ಜಾಲಿ ರೈಡ್ ಮೋಜಿಗೆ ಉಡುಪಿಯ ಯುವಕ ಬಲಿ
ಉಡುಪಿ, ಸೆಪ್ಟೆಂಬರ್ 25 : ಜಾಲಿ ರೈಡ್ ಮಾಡಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ಕುಂದಾಪುರ ತ್ರಾಸಿ ಬೀಚ್ ಬಳಿ ನಡೆದಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮೃತಪಟ್ಟ ಯುವಕನನ್ನು ಉಡುಪಿಯ ತಲ್ಲೂರು ನಿವಾಸಿ ಫ್ಲೆಮಿಂಗ್ ಸೊನಾಲ್ ಮೆಂಡೋನ್ಸಾ (20) ಎಂದು ಗುರುತಿಸಲಾಗಿದೆ. ಭಾನುವಾರ ತಡರಾತ್ರಿ ಸೊನಾಲ್ ಹೊಸ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ತನ್ನ ಸಹೋದರ ಸಂಬಂಧಿ ಜಾಯ್ಸ್ಟನ್ (18) ಜೊತೆ ಜಾಲಿ ರೈಡ್ ತೆರಳಿದ್ದ.

ಅತೀ ವೇಗದಲ್ಲಿ ಬೈಕ್ ಓಡಿಸಿದ್ದರಿಂದ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಇಬ್ಬರು ರಸ್ತೆ ಮೇಲೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೊನಾಲ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ.
ಸೊನಾಲ್ ಜೊತೆಯಲ್ಲಿದ್ದ ಜಾಯ್ ಸ್ಟನ್ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲದ ಕೆಎಂಸಿಗೆ ದಾಖಲು ಮಾಡಲಾಗಿದೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications