ಉತ್ತರಾಖಂಡದಲ್ಲಿ ಟ್ರಕ್ಕಿಂಗ್ ದುರಂತ: ಕುಂದಾಪುರದ ಪದ್ಮನಾಭ ಭಟ್ ನಿಧನ
ಉಡುಪಿ, ಜೂನ್ 07: ಉತ್ತರಾಖಂಡಕ್ಕೆ ಟ್ರಕ್ಕಿಂಗ್‌ಗೆ ತೆರಳಿದ್ದ 9 ಮಂದಿ ಕನ್ನಡಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಂದು ಡೆಹ್ರಾಡೂನ್‌ನಿಂದ ಮೃತದೇಹಗಳು ಏರ್ ಲಿಫ್ಟಿಂಗ್ ಮೂಲಕ ಬೆಂಗಳೂರಿಗೆ ಬರಲಿದೆ.
ಈ ದುರಂತದಲ್ಲಿ ಟ್ರಕ್ಕಿಂಕ್‌ನಲ್ಲಿದ್ದ ಕುಂದಾಪುರ ಮೂಲದ ವ್ಯಕ್ತಿ ಸಹ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿ ಮೂಲದ ಪದ್ಮನಾಭ ಭಟ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀಹರಿಹರ ನಿಲಯ ಪದ್ಮನಾಭ್ ಭಟ್‌ರ ಮೂಲ ಮನೆಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪ್ರವಾಸ ಹಾಗೂ ಟ್ರಕ್ಕಿಂಗ್‌ನಲ್ಲಿ ಅತಿಯಾದ ಆಸಕ್ತಿ ಹೊಂದಿದ್ದ ಪದ್ಮನಾಭ್ ಭಟ್ ಅವರು 22 ಜನರ ತಂಡದೊಂದಿಗೆ ಮೇ 29ರಂದು ಉತ್ತರ ಕಾಶಿ ತೆರಳಿದ್ದರು. ದುರಾದೃಷ್ಟವಶಾತ್ ಪ್ರವಾಸ ಮುಗಿಸಿ 15 ಸಾವಿರ ಅಡಿಯಿಂದ ಇಳಿವಾಗ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.
ಉತ್ತರಾಖಂಡ ಟ್ರಕ್ಕಿಂಗ್: ಶಿರಸಿ ಮೂಲದ ಮಹಿಳೆ ಸಾವು
ಉತ್ತರಾಖಂಡ ಚಾರಣಿಗರು ಸಾವನ್ನಪ್ಪಿದ ಪ್ರಕರಣದಲ್ಲಿ ಶಿರಸಿ ಮೂಲದ ಮಹಿಳೆ ಕೂಡ ಸಾವನ್ನಪ್ಪಿದರು. ಪದ್ಮಿನಿ ಹೆಗಡೆ (35) ಮೃತ ದುರ್ದೈವಿ. ಶಿರಸಿ ಮೂಲದ ಪದ್ಮಿನಿ ಹೆಗಡೆ ಅವರು ಬೆಂಗಳೂರಲ್ಲಿ ಗೂಗಲ್ ಕಂಪನಿಯ ಉದ್ಯೋಗಿ ಆಗಿದ್ದರು. ಕಳೆದ ಮೇ 29ರಿಂದ ಜೂನ್ 7 ರವರೆಗೆ ಉತ್ತರಾಖಂಡದ ಭಟವಾಡಿ, ಮಲ್ಲಾ-ಸಿಲ್ಲಾ, ಕುಶಕಲ್ಯಾಣ, ಸಹಸ್ರ ತಾಲ್‌ಗೆ ಟ್ರಕ್ಕಿಂಗ್ ಮಾಡಲು ಇವರು ಅನುಮತಿ ಪಡೆದಿದ್ದರು.
ಪದ್ಮಿನಿ ಅವರು ಕಳೆದ ಜೂನ್ 4ರಂದು ಮುಂಬೈನಲ್ಲಿ ಇದ್ದ ತಾಯಿಗೆ ಕೊನೆಯ ಬಾರಿ ಸಂಪರ್ಕ ಮಾಡಿದ್ದರು. ಇದಾದ ಬಳಿಕ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಕುಟುಂಬಕ್ಕೆ ಲಭ್ಯವಾಗಿತ್ತು. ಇದೀಗ ಪದ್ಮಿನಿ ಹೆಗಡೆ ಅವರು ಮೃತದೇಹವೂ ಪತ್ತೆಯಾಗಿದೆ ಎನ್ನಲಾಗಿದೆ. ವಿಪತ್ತು ನಿರ್ವಹಣ ಪ್ರಾಧಿಕಾರ ಪದ್ಮಿನಿ ಹೆಗಡೆ ಅವರು ಚಾರಣದ ವೇಳೆ ಮೃತಪಟ್ಟಿರುವ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications