ಮಣಿಪಾಲ್‌ನಲ್ಲಿಯೂ ಕೊಂಕಣ ರೈಲ್ವೆ ಟಿಕೆಟ್ ಪಡೆಯಿರಿ
ಮಣಿಪಾಲ್, ಫೆ. 17 : ಮಣಿಪಾಲ್‌ನಲ್ಲಿಯೂ ಇನ್ನು ಮುಂದೆ ಕೊಂಕಣ ರೈಲ್ವೆಯ ಟಿಕೆಟ್ ಪಡೆಯಬಹುದಾಗಿದೆ. ಕೊಂಕಣ ರೈಲ್ವೆ ಜೆಟಿಬಿಎಸ್ ರೈಲ್ವೆ ಟಿಕೆಟ್ ಕೌಂಟರ್‌ಅನ್ನು ಮಣಿಪಾಲ್‌ನಲ್ಲಿ ಆರಂಭಿಸಿದೆ.
ಮಣಿಪಾಲ್‌ನಲ್ಲಿ ಆರಂಭಿಸಿರುವ ಜನ ಸಾಧಾರಣ್ ಟಿಕೆಟ್ ಬುಕಿಂಗ್ ಸೇವಕ್ (ಜೆಟಿಬಿಎಸ್) ಕೌಂಟರ್ ಫೆ.14ರಿಂದ ಅಧಿಕೃತವಾಗಿ ಕಾರ್ಯ ಆರಂಭಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮೂರು ದಿನಗಳ ಮುಂಚಿತ ಟಿಕೆಟ್‌ಅನ್ನು ಪ್ರಯಾಣಿಕರು ಇಲ್ಲಿ ಪಡೆಯಬಹುದಾಗಿದೆ.

ಟಿಕೆಟ್ ಕೌಂಟರ್ ವಿಳಾಸ : ಪೂರ್ಣಿಮಾ ಡಿ.ನಾಯಕ್, ಡೋರ್ ನಂ 16/424, ಸಾಯಿಬಾಬಾ ಆಸ್ಪತ್ರೆ ಮುಂಭಾಗ, ಮಣಿಪಾಲ್, 576104, ದೂರವಾಣಿ ಸಂಖ್ಯೆ 0820-4292046. [ಕೊಂಕಣ ರೈಲ್ವೆ ಮಾಹಿತಿ ಪಡೆಯಲು ಹೊಸ ಸಹಾಯವಾಣಿ]
ತಿರುವನಂತಪುರ-ದೆಹಲಿ ರೈಲು ವೇಳಾಪಟ್ಟಿ : ವಾರಕ್ಕೊಮ್ಮೆ ಸಂಚರಿಸುವ ತಿರುವನಂತಪುರ- ಹಜ್ರತ್ ನಿಜಾಮುದ್ದೀನ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಕೊಂಕಣ ರೈಲಿನ ವೇಳಾಪಟ್ಟಿ ಇಲ್ಲಿದೆ. ತಿರುವನಂತಪುರದಿಂದ ಹೊರಡುವ ರೈಲು (22655) ಫೆ. 18ರಂದು (ಬುಧವಾರ), ನಿಜಾಮುದ್ದೀನ್‌ನಿಂದ (22656) ಫೆ. 20ರಂದು (ಶುಕ್ರವಾರ) ಆರಂಭವಾಗಲಿದೆ. [ಚಿತ್ರಗಳಲ್ಲಿ : 9 ಜನರ ಬಲಿ ಪಡೆದ ಆನೇಕಲ್ ರೈಲು ದುರಂತ]
ತಿರುವನಂತಪುರದಿಂದ ಬುಧವಾರ ಮುಂಜಾನೆ 1 ಗಂಟೆಗೆ ಹೊರಡುವ ರೈಲು ಶುಕ್ರವಾರ ಮುಂಜಾನೆ 2 ಗಂಟೆಗೆ ನಿಜಾಮುದ್ದೀನ್ ತಲುಪಲಿದೆ. ನಿಜಾಮುದ್ದೀನ್‌ನಿಂದ ಶುಕ್ರವಾರ ಬೆಳಗ್ಗೆ 10.05ಕ್ಕೆ ಹೊರಡುವ ರೈಲು ತಿರುವನಂತಪುರವನ್ನು ರವಿವಾರ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.












Click it and Unblock the Notifications