ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ; ಸಹೋದರನಿಂದ ವಿರೋಧ

ಉಡುಪಿ, ಏಪ್ರಿಲ್ 20; ಶಿರೂರು ಮಠದ ನೂತನ ಪೀಠಾಧಿಪತಿ ನೇಮಕದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಬುಧವಾರ ನೂತನ ಪೀಠಾಧಿಪತಿ ಘೋಷಣೆಗೆ ತಯಾರಿ ನಡೆದಿದೆ.

ಲಕ್ಷ್ಮೀವರತೀರ್ಥರ ತೀರ್ಥರ ಪೂರ್ವಾಶ್ರಮದ ಸಹೋದರರಿಂದ ನೂತನ ಪೀಠಾಧಿಪತಿ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ಸೋದೆ ಮಠಾಧೀಶರಿಂದ ನೂತನ ಪೀಠಾಧಿಪತಿ ಘೋಷಣೆ ಆಗಬೇಕಿದೆ. ಆದರೆ, ನೂತನ ಪೀಠಾಧಿಪತಿ ನೇಮಕಕ್ಕೆ ಲಾತವ್ಯ ಆಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಲಾತವ್ಯ ಆಚಾರ್ಯ ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಸಹೋದರರಾಗಿದ್ದಾರೆ.

Opposed To Announce New successor Name For Shiroor Mutt

ಜುಲೈ 19, 2018ರಂದು ಸಂಶಯಾಸ್ಪದ ರೀತಿಯಲ್ಲಿ ಲಕ್ಷ್ಮೀವರತೀರ್ಥ ಸ್ವಾಮೀಜಿ ನಿಧನ ಹೊಂದಿದ್ದರು. ಸದ್ಯ ಸೋದೆ ಮಠ ಉಡುಪಿಯ ಶಿರೂರು ಮಠ ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆ ನೋಡಿಕೊಳ್ಳುತ್ತಿದೆ.

ಆದರೆ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ರಾಜ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ. ಅರ್ಜಿ ವಿಚಾರಣೆ ಬಾಕಿ ಇರುವಾಗ ನೂತನ ಪೀಠಾಧಿಪತಿ ಘೋಷಣೆ ಸರಿಯಲ್ಲ ಎಂಬುದು ಒಂದು ವಾದ.

ಎಳೆಯ ವಯಸ್ಸಿನ ವಟುವನ್ನು ಪೀಠಾಧಿಪತಿಯಾಗಿ ಘೋಷಣೆ ಮಾಡುತ್ತಿದ್ದಾರೆ. ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ಪೀಠಾಧಿಪತಿ ಮಾಡಬೇಕು. ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಕೀರ್ತಿಶೇಷ ಶಿರೂರು ಶ್ರೀಗಳ ಸಹೋದರರಾದ ಆಚಾರ್ಯ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+