ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಈ ಬಾರಿ ಜನ್ಮಾಷ್ಟಮಿಗೆ ಕ್ರಾಂಪಸ್ ವೇಷದಲ್ಲಿ ಮಿಂಚಿದ ರವಿ ಕಟ್ಪಾಡಿ

|
Google Oneindia Kannada News

ಉಡುಪಿ, ಸೆಪ್ಟೆಂಬರ್ 14: ಸಾಮಾಜಿಕ ಕಳಕಳಿಯ ಕಲಾವಿದ ಉಡುಪಿಯ ರವಿ ಕಟ್ಪಾಡಿ ಈ ಬಾರಿ ಕ್ರಾಂಪಸ್ ಹಾಲಿವುಡ್ ಚಿತ್ರದ ಪ್ರಧಾನ ಪಾತ್ರ ಕ್ರಾಂಪಸ್ ವೇಷಧಾರಿಯಾಗಿ ಮಿಂಚಿದ್ದಾರೆ.

ಉಡುಪಿಯಲ್ಲಿ ವಿಟ್ಲಪಿಂಡಿ ಪ್ರಯುಕ್ತ ಮೊಸರು ಕುಡಿಕೆಗೆ ಚಾಲನೆಉಡುಪಿಯಲ್ಲಿ ವಿಟ್ಲಪಿಂಡಿ ಪ್ರಯುಕ್ತ ಮೊಸರು ಕುಡಿಕೆಗೆ ಚಾಲನೆ

ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಗೆ ವಿಭಿನ್ನ ವೇಷ ಧರಿಸಿ ಮಿಂಚುವ ರವಿ ಕಟಪಾಡಿ, ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ಕ್ರಾಂಪಸ್ ವೇಷಧಾರಿಯಾಗಿ ಜನರ ಮುಂದೆ ಬಂದಿದ್ದರು.

Ravi Katpadi of Udupi attracts devotes with Hollywood costume for krishna janmasthami

2015 ರಲ್ಲಿ ಬಿಡುಗಡೆಯಾದ ಹಾಲಿವುಡ್ ಹಾರರ್ ಮೂವಿ ಕ್ರಾಂಪಸ್ ನ ಕಾಲ್ಪನಿಕ ಪಾತ್ರವನ್ನು ತಮ್ಮ ವೇಷಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮೇಕಪ್ ಕಲಾವಿದರಾದ ಸಂತೋಷ್ ಹಾಗೂ ಗಣೇಶ್ ಅವರ ಮುಂದೆ ಬೆಳಗಿನಿಂದ 24 ಗಂಟೆ ತಾಳ್ಮೆಯಿಂದ ಕೂತು ವೇಷ ತೊಟ್ಟಿದ್ದಾರೆ.

In Pics : ವಿಟ್ಲಪಿಂಡಿಯಲ್ಲಿ ಬೆಣ್ಣೆ ಕದಿಯಲು ಬಂದ ಬಾಲಕೃಷ್ಣ

ಗಾರೆ ಕೆಲಸ ಮಾಡುವ ರವಿ ಕಳೆದ ಹಲವು ವರ್ಷಗಳಿಂದ ಜನ್ಮಾಷ್ಟಮಿಗೆ ವೇಷ ಹಾಕಿ ಖುಷಿ ಪಡುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ತಾವು ಸಂಗ್ರಹಿಸಿದ ದುಡ್ಡನ್ನು ಬಡ ಕುಟುಂಬದ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ದಾನ ಮಾಡುತ್ತಿದ್ದಾರೆ.

ರವಿ ಕಟ್ಪಾಡಿ ಅವರ ಹಿಂದೆ ಯುವಕರ ದೊಡ್ಡ ಪಡೆಯೇ ಇದೆ. ಈ ಯುವಕರು ರವಿ ಅವರ ಉದ್ದೇಶ ಈಡೇರಿಕೆಗೆ ಅವರೊಂದಿಗೆ ಕೈ ಜೋಡಿಸುತ್ತಿದ್ದಾರೆ.

ತಮ್ಮ ತಂಡ ಎಲ್ಲೇ ಹೋದರೂ ಜನರು ದೇಣಿಗೆ ನೀಡುತ್ತಾರೆ. ಕೆಲವರು ದೂರವಾಣಿ ಕರೆ ಮಾಡಿ ಕರೆದು ಧನ ಸಹಾಯ ಮಾಡುವ ಅಭಿಮಾನಿಗಳು ಇದ್ದಾರೆ ಎಂದು ಖುಷಿಯಿಂದ ಹೇಳುತ್ತಾರೆ ರವಿ.

English summary
Ravi Katpadi of Udupi, a socially illustrious artist this time for krishna janmasthami has become the main character of the film krampus Hollywood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X