ಉಡುಪಿ ಕೃಷ್ಣ ಮಠಕ್ಕೆ ರಾಜಸ್ಥಾನ ಸಿಎಂ ದಿಢೀರ್ ಭೇಟಿ

Posted By:
Subscribe to Oneindia Kannada

ಉಡುಪಿ, ನವೆಂಬರ್ 20 : ಕೃಷ್ಣ ಮಠಕ್ಕೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸೋಮವಾರ(ನ.20) ದಿಢೀರ್ ಭೇಟಿ ನೀಡಿದರು.

ಕೊಲ್ಲೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಪೂರ್ವ ನಿಗಧಿಪಡಿಸದೆ ವಸುಂಧರಾ ರಾಜೇ ಅವರು ಉಡುಪಿಗೆ ಆಗಮಿಸಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆದರು. ಕೃಷ್ಣನ ದರ್ಶನದ ಬಳಿಕ ಶ್ರೀಕೃಷ್ಣನ ವಿಶೇಷ
ಪ್ರಸಾದ ಸ್ಚೀಕರಿಸಿದರು.

Rajasthan CM surprise visit to Udupi Krishna mutt.

ಬಳಿಕ ಮಾತನಾಡಿದ ಅವರು ಕೃಷ್ಣಮಠಕ್ಕೆ ಇದು ನನ್ನ ಪ್ರಥಮ ಭೇಟಿ ಇದೊಂದು ಎಂದೂ ಮರೆಯಲಾಗದ ಭೇಟಿ, ನಮ್ಮ ಇಡೀ ಕುಟುಂಬ ಪೇಜಾವರಶ್ರೀ ಗಳ ನಿಕಟವರ್ತಿಗಳು ನಾಲ್ಕು ತಲೆಮಾರಿನಿಂದ ಕೃಷ್ಣಮಠದ ಜೊತೆ ನಿಕಟ ಬಾಂಧವ್ಯವಿದೆ.

ಐದನೇ ಪರ್ಯಾಯದಲ್ಲಿ ಭಾಗಿಯಾಗಿರುವುದು ಅದೃಷ್ಟ ನಾನು ನನ್ನ ಮಗ ಶ್ರೀಗಳ ಆಶೀರ್ವಾದ ಪಡೆದಿದ್ದೇವೆ ದೇವರು ಬಯಸದೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಿಲ್ಲ ಎಂದರು.

Rajasthan CM surprise visit to Udupi Krishna mutt.

ಉಡುಪಿ ಹೆಲಿಪ್ಯಾಡ್ ನಲ್ಲಿ ಪೊಲೀಸರಿಂದ ತುರ್ತು ವ್ಯವಸ್ಥೆ ಉಡುಪಿಯ ಕುಂದಾಪುರ ತಾಲೂಕಿನ ಕೊಲ್ಲೂರು ಆಡಳಿತ ಮಂಡಳಿಯು ಅದ್ಧೂರಿ ಸ್ವಾಗತ ಕಲ್ಪಿಸಿತ್ತು. ಇತಿಹಾಸ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ
ದೇವಾಲಯದಲ್ಲಿ ದೇವಿ ದರ್ಶನ, ನವ ಚಂಡಿಯಾಗದಲ್ಲಿ ರಾಜೆ ಅವರು ಭಾಗಿಯಾದರು.

Rajasthan CM surprise visit to Udupi Krishna mutt.

ಕೊಲ್ಲೂರು ದೇವಸ್ಥಾನಕ್ಕೆ ಬರಲು ಬಹಳ ಬಾರಿ ಪ್ರಯತ್ನಪಟ್ಟೆ ಇಂದು ಮೂಕಾಂಬಿಕೆಯ ದರ್ಶನ ಪಡೆದು ಕೃತಾರ್ಥನಾದೆ ಎಂದು ಹೇಳಿದ ಅವರು ಪದ್ಮಾವತಿ ಚಿತ್ರದ ಬಗ್ಗೆ ಪ್ರತಿಕ್ರಯಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿಯವರಿಗೆ ಚಿತ್ರ ತಡೆ ಹಿಡಿಯುವಂತೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rajasthan CM Vasundhara Raje suddenly visited Udupi Krishna Mutt and kolluru Mookambika temple on Monday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ