ಉಡುಪಿಯ ಕೋಟತಟ್ಟು ರಾಜ್ಯದ ಮೊದಲ ಕ್ಯಾಶ್ ಲೆಸ್ ಗ್ರಾಮ ಪಂಚಾಯಿತಿ

ಉಡುಪಿ, ಜನವರಿ. 18 : ಉಡುಪಿಯ ಕೋಟತಟ್ಟು ಗ್ರಾಮ ಪಂಚಾಯಿತಿ ಕರ್ನಾಟಕದ ಮೊದಲ ಕ್ಯಾಶ್ ಲೆಸ್ ಗ್ರಾಮ ಪಂಚಾಯಿತಿ ಆಗಲಿದೆ ಎಂದು ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ನಗದು ರಹಿತ ಸೇವೆಗೆ ಚಾಲನೆ ನೀಡಿದರು. ನೀರು, ಕಂದಾಯ ಸೇರಿದಂತೆ ಎಲ್ಲಾ ಶುಲ್ಕಗಳನ್ನು ಆನ್ ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ.

Kottathatu gets Karnataka's first cashless panchayat

ಕೋಟತಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1032 ಮನೆಗಳಿವೆ. ಈ ಪೈಕಿ 200 ಕುಟುಂಬಗಳು ಡೆಬಿಟ್ ಕಾರ್ಡ್ ಹೊಂದಿವೆ. ಬ್ಯಾಂಕ್ ಖಾತೆಗಳಿಲ್ಲದ 20 ಕುಟುಂಬದವರನ್ನು ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ಮಾಡಿ ನಗದು ರಹಿತ ವಹಿವಾಟಿನ ಬಗ್ಗೆ ಅರಿವು ಮೂಡಿಸಿದ್ದಾರೆ.

ಕುಟುಂಬ ಸದಸ್ಯರ ಹೆಸರಿನಲ್ಲಿ ಬ್ಯಾಂಕ್ ಖಾತೆ ಮಾಡಿಸಿ ಡೆಬಿಟ್ ಕಾರ್ಡ್ ನೀಡಲಾಗಿದೆ. ಕೋಟತಟ್ಟು ಗ್ರಾಮ ಪಂಚಾಯಿತಿ ವಾರ್ಷಿಕ ಆದಾಯ 20 ಲಕ್ಷ ರೂ.ಗಳು. ಇನ್ನು ಮುಂದೆ ಈ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ತೆರಿಗೆಯನ್ನು ನಗದು ರೂಪದಲ್ಲಿ ಸ್ವೀಕಾರ ಮಾಡಲಾಗುವುದಿಲ್ಲ.

ಎಲ್ಲಾವನ್ನು ಆನ್ ಲೈನ್ ಮೂಲಕವೇ ಪಾವತಿ ಮಾಡಬೇಕಾಗಿದೆ. ನೀರಿನ ತೆರಿಗೆ, ಕಂದಾಯ, ಕಟ್ಟಡ ನಿರ್ಮಾಣ ಪರವಾನಗಿ, ವ್ಯಾಪಾರ ಪರವಾನಗಿ ಮುಂತಾದವುಗಳನ್ನು ಇನ್ನುಮುಂದೆ ಆನ್ ಲೈನ್ ಮೂಲಕವೇ ಪಾವತಿ ಮಾಡಬೇಕಾಗಿದೆ.

ಈ ಮೂಲಕ ಕೋಟತಟ್ಟು ಗ್ರಾಮ ಪಂಚಾಯಿತಿ ರಾಜ್ಯದ ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+