ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸಾಹಿತ್ಯ ಪ್ರಶಸ್ತಿ ನಿರಾಕರಿಸಿದ ಲೇಖಕ ಜಿ.ರಾಜಶೇಖರ್

2015ನೇ ಸಾಲಿನ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದ ಜಿ.ರಾಜಶೇಖರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಸಹಿಷ್ಣುತೆ ವಾತಾವರಣ ಮುಂದೂವರೆದಿದ್ದರಿಂದ ಪ್ರಶಸ್ತಿ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ

|
Google Oneindia Kannada News

ಉಡುಪಿ, ಜನವರಿ 11 : ಹಿರಿಯ ಚಿಂತಕ, ಪ್ರಗತಿಪರ ಹೋರಾಟಗಾರ ಹಾಗೂ ಲೇಖಕ ಜಿ.ರಾಜಶೇಖರ್ ಅವರ 'ಬಹುವಚನ ಭಾರತ'ಕೃತಿಗೆ ಲಭಿಸಿರುವ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

'ಬಹುವಚನ ಭಾರತ' ಎಂಬ ಕೃತಿಗೆ ಜಿ.ರಾಜಶೇಖರ್ ಅವರನ್ನು 2015 ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಜಿ. ರಾಜಶೇಖರ್, ' ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಇದೆ. ಭಾರತದಲ್ಲಿ ಅಹಿಷ್ಣುತೆ ತಾಂಡವಾಡುತ್ತಿರುವುದನ್ನು ಖಂಡಿಸಿ 2015ರಲ್ಲಿ ದೇಶದ ಖ್ಯಾತನಾಮ ಸಾಹಿತಿಗಳು ತಮಗೆ ದೊರೆತಿರುವ ಪ್ರಶಸ್ತಿಗಳನ್ನು ವಾಪಸ್ ಮಾಡುವ ಮೂಲಕ ಅಭಿಯಾನವನ್ನೇ ಮಾಡಿದ್ದರು. [ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಿಗೆ ಅಭಿನಂದನೆ]

Renowned Author G Rajashekar rejects award from karnataka sahitya academy

ಅಂದು ದೇಶದಲ್ಲಿ ಕಂಡು ಬಂದಿದ್ದ ಅಸಹಿಷ್ಣುತೆಯ ವಾತಾವರಣ ಈಗಲೂ ಮುಂದುವರಿದಿರುವುದೇ ಪ್ರಶಸ್ತಿ ನಿರಾಕರಿಸಲು ಕಾರಣ 'ಎಂದು ಹೇಳಿದ್ದಾರೆ.

ರಾಜ್ಯ ಸಾಹಿತ್ಯ ಅಕಾಡಮಿ ನನ್ನ 'ಬಹುವಚನ ಭಾರತ' ಕೃತಿಗೆ ಪ್ರಶಸ್ತಿ ನೀಡಿದೆ. ಅಕಾಡೆಮಿ ನನ್ನ ಬಗ್ಗೆ ತೋರಿದ ಗೌರವಕ್ಕೆ ನಾನು ಕೃತಜ್ಞ. ಆದರೆ, 2015ರಲ್ಲಿ ಸಾಹಿತಿಗಳು ತಮಗೆ ನೀಡಿದ ಪ್ರಶಸ್ತಿಗಳ ನಿರಾಕರಣೆ ಹಾಗೂ ವಾಪಸಾತಿಗೆ ಯಾವ ಸನ್ನಿವೇಶ ಕಾರಣವಾಯಿತೋ, ಆ ಸನ್ನಿವೇಶ ಈಗ ಇನ್ನಷ್ಟು ಹದಗೆಟ್ಟಿದೆ.

ಹಾಗಾಗಿ ಈ ಪ್ರಶಸ್ತಿಯನ್ನ ನಾನು ಸ್ವೀಕರಿಸಲಾರೆ' ಎಂದು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

English summary
Renowned Author G Rajashekar rejects award from karnataka sahitya academy. His book "Bahuvachana Bharatha" was nominated for karnataka sahitya award, but Rajashekar has reject the award.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X