ಸ್ವರ್ಣಾ ನದಿಯಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾದ ಶೀರೂರು ಮಠದ ಡಿವಿಆರ್
Recommended Video

ಉಡುಪಿ, ಜುಲೈ 25: ಶೀರೂರು ಲಕ್ಷ್ಮೀವರ ತೀರ್ಥ ಶ್ರೀ ದೈವಾಧೀನರಾದ ಮೇಲೆ ಎದ್ದಿರುವ ಹಲವು ವಿವಾದಗಳ ನಡುವಲ್ಲೇ, ಮಠದ ಡಿವಿಆರ್ ಗಳು ನಾಪತ್ತೆಯಾಗಿದ್ದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.
ಮೂಲಮಠದ ಎರಡು ಡಿವಿಆರ್ ಗಳಲ್ಲಿ ಒಂದು ಸೋಮವಾರ ಪತ್ತೆಯಾಗಿತ್ತಾದರೂ ಇನ್ನೊಂದು ಪತ್ತೆಯಾಗಿರಲಿಲ್ಲ.
ಈ ಡಿವಿಆರ್ ಇದೀಗ ಉಡಪಿಯ ಹಿರಿಯಡ್ಕದಲ್ಲಿರುವ ಮೂಲಮಠದ ಸ್ವರ್ಣ ನದಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಡಿವಿಆರ್ ನಲ್ಲಿ ಶ್ರೀಗಳ ಸಾವಿನ ಕುರಿತು ಮಹತ್ವದ ಸುಳಿವುಗಳು, ಸಾಕ್ಷಿಗಳು ಸಿಕ್ಕುವುದಿಲ್ಲ ಎಂದಾಗಿದ್ದರೆ ಇದನ್ನು ನದಿಗೆ ಎಸೆಯುವ ಅಗತ್ಯ ಏನಿತ್ತು? ಅಷ್ಟಕ್ಕೂ ಈ ಡಿವಿಆರ್ ಅನ್ನು ನದಿಗೆ ತಂದು ಎಸೆದವರು ಯಾರು? ಎಂಬುದು ಈಗಿರುವ ಪ್ರಶ್ನೆ.

ಫುಡ್ ಪಾಯ್ಸನ್ ಕಾರಣ ಜು.19 ರಂದು ಇಹಲೋಕ ತ್ಯಜಿಸಿದ ಶೀರೂರು ಶ್ರೀಗಳನ್ನು ಜು.18 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದ ಸಮಯದಲ್ಲಿ ಮಠಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತನೇ ಡಿವಿ ಆರ್ ಅನ್ನು ನಾಪತ್ತೆ ಮಾಡಲು ಯತ್ನಿಸಿದ್ದಿರಬಹುದು ಎಂದು ಅಂದಾಜಿಸಲಾಗಿತ್ತು.
ಇದೀಗ ಸ್ವರ್ಣ ನದಿಯಲ್ಲಿ ಪತ್ತೆಯಾಗಿರುವ ಡಿವಿಆರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications