ಉಡುಪಿ: ಮೂರು ವರ್ಷದ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸಪ್ರೈಸ್‌ ನೀಡಿದ ಮಗ

ಉಡುಪಿ, ಸೆಪ್ಟೆಂಬರ್‌ 21: ದುಡಿಮೆಗಾಗಿ ತುತ್ತಿನ ಜೋಳಿಗೆ ತುಂಬಿಸಿಕೊಳ್ಳಲು ಊರು ಬಿಟ್ಟು ಊರಿಗೆ ತೆರಳುವುದು ಅನಿವಾರ್ಯ. ತಂದೆ-ತಾಯಿಯನ್ನು ಬಿಟ್ಟು ಊರು, ಜಿಲ್ಲೆ, ರಾಜ್ಯ ಕೊನೆಗೆ ದೇಶವೇ ಬಿಟ್ಟು ಹೋಗುವ ಪರಿಸ್ಥತಿ ಕೂಡ ಬರುತ್ತದೆ. ಹೀಗೆ ಕೆಲಸಕ್ಕಾಗಿ ಕೆಲ ವರ್ಷಗಳಿಂದ ವಿದೇಶದಲ್ಲಿದ್ದ ಮಗ ಊರಿಗೆ ಬರುವ ಸುಳಿವೂ ನೀಡದೇ ಬಂದು ಹೆತ್ತ ತಾಯಿ ಎದುರು ಬಂದ ಸಂತೋಷದ ಘಳಿಗೆಗೆ ಸಾಕ್ಷಿಯಾದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕುಂದಾಪುರದ ರೋಹಿತ್‌ ಎನ್ನುವವರು ಮೂರು ವರ್ಷಗಳ ಬಳಿಕ ದುಬೈನಿಂದ ಬಂದು ಅಮ್ಮನಿಗೆ ಸಪ್ರೈಸ್‌ ನೀಡಿದ್ದಾರೆ. ರೋಹಿತ್ ಮನೆಯವರಿಗೆ, ಮಿತ್ರರಿಗೆ ಸರ್ಪ್ರೈಸ್ ನೀಡಲು ಯಾವುದೇ ಮಾಹಿತಿ ನೀಡದೆ ಊರಿಗೆ ಮರಳಿದ್ದಾರೆ. ಮನೆಗೆ ಮರಳಿದಾಗ‌ ತಾಯಿ ಮನೆಯಲ್ಲಿ ಇರದಿರುವುದನ್ನು ಕಂಡು ಬೇಸರಗೊಂಡಿದ್ದ ರೋಹಿತ್ ನೇರವಾಗಿ ಗಂಗೊಳ್ಳಿ ಬಂದರಿನಲ್ಲಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾರೆ.

Son Gave A Surprise To His Mother

ರೋಹಿತ್ ತಲೆಗೆ ಟೋಪಿ, ಮುಖಕ್ಕೆ ಕರವಸ್ತ್ರ ಕಟ್ಟಿ ಕಣ್ಣಿಗೆ ಕನ್ನಡಕ ಹಾಕಿ ಮೀನು ಖರೀದಿಯ ನಾಟಕವಾಡಿದ್ದಾರೆ. ಗ್ರಾಹಕನಂತ ಮಾತನಾಡುತ್ತಲೇ ಮುಖದಿಂದ ಕರವಸ್ತ್ರ ತೆಗೆದು ಅಮ್ಮನಿಗೆ ಅಚ್ಚರಿ ಮೂಡಿಸಿದ್ದಾರೆ. ಮಗ ದುಬೈನಲ್ಲಿದ್ದ ಎಂದುಕೊಂಡಿದ್ದ ತಾಯಿಗೆ ಕಣ್ಮುಂದೆ ಪ್ರತ್ಯಕ್ಷವಾಗಿರುವುದನ್ನು ಕಂಡು ತಾಯಿ ಕಣ್ಣೀರು ಹಾಕಿದ್ದಾರೆ. ಮೂರು ವರ್ಷಗಳ ಬಳಿಕ ತಾಯಿಯನ್ನು ನೋಡಿದ ಮಗನೂ ಅರೆಕ್ಷಣ ಭಾವುಕನಾಗಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತಾಯಿ-ಮಗನ ಭಾವುಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+