ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ

Recommended Video

      ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ | Oneindia Kannada

      ಉಡುಪಿ, ಸೆಪ್ಟೆಂಬರ್ 13: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯಿದೆಯ ದಂಡ ವಸೂಲಿ ವಿರುದ್ಧ ನಾಗರೀಕರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಉಡುಪಿಯಲ್ಲೂ ಈ ತರಹದ ಘಟನೆ ನಡೆದಿದ್ದು, ಸಾರ್ವಜನಿಕರು ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದು ಈಗ ವೈರಲ್ ಆಗುತ್ತಿದೆ.

      ನಗರದ ಪಿಪಿಸಿ ಕಾಲೇಜು ಸಮೀಪ ಈ ಘಟನೆ ನಡೆದಿದೆ. ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿರುವ ಪೊಲೀಸನೋರ್ವ ಸಂಜೆ ವೇಳೆ ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು. ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸನ ವರ್ತನೆ ಸಂಶಯ ಮೂಡಿಸಿತ್ತು. ಕ್ರಮೇಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

      People Raged On Mufti Police Who Fined In Udupi

      ಮಾತ್ರವಲ್ಲದೆ ಅಲ್ಲೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್ ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು‌. ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಪೊಲೀಸರು ದೂರದಲ್ಲಿ ವಾಹನದೊಳಗೇ ಕುಳಿತಿದ್ದರು. ಆದರೆ ಸಮವಸ್ತ್ರ ಧರಿಸದ ಪೊಲೀಸನನ್ನು ದಂಡ ವಸೂಲಿಗೆ ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು, ಈ ಘಟನೆಗೆ ಕಾರಣವಾಯಿತು. ಅಂತೂ ಈ ಕುರಿತ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ, ಮಾತ್ರವಲ್ಲ ಜನರಲ್ಲಿ ದಂಡದ ಕುರಿತು ಇದ್ದ ಆಕ್ರೋಶ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+