ಕೊರೊನಾ ವೈರಸ್ ಗೆ ಉಡುಪಿಯಲ್ಲಿ ಸರಣಿ ಸಾವು: ಆತಂಕ!
ಉಡುಪಿ, ಜುಲೈ 16: ಕೊರೊನಾ ವೈರಸ್ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಇಂದು ಮೂವರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ ಎಂಟಕ್ಕೆ ಏರಿದೆ.
Recommended Video
Jofra Archer ,ಬಾಲಿಗೆ ಉಗುಳು ಹಚ್ಚಿದ್ದಕ್ಕೆ ಆಟದಿಂದ ಹೊರಕ್ಕೆ Eng vs WI 2nd test | Oneindia Kannada
ಉಡುಪಿ ಮತ್ತು ಕುಂದಾಪುರಗಳಲ್ಲಿ ಇಬ್ಬರು ಮೃತಪಟ್ಟಿದ್ದು, ಉತ್ತರ ಕನ್ನಡ ಜಿಲ್ಲೆ ಅಂಕೋಲದ ಸೋಂಕಿತ ಉಡುಪಿಯಲ್ಲಿ ಕೊರೊನಾ ವೈರಸ್ ಗೆ ಸತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕುಂದಾಪುರ ತಾಲ್ಲೂಕಿನ ಮರವಂತೆಯ 58 ವರ್ಷದ ವ್ಯಕ್ತಿಯು ತೀವ್ರವಾದ ಅಸ್ತಮಾದಿಂದ ನರಳುತ್ತಿದ್ದರು. ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಕಂಡು ಬಂದಿತ್ತು. ಚಿಕಿತ್ಸೆ ಪ್ರಾರಂಭಿಸುವ ವೇಳೆಗಾಗಲೇ ಮೃತಪಟ್ಟಿದ್ದಾರೆ.

ಅದೇ ರೀತಿ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಈ ಸೋಂಕಿತನಿಗೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಬೀಡಿನಗುಡ್ಡೆಯಲ್ಲಿ ಅಂಕೋಲದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ಮಾಡಲಾಯಿತು.












Click it and Unblock the Notifications