ನಡು ರಸ್ತೆಯಲ್ಲಿ ಚೂರಿ ಇರಿದ ಪ್ರೇಮಿ; ಯುವತಿ ಸಾವು

ಉಡುಪಿ, ಆಗಸ್ಟ್ 31; ಅಷ್ಟಮಿಯ ಸಂಭ್ರಮದಲ್ಲಿದ್ದ ಉಡುಪಿಯ ಜನರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಉಡುಪಿಯ ಸಂತೆಕಟ್ಟೆಯ ರೊಬೊ ಸ್ಟಾಪ್ ಬಳಿ ಯುವತಿಯನ್ನು ತಡೆದ ಯುವಕ ಮಾತನಾಡುತ್ತಾ ಆಕೆಯ ಕಿಬ್ಬೊಟ್ಟೆಗೆ ಚೂರಿಯಿಂದ ಇರಿದು ಬಿಟ್ಟ. ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಯುವಕ ಮತ್ತು ಯುವತಿ ಮೃತಪಟ್ಟಿದ್ದಾರೆ.

Recommended Video

      ಉಡುಪಿ: ಪ್ರೇಯಸಿಯ ಕುತ್ತಿಗೆ ಕುಯ್ದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಿಯಕರ- ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವು! | Oneindia Kannada

      ಯುವತಿಗೆ ಚಾಕು ಇರಿದಿದ್ದ ಪಾಗಲ್ ಪ್ರೇಮಿ ಯುವತಿ ಕೆಳಗೆ ಬೀಳುತ್ತಿದ್ದಂತೆಯೇ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರೂ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಜನ ಮಾತ್ರ ಅವರ ಸುತ್ತ ನಿಂತುಕೊಂಡು ಯಾರ ಸರಿ ತಪ್ಪು ಎಂದು ಲೆಕ್ಕ ಹಾಕುತ್ತಿದ್ದರು.

      ಇಬ್ಬರ ದೇಹದಿಂದ ಸಾಕಷ್ಟು ರಕ್ತ ಸೋರಿಕೆಯಾಗಿ, ಮಳೆ ನೀರಿನಲ್ಲಿ ಸೇರಿಕೊಂಡು ಹರಿದು ಹೋಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆ ವಿಳಂಬವಾಗಿ ಯುವತಿ ಸಾವನ್ನಪ್ಪಿದರೆ, ಯುವಕನ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾನೆ.

      Man Murdered His Lover And Committed Suicide At Udupi

      ಈ ಅಮಾನವೀಯ ಘಟನೆ ನಡೆದಿರೋದು ಆಗಸ್ಟ್ 30ರ ಸಂಜೆ 6 ಗಂಟೆಯ ಅಸುಪಾಸಿನಲ್ಲಿ. ಉಡುಪಿಯ ಸಂತೆಕಟ್ಟೆಯ ರಾಷ್ಟ್ರೀಯ ಬ್ಯಾಂಕ್ ವೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿರುವ, ಅಂಬಾಗಿಲು ನಿವಾಸಿ ಸೌಮ್ಯಶ್ರೀಗೆ ಪಾಗಲ್ ಪ್ರೇಮಿ ರಾಂಪುರ ನಿವಾಸಿ ಸಂದೇಶ್ ಕುಲಾಲ್ ಚಾಕು ಹಾಕಿದ್ದಾನೆ. ಬಳಿಕ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾನೆ.

      ಯುವತಿ ಸೌಮ್ಯಶ್ರೀ ಆಗಸ್ಟ್ 30ರ ಸಂಜೆ ಬ್ಯಾಂಕಿನಲ್ಲಿ ಕೆಲಸ ಮುಗಿಸಿ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗಿ ಹೊಗುತ್ತಿದ್ದ ವೇಳೆ, ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಪಾಗಲ್ ಪ್ರೇಮಿ ಸಂದೇಶ್ ಕುಲಾಲ್ ತಡೆದಿದ್ದಾನೆ. ಮಾಹಿತಿಯ ಪ್ರಕಾರ ಇವರಿಬ್ಬರೂ 7 ವರ್ಷದಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಯುವತಿ ಬೇರೊಬ್ಬನ ಜೊತೆ ನಿಶ್ಚಿತಾರ್ಥ ನಡೆದಿತ್ತು.

      ಹೀಗಾಗಿ ಅವಳು ಬದುಕೋದಾದರೆ ನನ್ನ ಜೊತೆಗೆ ಸಾಯೋದಾದರೂ ನನ್ನ ಜೊತೆಗೆ ಎಂದು ಸಂದೇಶ್ ಚೂರಿ ಹಿಡಿದುಕೊಂಡು ಬಂದಿದ್ದ. ಹೆದ್ದಾರಿಯಲ್ಲಿ ಸೌಮ್ಯಶ್ರೀಯ ವಾಹನ ನಿಲ್ಲಿಸಿದ ಸಂದೇಶ್ ಮತ್ತೆ ಪ್ರೀತಿಯ ವಿಚಾರ ತೆಗೆದಿದ್ದಾನೆ. ಪ್ರೀತಿ ಮಾಡಿ ಮೋಸ ಮಾಡಬೇಡ ಅಂತಾ ಪರಿಪರಿಯಾಗಿ ಕೇಳಿಕೊಂಡಿದ್ದಾನೆ. ಈ ವೇಳೆ ಯುವತಿ ಸೌಮ್ಯಶ್ರೀ ಪರಿಸ್ಥಿತಿ ಅರ್ಥ ಮಾಡಿಸಲು ಪ್ರಯತ್ನಿಸಿದ್ದಾಳೆ.

      ಆದರೆ ಇದೆನ್ನೆಲ್ಲಾ ಸುತಾರಾಂ ಒಪ್ಪದ ಸಂದೇಶ್ ಮಾತಿನ ಚಕಮಕಿ ನಡೆಸಿದ್ದಾನೆ. ಯುವತಿಯೂ ಏರು ಧ್ವನಿಯಲ್ಲಿ ಮಾತನಾಡಿದಾಗ ಕೋಪಗೊಂಡ ಸಂದೇಶ್ ಯುವತಿಯ ಕಿಬ್ಬೊಟ್ಟೆಗೆ ಮೂರು ಬಾರಿ ಚೂರಿಯಿಂದ ಇರಿದಿದ್ದಾನೆ. ಸೌಮ್ಯ ವಾಹನ ಸಮೇತ ರಸ್ತೆಗೆ ಬೀಳುತ್ತಿದ್ದಂತೆಯೇ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

      ಅಲ್ಲಿಯವರೆಗೆ ದೂರದಲ್ಲೇ ನಿಂತು ನೋಡುತ್ತಿದ್ದ ಜನರು ಇಬ್ಬರೂ ರಸ್ತೆಯಲ್ಲಿ ಬೀಳುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಬಂದು ಸುತ್ತುವರಿದಿದ್ದಾರೆ. ಇಬ್ಬರೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಯಾರೂ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿಲ್ಲ. ಪಕ್ಕದಲ್ಲೇ ಆಟೋ ಇದ್ದರೂ, ಜನ ಮಾತ್ರ ಯಾರದ್ದು ಸರಿ, ತಪ್ಪು ಎಂಬ ಮಾತುಕತೆಗಿಳಿದಿದ್ದಾರೆ. ಸೌಮ್ಯಶ್ರೀ ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಸಂದೇಶ್ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ. ಸುಮಾರು ನಿಮಿಷಗಳ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

      ಚಿಕಿತ್ಸೆ ವಿಳಂಬವಾಗಿ, ತುಂಬಾ ರಕ್ತಸ್ರಾವ ಆಗಿರೋದರಿಂದ ಯುವತಿ ಸೌಮ್ಯಶ್ರೀ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣ ಕಳೆದುಕೊಂಡಿದ್ದಾಳೆ. ಆರೋಪಿ ಸಂದೇಶ್‌ನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸುವಾಗ ಚಿಂತಾಜನಕವಾಗಿತ್ತು. ಉಡುಪಿ ನಗರ ಠಾಣಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.

      ವಾರದ ಹಿಂದೆಯಷ್ಟೇ ಯುವತಿ ಸೌಮ್ಯ ನಿಶ್ಚಿತಾರ್ಥವಾಗಿದ್ದು, ಹೊಸ ಜೀವನದ ಕನಸು ಕಂಡಿದ್ದರು. ಸೌಮ್ಯಶ್ರೀ ತಂದೆ ಅನಾರೋಗ್ಯ ಪೀಡಿತರಾಗಿದ್ದು, ಸಹೋದರರು ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಸದ್ಯ ಈ ಘಟನೆ ಅಷ್ಟಮಿಯ ಸಂಭ್ರಮದಲ್ಲಿದ್ದ ಜನರನ್ನು ಬೆಚ್ಚಿ ಬೀಳಿಸಿದ್ದು, ಘಟನೆಯಾದ ತಕ್ಷಣ ಜನರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದರೆ, ಸೌಮ್ಯಶ್ರೀ ಬದುಕುಳಿಯುತ್ತಿದ್ದಳು ಅನ್ನೋದು ಮಾತ್ರ ಸತ್ಯವಾಗಿದೆ.

      ಯುವಕ ಸಾವು; ಪ್ರೇಯಸಿಗೆ ಚೂರಿ ಇರಿದಿದ್ದ ಸಂದೇಶ್ ಕುಲಾಲ್ (29) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸೌಮ್ಯಶ್ರೀ ಭಂಡಾರಿಗೆ ಚಾಕು ಇರಿದಿದ್ದ ಸಂದೇಶ್ ಆಕೆ ಕೆಳಗೆ ಬೀಳತ್ತಲೇ ತಾನೂ ‌ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಉಡುಪಿಯ ‌ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಸಂದೇಶ್ ಶವವನ್ನು ಮಣಿಪಾಲದ ಕೆಎಂಸಿಯ ಶವಾಗಾರಕ್ಕೆ ಕಳಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+