ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ ಬಿಗಿ ಹಿಡಿತದಲ್ಲಿ ಉಡುಪಿ
Recommended Video

ಉಡುಪಿ, ಸೆಪ್ಟೆಂಬರ್ 03: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬರುತ್ತಿದ್ದು. ನಿರೀಕ್ಷೆಯಂತೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸ್ಪಷ್ಟ ವಿಜಯ ಸಾಧಿಸಿದೆ.
ಉಡುಪಿ ನಗರಸಭೆಯಲ್ಲಿ ನೇರ ಸ್ಪರ್ಧೆ ಇದ್ದದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಆದರಿಲ್ಲಿ ಬಿಜೆಪಿ ಯೂ ಕ್ಲೀನ್ ಸ್ವೀಪ್ ಮಾಡಿ 31 ಸೀಟುಗಳಲ್ಲಿ ವಿಜಯ ಸಾಧಿಸಿದೆ. ಕಾಂಗ್ರೆಸ್ ಗೆದ್ದಿರುವುದು ಕೇವಲ 4.
ಕಾರ್ಕಳ ಪರಸಭೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲಾ 11 ಸೀಟುಗಳನ್ನು ಗೆದ್ದಿದೆ. ಇತರರು 1 ಸೀಟು ಗೆದ್ದಿದ್ದಾರೆ.

ಕುಂದಾಪುರ ಪುರಸಭೆಯಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಪಡೆದಿದ್ದು. ಅಧಿಕಾರ ಹಿಡಿಯುವುದು ಖಾಯಂ ಆಗಿದೆ. ಇಲ್ಲಿ ಬಿಜೆಪಿಯು 14 ಸೀಟುಗಳನ್ನು ಗೆದ್ದಿದೆ. ಕಾಂಗ್ರೆಸ್ ಪಕ್ಷ 8 ಸೀಟುಗಳನ್ನು ಗೆದ್ದಿದ್ದರೆ ಇತರೆ 1 ಸೀಟು ಗೆದ್ದಿದ್ದಾರೆ.
ಸಾಲಿಗ್ರಾಮದ ಪಟ್ಟಣ ಪಂಚಾಯತ್ ಸಹ ಬಿಜೆಪಿ ಪಾಲಾಗಿದೆ ಇಲ್ಲಿ ಬಿಜೆಪಿ 10 ಸೀಟುಗಳಲ್ಲಿ ವಿಜಯ ಸಾಧಿಸಿದೆ. ಕಾಂಗ್ರೆಸ್ 5 ಮತ್ತು ಇತರೆಯವರು ಒಬ್ಬರು ವಿಜಯ ಸಾಧಿಸಿದ್ದಾರೆ.












Click it and Unblock the Notifications