ. ಈ ಪಡಿತರ ಚೀಟಿಗಳ ಜತೆಯಲ್ಲಿ ಗ್ರಾಮ ಪಂಚಾಯತಿಗೆ ಸೇರಿದ ದಾಖಲೆಗಳು ಕೂಡ ಚೀಲದಲ್ಲಿ ಸಿಕ್ಕಿವೆ.

ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕಂದಾಯ ಅಧಿಕಾರಿಗಳು ಕೂಡ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನು ಯಾತಕ್ಕಾಗಿ ಎಸೆಯಲಾಗಿದೆ?. ಪಂಚಾಯಿತಿಯಿಂದಲೇ ಎಸೆಯಲಾಗಿದೆಯೇ ಅಥವಾ ನಕಲಿ ಕಾರ್ಡ್ ಗಳನ್ನು ಸೃಷ್ಟಿ ಮಾಡಿ, ಅದನ್ನು ಬಳಸಿದ ಬಳಿಕ ಈ ರೀತಿ ನಾಶಪಡಿಸಲು ಮುಂದಾಗಿದ್ದಾರೆಯೇ ಎನ್ನುವುದು ತನಿಖೆಯ ಬಳಿಕವೇ ತಿಳಿದು ಬರಬೇಕಿದೆ.












Click it and Unblock the Notifications