ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಜನಜೀವನ ಅಸ್ತವ್ಯಸ್ತ

ಉಡುಪಿ, ಸೆಪ್ಟೆಂಬರ್ 5: ಉಡುಪಿಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮುಂಗಾರಿನ ಕೊನೆಯಲ್ಲೂ ಪ್ರಾರಂಭದ ಮಳೆಯನ್ನು ನೆನಪಿಸುವಂತಿದೆ. ಇಂದು ಬೆಳಿಗ್ಗೆ ಗಾಳಿ ಮಳೆ ಬಿರುಸು ಪಡೆದಿದೆ.

ಕಳೆದ ಐದು ದಿನಗಳಿಂದಲೂ ನಿತ್ಯ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರು, ವಿದ್ಯಾರ್ಥಿಗಳು ಮತ್ತು ಪಾದಚಾರಿಗಳು ಈ ಮಳೆಯನ್ನು ನಿರೀಕ್ಷಿಸದೇ ಇದ್ದ ಕಾರಣ ಸಾಕಷ್ಡು ಒದ್ದಾಡಬೇಕಾಯಿತು. ಮಳೆಯ ಕಾರಣದಿಂದ ಕಳೆದ ಐದು ದಿನಗಳಿಂದ ಮೀನುಗಾರಿಕೆ ಚಟುವಟಿಕೆಗೂ ತೊಂದರೆಯಾಗಿದೆ.

Heavy Rain In Udupi Cause Disruption

ಪ್ರಾರಂಭದಲ್ಲಿದ್ದ ಈ ಋತುವಿನ ಮೀನುಗಾರಿಕೆ ಚಟುವಟಿಕೆ ತುಸು ನಿಧಾನಗೊಂಡಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಅಷ್ಟಮಿ, ಗಣೇಶ ಚತುರ್ಥಿ ಬಳಿಕ ಮಳೆ ಬಹುತೇಕ ಮುಗಿಯುತ್ತದೆ. ಆದರೆ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲೂ ಮಳೆ ಮುಂದುವರೆದಿದ್ದು, ಕರಾವಳಿಗರಲ್ಲಿ ಅಚ್ಚರಿಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+